ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಬ್ರಹ್ಮಾವರ ಜೈಂಟ್ಸ್ ಮತ್ತು ಎಸ್‌ಎಂಎಸ್ ಪದವಿ ಕಾಲೇಜಿನ ಸಹಯೋಗದಲ್ಲಿ ಎಸ್‌ಎಂಎಸ್ ಆಡಿಟೋರಿಯಂನಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಮಾಜಕ್ಕೆ ಮಾದರಿಯಾದ ಮೂರು ಮಹಿಳೆಯರನ್ನು ಗುರುತಿಸಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಬ್ರಹ್ಮಾವರ ಜೈಂಟ್ಸ್ ಸಂಸ್ಥೆಯ ಅಧ್ಯಕ್ಷರಾದ ಅಣ್ಣಯ್ಯ ದಾಸ್, ನಿಕಟ ಪೂರ್ವ ಅಧ್ಯಕ್ಷರಾದ ವಿವೇಕಾನಂದ ಕಾಮತ್, ಸದಸ್ಯರಾದ ಪ್ರತಿಭಾ, ಕಾಲೇಜಿನ ಪ್ರಿನ್ಸಿಪಾಲ್ ಡಾ. ರಾಬರ್ಟ್ ರೋಡ್ರಿಗ್ಸ್, ವೈಸ್ ಪ್ರಿನ್ಸಿಪಾಲ್ ಡಾ. ವಿದ್ಯಾಲತಾ, ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮನಿಷಾ ಪೂಜಾರಿ ಅವರು ರಿಕ್ಷಾ ಚಾಲನೆ ವೃತ್ತಿಯಲ್ಲಿ ತಮ್ಮ ಜೀವನವನ್ನು ಸಾಗಿಸುತ್ತಿರುವ ಮಹಿಳೆಯಾಗಿದ್ದು, ಅಕ್ಕಣ್ಣಿ ಮರಕಾಲತಿ ಅವರು ಕೂಲಿ ಕೆಲಸದಲ್ಲಿ ತೊಡಗಿಸಿಕೊಂಡು ತಮ್ಮ ಕುಟುಂಬ ಜೀವನವನ್ನು ನಡೆಸುತ್ತಿರುವವರು ಹಾಗೂ ಶಶಿಕಲಾ ಅವರು ಕುಟುಂಬದ ಜವಾಬ್ದಾರಿಗಳನ್ನು ಹೊತ್ತು ಒಂದೇ ಮನೆಯಲ್ಲಿ 27 ಮಂದಿ ಇರುವ ತಮ್ಮ ಜಂಟಿ ಕುಟುಂಬವನ್ನು ಸಮರ್ಥವಾಗಿ ನಡೆಸಿಕೊಂಡು ಬರುತ್ತಿರುವ ಮಹಿಳೆಯಾಗಿದ್ದಾರೆ.
ಇಂತಹ ಶ್ರಮಜೀವಿ ಮತ್ತು ಆದರ್ಶ ಮಹಿಳೆಯರನ್ನು ಈ ಸಂದರ್ಭದಲ್ಲಿ ಗುರುತಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬ್ರಹ್ಮಾವರ ಜೈಂಟ್ಸ್ ಸಂಸ್ಥೆಯ ಅಧ್ಯಕ್ಷರಾದ ಅಣ್ಣಯ್ಯ ದಾಸ್ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನಿಕಟ ಪೂರ್ವ ಅಧ್ಯಕ್ಷರಾದ ವಿವೇಕಾನಂದ ಕಾಮತ್ ಅವರು ಕಾರ್ಯಕ್ರಮದ ಅಂಗವಾಗಿ ಹಿತನುಡಿಗಳನ್ನು ನುಡಿದರು. ಕಾಲೇಜಿನ ಪ್ರಿನ್ಸಿಪಾಲ್ ಡಾ. ರಾಬರ್ಟ್ ರೋಡ್ರಿಗ್ಸ್ ಅವರು ಸಹ ಉಪಸ್ಥಿತರಿದ್ದು ಎಲ್ಲರಿಗೂ ಶುಭಾಶಯಗಳನ್ನು ತಿಳಿಸಿದರು.
ಡಾ. ವಿದ್ಯಾಲತಾ ಅವರು ಸಭೆಯ ಎಲ್ಲಾ ಅತಿಥಿಗಳನ್ನು ಸ್ವಾಗತಿಸಿ, ಕೊನೆಯಲ್ಲಿ ಎಲ್ಲರನ್ನು ವಂದಿಸಿ ಕೃತಜ್ಞತೆ ಸಲ್ಲಿಸಿದರು. ಜೈoಟ್ಸ್ ಸದಸ್ಯರುಗಳಾದ ಪ್ರಸನ್ನ ಕಾರಂತ್, Gayathri ಮತ್ತು DA milton olivera ಉಪಸ್ಥಿತರಿದ್ದರು.

