ರೇಖಾ ಸುದೇಶ್ ರಾವ್ ಅಧ್ಯಕ್ಷೆಯಾಗಿರುವ, ಡಾ. ರವೀಂದ್ರ ಜೆಪ್ಪು ಗೌರವ ಅಧ್ಯಕ್ಷರಾಗಿ ಕನ್ನಡ ಕಾರ್ಯ ನಿರ್ವಹಿಸುತ್ತಿರುವ ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಕನ್ನಡ ಭವನ ರಜತ ಸಂಭ್ರಮ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಡಾ. ವಾಮನ್ ರಾವ್ ಬೇಕಲ್ -ಸಂಧ್ಯಾ ರಾಣಿ ದಂಪತಿಗಳಿಗೆ “ಕನ್ನಡ ಕಟ್ಟಾಳು “ವಿಶೇಷ ಗೌರವ ಪ್ರಶಸ್ತಿ ನೀಡಿ ಗೌರವಿಸಿದರು.
ಕಾರ್ಯಾಧ್ಯಕ್ಷ ಉಮೇಶ್ ರಾವ್ ಕುಂಬ್ಳೆ ಕನ್ನಡ ಭವನದ ಬಗ್ಗೆ, ವಾಮನ್ ರಾವ್ ಬೇಕಲ್ ಬಗ್ಗೆ ವಿಚಾರ ಮಂಡನೆ ಮಾಡಿದರು. ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಮಂಗಳೂರಿನ ಮುಂದಾಳು ಜೆ. ಕೆ. ರಾವ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಡಾ. ಎಚ್. ಪ್ರಭಾಕರ್ ರಾವ್,ವಿಶ್ವ ರಾಮಕ್ಷತ್ರಿಯ ಮಹಾಸಂಘ ಕಾರ್ಯಾಧ್ಯಕ್ಷ ಶ್ರೀನಿವಾಸ್ ಹೆಬ್ರಿ, ಡಾ. ರಾಜೇಶ್, ಡಾ. ಸತೀಶ್, ಪ್ರದೀಪ್ ಬೇಕಲ್, ಭಾಗವಹಿಸಿದರು.
ಸ್ವಾಗತ ಸಮಿತಿ ಅಧ್ಯಕ್ಷ ಡಾ. ಕೆ. ಏನ್ ವೆಂಕಟ್ರಮಣ ಹೊಳ್ಳ ಸ್ವಾಗತಿಸಿದರು. ಕನ್ನಡ ಭವನ ಕರ್ನಾಟಕ ರಾಜ್ಯ ಸಂಚಾಲಕ ಜಯಾನಂದ ಪೆರಾಜೆ ಧನ್ಯವಾದ ಸಮರ್ಪಿಸಿದರು. ನಗರ ಸಭಾ ಸದಸ್ಯರಾದ ಶಾರದಾ ಜೆ. ಪಿ. ನಗರ್, ರಾಮಕೃಷ್ಣ ಹೊಳ್ಳ ಉಪಸ್ಥಿತರಿದ್ದರು ಕಾರ್ಯದರ್ಶಿ ವಸಂತ್ ಕೆರೆಮನೆ ಕಾರ್ಯಕ್ರಮ ನಿರೂಪಿಸಿದರು.

