ಮಳೆಹಾನಿ ತಡೆಗೋಡೆ ಕಾಮಗಾರಿಗೆ ವೇಗ ನೀಡಲು ಐವನ್ ಡಿ’ಸೋಜಾ ಸೂಚನೆ

0
34

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪರ‍್ಟ್ ವರ‍್ಡ್, ಕಂಟೋನ್ಮೆಂಟ್ ವರ‍್ಡ್, ಮಿಲಾಗ್ರೆಸ್ , ವೆಲೆನ್ಸಿಯಾ, ಕಂಕನಾಡಿ ಈ ವರ‍್ಡುಗಳಲ್ಲಿ ವಿಪರೀತ ಮಳೆಹಾನಿಯಿಂದ ಹಾನಿಗೊಂಡಂತಹ ತಡೆಗೋಡೆಗಳ ನಿರ್ಮಾಣಕ್ಕೆ ಮಂಜೂರಾಗಿದ್ದ ಅನುದಾನ ಸದ್ರಿ ಕಾಮಗಾರಿಯ ಸ್ಥಳ ವೀಕ್ಷಣೆ ಮತ್ತು ತ್ವರಿತ ಗತಿಯಲ್ಲಿ ಕಾಮಗಾರಿ ಮುಂದುವರಿಸಬೇಕೆಂದು ವಿಧಾನ ಪರಿಷತ್ ಶಾಸಕ ಐವನ್ ಡಿʼಸೋಜಾ ಅಧಿಕಾರಿಗಳಿಗೆ ನಿರ್ದೆಶನ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸುಮಾರು 10ಕೋಟಿ ವೆಚ್ಚದಲ್ಲಿ ನಿರ‍್ಮಾಣಗೊಳ್ಳಲಿರುವ ಮಳೆಹಾನಿಯಿಂದ ಹಾನಿಗೊಳಾದ ತಡೆಗೋಡೆಗಳು ಹಾಗೂ ಅದರಿಂದ ಉಂಟಾಗುವ ಪರಿಣಾಮವನ್ನು ಅದಷ್ಟು ಬೇಗನೆ ನಿರ‍್ವಹಿಸಬೇಕೆಂದು ಈಗಾಗಲೇ ಟೆಂಡರು ಪ್ರಕ್ರಿಯೆಯಲಿದ್ದು ಈ ಕಾಮಗಾರಿಯ ಬಗ್ಗೆ ಅಲ್ಲಿ ಇರುವ ಇನ್ನಿತರ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ಹೆಚ್ಚುವರಿ ಅನುದಾನದ ಅವಶ್ಯಕತೆ ಇದೆಯೇ? ಅಥವಾ ಸದ್ರಿ ಕಾಮಗಾರಿಯಿಂದ ಎಷ್ಟು ಜನರಿಗೆ ಪ್ರಯೋಜನವಾಗುತ್ತದೆ ಎಂದು ಐವನ್ ಡಿʼಸೋಜಾರವರು ಈ ಮೇಲೆ ತಿಳಿಸಿರುವ ಪ್ರದೇಶಗಳಿಗೆ ಭೇಟಿ ನೀಡಿ ಕಾಮಗಾರಿಗನ್ನು ನಡೆಯಬೇಕಾಗಿದ್ದ ಸ್ಥಳ ವಿಕ್ಷಣೆ ಮಾಡಿದರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಳಚರಂಡಿ ನೀರು ತೊಡುಗಳಲ್ಲಿ ಹರಿಯವುದರ ಬಗ್ಗೆ ಅನೇಕ ಸಾರ‍್ವಜನಿಕರು ದೂರಗಳನ್ನು ನೀಡಿದ್ದು, ಕಳೆದ ಅನೇಕ ರ‍್ಷಗಳಿಂದ ಈ ಸಮಸ್ಯೆ ಇದ್ದು, ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಿಕೊಡಬೇಕೆಂದು ಕೇಳಿಕೊಂಡರು.

ಇದೇ ರೀತಿ ನಗರ ಪಾಲಿಕೆಯಲ್ಲಿ ವಾಸಿಸುತ್ತಿರುವವರ ಅನೇಕ ಮನೆಗಳಿಗೆ ತೊಂದರೆಗಳಾಗುತ್ತಿದ್ದು ಮಳೆಗಾಲದಲ್ಲಿ ನೀರು ಮನೆಗಳಿಗೆ ತುಂಬಿ ಉಂಟಾಗುವ ಅಪಾಯ ಹಾಗೂ ಮುಂದೆ ಆಗುವ ನಷ್ಟ ಹಾಗೂ ಅಪಾಯದ ಬಗ್ಗೆ ಕೂಡ ಐವನ್ ಡಿʼಸೋಜಾರವರ ಗಮನಕ್ಕೆ ತಂದರು ಈ ಸಂರ‍್ಭದಲ್ಲಿ ಮಾತನಾಡಿದ ಐವನ್ ಡಿʼಸೋಜಾರವರು ಮಹಾನಗರ ಪಾಲಿಕೆಯಲ್ಲಿ ಹೆಚ್ಚು ಅನುದಾನ ಬಿಡುಗಡೆಗೊಳ್ಳಲು ಇತ್ತೀಚೆಗೆ ಮಹಾತ್ಮಗಾಂಧಿ ವಿಕಾಸ ಯೋಜನೆಯಡಿ 165 ಕೋಟಿ ಕಾಮಗಾರಿಗಳು ಈಗಾಗಲೇ ಪ್ರಾರಂಭಗೊಳ್ಳಲಿದ್ದು, ಅದೇ ರೀತಿ ಒಳಚರಂಡಿ ವ್ಯವಸ್ಥೆ ನಡೆಸಲು ನಾಲ್ಕು ಕೋಟಿ ರೂಪಾಯಿ 60 ವಾರ್ಡ್ಗಳಿಗೆ ಬಿಡುಗಡೆ ಮಾಡಲಾಗಿದ್ದು, ರಾಜ್ಯ ರ‍್ಕಾರವು ಈ ಬಗ್ಗೆ ಹೆಚ್ಚು ಗಮನ ಹರಿಸಿ ಕೆಲಸಗಳನ್ನು ನಿರ‍್ವಹಣೆ ಮಾಡುವಲ್ಲಿ ತಮ್ಮದೇ ಆದ ಪಾತ್ರವನ್ನು ನಿರ‍್ವಹಿಸಿದೆ ಅದೇ ರಿತಿ ಮುಂದೆ ನೀರಿನ ಸಮಸ್ಯೆಗಳು ಉಂಟಾಗದಂತೆ ಉಸ್ತುವಾರಿ ಸಚಿವರು ನೇತೃತ್ವದಲ್ಲಿ ಇಂದು ಸಭೆ ನಡೆಯಲಿದ್ದು, ಸಭೆಯಲ್ಲಿ ನೀರಿನ ಬಗ್ಗೆ ರ‍್ಚಿಸಿ, ನೀರಿನ ಸಮಸ್ಯೆ ಉಂಟಾಗದಂತೆ ಏನು ಕ್ರಮ ಕೈಗೊಳ್ಳಬಹುದು ಮತ್ತು ಸರಕಾರ ಈ ಬಗ್ಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಸಭೆಯನ್ನು ನಡೆಸಲಿದ್ದಾರೆ.

ಅದೇ ರೀತಿ ಮಹಾನಗರ ಪಾಲಿಕೆಯಲ್ಲಿ ಅಗಬೇಕಿದ್ದ ಕಾಮಗಾರಿಗಳ ಬಗ್ಗೆ ಉಸ್ತುವಾರಿ ಸಚಿವರು ಗಮನವನ್ನು ನೀಡಿ ಕೆಲಸ ಕರ‍್ಯಗಳ ಬಗ್ಗೆ ಪ್ರೋತ್ಸಾಹವನ್ನು ನೀಡಲಿದ್ದಾರೆ ಎಂದು ಐವನ್ ಡಿʼಸೋಜಾರವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಮೇಯರ್ ಶಶಿಧರ್ ಹೆಗಡೆ, ಮಾಜಿ ಕರ‍್ಪೊರೇಟರ್, ಸಂಶುದ್ಧೀನ್ ಕುದ್ರೋಳಿ, ಪ್ರೇಮ್ ಬಳ್ಳಾಳಬಾಗ್, ಚೇತನ್ ಕುಮಾರ್, ಮುಖಂಡರಾದ ಪದ್ಮನಾಭ ಅಮಿನ್, ಶಿವಪ್ಪ ಸಾಲಿಯಾನ್, ಮಂಜುಲಾ ನಾಯಕ್, ಡಿ.ಎಂ. ಮುಸ್ತಫಾ, ಅಬೀದ್, ರೂಪ ಚೇತನ್, ವೆಲ್ವಿನ್ ಕ್ಯಾಸ್ಟ್ಲಿನೋ, ಸರ‍್ಥ ಭಟ್, ಇಮ್ರಾನ್ ಎ.ಆರ್, ಡಿಂಪಲ್, ರವಿ ಹಾಗೂ ವಹಾಬ್ ಕುದ್ರೋಳಿ ಜೊತೆಗಿದ್ದರು.

LEAVE A REPLY

Please enter your comment!
Please enter your name here