ರ್ಯಾಪಿಡೋದಿಂದ ಹೊಸ ಫುಡ್‌ ಡೆಲಿವರಿ ಆಪ್‌ ಲಾಂಚ್‌..!

0
9

ರ್ಯಾಪಿಡೋ ತನ್ನ ಸೇವೆಯನ್ನು ಮತ್ತಷ್ಟು ವಿಸ್ತರಿಸಿದ್ದು, ಬೆಂಗಳೂರಿನಾದ್ಯಂತ “ಓನ್ಲಿ” ಎಂಬ ಹೊಸ ಆಪ್‌ ಅನ್ನು ಆರಂಭಿಸಿದೆ.

ಭಾರತದ ಪ್ರಮುಖ ರೈಡ್‌-ಹೈಲಿಂಗ್‌ ಪ್ಲಾಟ್‌ಫಾರ್ಮ್‌ ಆಗಿರುವ ರ್ಯಾಪಿಡೋ ಇದೀಗ ಆನ್‌ಲೈನ್‌ ಫುಡ್‌ ಡೆಲಿವರಿ ಆಪ್‌ ಅನ್ನು ಆರಂಭಿಸಿದೆ. ‘Ownly’ ಎಂಬ ಹೆಸರಿನ ಆಪ್‌ ಇದಾಗಿದ್ದು, ಬೆಂಗಳೂರಿನಾದ್ಯಂತ ಅಧಿಕೃತವಾಗಿ ಲಾಂಚ್‌ ಮಾಡಲಾಗಿದೆ. ಇನ್ನು ಈ ಆಪ್‌ನ ವಿಶೇಷತೆಯೆಂದರೆ, ರೆಸ್ಟೋರೆಂಟ್‌ಗಳಿಗೆ ಯಾವುದೇ ಕಮಿಷನ್‌ ವಿಧಿಸುವುದಿಲ್ಲ.

ಈಗಾಗಲೇ ರಾಜ್ಯದ ಹಲವೆಡೆ ಸ್ವಿಗ್ಗಿ, ಜೊಮ್ಯಾಟೋ, ಕೆಎಫ್‌ಸಿ ಪ್ಲಾಟ್‌ಫಾರ್ಮ್‌ಗಳು ಕಾರ್ಯಚರಿಸುತ್ತದೆ. ಈ ಆಪ್‌ಗಳು ಪ್ರತೀ ಆರ್ಡರ್‌ಗೆ ರೆಸ್ಟೋರೆಂಟ್‌ಗಳಿಂದ ಪ್ರತೀ ಆರ್ಡರ್‌ 16% ರಿಂದ 30% ವರೆಗೆ ಕಮಿಷನ್‌ ತೆಗೆದುಕೊಳ್ಳುತ್ತದೆ. ಇದು ರೆಸ್ಟೋರೆಂಟ್‌ಗಳ ಮೇಲೆ ಪರಿಣಾಮ ಬೀರುವುದಲ್ಲದೇ, ತಮ್ಮ ಮೆನು ಬೆಲೆಯನ್ನೂ ಹೆಚ್ಚಿಸಬೇಕಾಗುತ್ತದೆ. ಕೆಲವೊಮ್ಮೆ ಲಾಭವೂ ಕಮ್ಮಿಯಾಗುತ್ತದೆ. ಆದರೆ ಓನ್ಲಿ ಆಪ್‌ ರೆಸ್ಟೋರೆಂಟ್‌ಗಳಿಗೆ ಯಾವುದೇ ಕಮಿಷನ್‌, ಲೀಸ್ಟಿಂಗ್‌ ಶುಲ್ಕ, ಪ್ಯಾಕೇಜಿಂಗ್‌ ಶುಲ್ಕ ವಿಧಿಸುವುದಿಲ್ಲ. ಬದಲಿಗೆ ಗ್ರಾಹಕರಿಂದ ಮಾತ್ರ ಡೆಲಿವರಿ ಶುಲ್ಕ ತೆಗೆದುಕೊಳ್ಳಲಾಗುತ್ತದೆ. ಇದರಿಂದ ಗ್ರಾಹಕರಿಗೆ ರೆಸ್ಟೋರೆಂಟ್‌ಗಳು ಆಫ್‌ಲೈನ್‌ ಮೆನು ಬೆಲೆಯಲ್ಲ ಆಹಾರವನ್ನು ವಿತರಿಸಬಹುದು ಮತ್ತು ಗ್ರಾಹಕರು ಕಡಿಮೆ ಬೆಲೆಯಲ್ಲಿ ಆರ್ಡರ್‌ ಮಾಡಬಹುದು.

ಓನ್ಲಿ ಆಪ್‌ಅನ್ನು 2025 ರಲ್ಲಿ ಮೊದಲು ಪರೀಕ್ಷೆಯ ದೃಷ್ಟಿಯಿಂದ ಲಾಂಚ್‌ ಮಾಡಲಾಯಿತು. ಕೋರಮಂಗಲ, ಎಚ್‌ಎಸ್‌ಆರ್‌ ಲೇಔಟ್‌ ಮತ್ತು ಬಿಟಿಎಂ ಲೇಔಟ್‌ನಂತಹ ನಗರಗಳಲ್ಲಿ ಒಂದು ವರ್ಷದಷ್ಟು ಪೈಲಟ್‌ ನಡೆಸಲಾಯಿತು. ಇದೀಗ ಮಾರ್ಚ್‌ 3, 2026ರಂದು ಬೆಂಗಳೂರಿನಾದ್ಯಂತ ಅಧಿಕೃತವಾಗಿ ಲಾಂಚ್‌ ಮಾಡಲಾಗಿದೆ.

ಈ ಓನ್ಲಿ ಆಪ್‌, ಗ್ರಾಹಕರು ಮತ್ತು ರೆಸ್ಟೋರೆಂಟ್‌ಗಳ ಅನುಕೂಲಕ್ಕಾಗಿ ಜಾರಿಗೆ ತರಲಾಗಿದೆ. ಈ ಆಪ್‌ ಆಹಾರದ ಬೆಲೆಯನ್ನು ಆಫ್‌ಲೈನ್‌ ರೆಸ್ಟೋರೆಂಟ್‌ ಬೆಲೆಯಲ್ಲೇ ಮಾರಾಟ ಮಾಡುವ ಉದ್ದೇಶವನ್ನು ಹೊಂದಿದೆ. ವರದಿಗಳ ಪ್ರಕಾರ, ಗ್ರಾಹಕರಿಗೆ ಈ ಆಪ್‌ನಲ್ಲಿ 15% ವರೆಗೆ ಕಮ್ಮಿ ಬೆಲೆಯಲ್ಲಿ ಫುಡ್‌ ಸಿಗಬಹುದು ಎನ್ನಲಾಗಿದೆ. ಮೊದಲಿಗೆ ಕಮ್ಮಿ ಬೆಲೆಯಲ್ಲಿ ಊಟ ನೀಡುವುದರ ಗುರಿ ಹೊಂದಿದೆ.

ಸದ್ಯ ಸ್ವಿಗ್ಗಿ, ಜೊಮ್ಯಾಟೋಗೆ ಟಕ್ಕರ್‌ ಕೊಡಲು ಓನ್ಲಿ ಆಪ್‌ ಲಾಂಚ್‌ ಆಗಿದ್ದು, ಮಾರುಕಟ್ಟೆಯಲ್ಲಿ ಇದು ಯಾವ ರೀತಿ ಸಂಚಲನ ಸೃಷ್ಟಿಸುತ್ತದೆ ಎಂದು ಕಾದು ನೋಡಬೇಕಿದೆ. ರೆಸ್ಟೋರೆಂಟ್‌, ಗ್ರಾಹಕರ ಅನುಕೂಲಕ್ಕಾಗಿ ಲಾಂಚ್‌ ಮಾಡಿದ ಓನ್ಲಿ ಆಪ್‌, ಝೀರೋ ಕಮಿಷನ್‌, ಕಡಿಮೆ ಬೆಲೆಯಿಂದಾಗಿ ಗ್ರಾಹಕರನ್ನು ಸೆಳೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here