ಸಸಿಹಿತ್ಲು : ಶ್ರೀ ಭಗವತೀ ಕ್ಷೇತ್ರದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ತೋರಣ, ಉಗ್ರಾಣ ಮುಹೂರ್ತ

0
22

ಮುಲ್ಕಿ :ಹಳೆಯಂಗಡಿ ಸಮೀಪದ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದಲ್ಲಿ ಮಾ.4ರಿಂದ 8ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ತೋರಣ ಮುಹೂರ್ತ ಹಾಗೂ ಉಗ್ರಾಣ ಮುಹೂರ್ತ ವಿಜೃಂಭಣೆಯಿಂದ ಮಾರ್ಚ್ 4 ಬೆಳಿಗ್ಗೆ 8:30 ರ ಸುಮಹೂರ್ತದಲ್ಲಿ ನಡೆಯಿತು.

ಬುಧವಾರ ಬೆಳಿಗ್ಗೆ 8:30 ಗಂಟೆಗೆ. ವೇದಮೂರ್ತಿ ಕೃಷ್ಣಮೂರ್ತಿ ಭಟ್ ಹೊಯ್ಗೆ ಗುಡ್ಡೆ ಹಾಗೂ ಶ್ರೀಪತಿ ಭಟ್, ವಿದ್ವಾನ್ ವೆಂಕಟೇಶ ತಂತ್ರಿ ಎಡಪದವು ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ವಿಶೇಷ ಪ್ರಾರ್ಥನೆ. ಋತ್ವಿಜರ ಸ್ವಾಗತ, ಮಹಾಪ್ರಾರ್ಥನೆ, ಪಂಚಗವ್ಯ, ಪುಣ್ಯಾಹ, ನಾಂದಿ, ಆರಣಿ ಮಂಥನ, ದ್ವಾದಶ ನಾರಿಕೇಳ ಗಣಯಾಗ, ತೋರಣ ಮುಹೂರ್ತ ನಡೆಯಿತು.

ಉಗ್ರಾಣ ಮುಹೂರ್ತದ ದೀಪ ಪ್ರಜ್ವಲನೆಯನ್ನು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಅರ್ಚಕ ವೇದಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣ ನೆರವೇರಿಸಿ ಆಶೀರ್ವಚನ ನೀಡಿದರು.

ಮುಖ್ಯ ಅತಿಥಿಗಳಾಗಿ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಹಾಗೂ ಪ್ರಧಾನ ಅರ್ಚಕ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ , ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ನರಸಿಂಹ ಭಟ್, ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ ಅರ್ಚಕ ವಾಸುದೇವ ಭಟ್, ಸಸಿಹಿತ್ಲು ಕದಿಕೆ ಮೊಗವೀರ ಸಭಾದ ಅಧ್ಯಕ್ಷ ಗಿರೀಶ್ ಶ್ರಿಯಾನ್, ಲೀಲಾದರ ಬಂಗೇರ ಸಸಿಹಿತ್ಲು ಪಟೇಲರ ಮನೆ, ಸುರತ್ಕಲ್ ಎನ್ಐಟಿಕೆ ಪ್ರಾಧ್ಯಾಪಕ ಶ್ರೀಕಾಂತ್ ರಾವ್, ಮೋಹನ್ ಶೆಟ್ಟಿಗಾರ್ ಸಸಿಹಿತ್ಲು, ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ವಾಮನ್ ಇಡ್ಯಾ , ಆಡಳಿತ ಮೊಕ್ತೇಸರ ಚಂದ್ರಶೇಖರ್ ಬೆಲ್ಚಡ,ಬ್ರಹ್ಮಕಲಶೋತ್ಸವ ಮುಂಬೈ ಸಮಿತಿ ಅಧ್ಯಕ್ಷ ವೇದ ಪ್ರಕಾಶ್ ಶ್ರಿಯಾನ್,ಪಾಕ ಶಾಸ್ತ್ರಜ್ಞ ವೆಂಕಟೇಶ್ ಭಟ್ ಪಾವಂಜೆ ಸಮಿತಿಯ ಪದಾಧಿಕಾರಿಗಳಾದ ಕಸ್ತೂರಿ ಪಂಜ ,ಈಶ್ವರ ಕಟೀಲ್,ವಿನೋದ್ ಸಾಲ್ಯಾನ್ ಬೆಳ್ಳಾಯರು, ರಮೇಶ್ ಬಂಗೇರ,ಸುರೇಶ್ ಬಂಗೇರ, ಚಂದ್ರಶೇಖರ ನಾಣಿಲ್, ದಿವಾಕರ ಸಾಮಾನಿ,ಸುನಿಲ್ ಆಳ್ವ ಗುರುರಾಜ್ ಮಲ್ಲಿಗೆಯಂಗಡಿ,
ಉಮೇಶ್ವಪಂಜ,ಕಿರಣ್ ಗುರಿಕಾರ, ದಯಾನಂದ ಮಾಡ ಎಕ್ಕಾರು, ದೊಡ್ಡಯ್ಯ ಮೂಲ್ಯ ಕಟೀಲು, ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here