ನವಶಕ್ತಿ ಯುವಕ ಮಂಡಲ(ರಿ) ಅರಸಮ್ಮಕಾನು ಸಂಘಟನೆ ವತಿಯಿಂದ ಆಶಕ್ತರಿಗೆ ನೆರವು

0
34

ಹೆಬ್ರಿ : ಆರ್ಡಿ ಸಮೀಪದ ಕೊಳಲಾಡಿಯಲ್ಲಿ ಇತ್ತೀಚೆಗೆ ನೆಡೆದ ರಿಕ್ಷಾ ಮತ್ತು ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇವಾಗ ಮನೆಯಲ್ಲಿ ಇದ್ದು ಮುಂದಿನ ಚಿಕಿತ್ಸೆಯ ನೆರವಿಗಾಗಿ ಮಡಾಮಕ್ಕಿ ಗ್ರಾಮದ ಬೆಪ್ದೆ ನಿವಾಸಿ ಸುಧಾಕರ ಶೆಟ್ಟಿ ಇವರಿಗೆ ಯುವಕ ಮಂಡಲದ ರಜತ ಸಂಭ್ರಮದ ಪ್ರಯುಕ್ತ ಹಮ್ಮಿಕೊಂಡ ಕಾರ್ಯಕ್ರಮಗಲ್ಲಿ ಒಂದಾದ ಆಶಕ್ತರಿಗೆ ನೆರವು ಯೋಜನೆಯಡಿಯಲ್ಲಿ Rs.10000 ಮೊತ್ತದ ಚೆಕ್ಕನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಪ್ರಶಾಂತ ಹೆಗ್ಡೆ ಕಾರ್ಯದರ್ಶಿ ಅರುಣ್ ಶೆಟ್ಟಿ, ಗೌರವ ಅಧ್ಯಕ್ಷರಾದ ಕೀರ್ತಿ ಶೆಟ್ಟಿ ಹಾಗೂ ಸದಸ್ಯರು ಹಾಜರಿದ್ದರು.

LEAVE A REPLY

Please enter your comment!
Please enter your name here