ಮೂಡುಬಿದಿರೆ ತಾಲೂಕಿನ ಅಳಿಯೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಗ್ರಾಹಕ ಸಂಘವುಸರ್ಕಾರಿ ಪ್ರೌಢಶಾಲೆ, ಅಳಿಯೂರು ಇಲ್ಲಿನ ಗ್ರಾಹಕ ಸಂಘವು ಶಾಲೆಯ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಮೇಳವನ್ನು ಆಯೋಜಿಸಿತ್ತು. ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನವನ್ನು ಬೆಳೆಸುವ ಹಾಗೂ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಹಣದ ವ್ಯವಹಾ ರ ನಡೆಸುವ ಗಣಿತೀಯ ಹಾಗೂ ವೃತ್ತಿಪರ ಚಿಂತನೆ ಬೆಳೆಸುವ ಉದ್ದೇಶದೊಂದಿಗೆ ಈ ಕಾರ್ಯಕ್ರಮ ರೂಪುಗೊಂಡಿತ್ತು.

ಈ ಮೇಳದಲ್ಲಿ 8ನೇ ಹಾಗೂ 9ನೇ ತರಗತಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರ 32 ತಂಡಗಳು ಭಾಗವಹಿಸಿದ್ದವು. ವಿದ್ಯಾರ್ಥಿಗಳೇ ನಿರ್ವಹಿಸಿದ ಮಳಿಗೆಗಳಲ್ಲಿ ಮನೆಯಲ್ಲೇ ಬೆಳೆದ ತರಕಾರಿ, ಸೊಪ್ಪು, ಪಲ್ಲೆಗಳು, ಹಣ್ಣು ಹಂಪಲು, ಗೃಹೋಪಯೋಗಿ ವಸ್ತುಗಳು ಫ್ಯಾನ್ಸಿ ಹಾಗೂ ಅಲಂಕಾರದ ವಸ್ತುಗಳು, ಸೀರೆ, ಚೂಡೀದಾರದಂತಹ ಉಡುಪುಗಳು, ಲೇಖನಾ ಸಾಮಾಗ್ರಿ, ಅಕ್ವೇರಿಯಂ ಮೀನುಗಳು ಹೀಗೆ ವೈವಿಧ್ಯಮಯ ಮತ್ತು ವಿಶೇಷವಾದ ದಿನನಿತ್ಯ ಬಳಕೆಯ ವಸ್ತುಗಳನ್ನು ವಿದ್ಯಾರ್ಥಿಗಳು ಮಾರಾಟ ಮಾಡಿದರು. ವಿದ್ಯಾರ್ಥಿಗಳು ತಮ್ಮ ಸ್ವಂತ ಬ್ರ್ಯಾಂಡ್ ರಚಿಸಿ ವಸ್ತುಗಳನ್ನು ಮಾರಾಟ ಮಾಡಿದ್ದು, ಹಣ ವ್ಯವಹಾರಕ್ಕೆ ಕ್ಯೂ-ಅರ್ ಕೋಡ್ ಬಳಕೆ ಮಾಡಿದ್ದು, ಸೃಜನಾತ್ಮಕ ರೀತಿಯಲ್ಲಿ ದರ ಪಟ್ಟಿಯನ್ನು ಪ್ರಸ್ತುತ ಪಡಿಸಿದ್ದು ವಿದ್ಯಾರ್ಥಿಗಳಲ್ಲಿರುವ ಆಧುನಿಕ ವ್ಯಾಪಾರ ತಂತ್ರದ ಅರಿವನ್ನು ಪ್ರತಿಫಲಿಸುತ್ತಿತ್ತು.
ಗ್ರಾಹಕ ಸಂಘದ ಸಂಚಾಲಕ ಡಾ. ಆನಿ ಡಿಂಪಲ್ ಕ್ಯಾಸ್ತಲಿನೊರವರು ಕಾರ್ಯಕ್ರಮವನ್ನು ನಿರೂಪಿಸಿ ಎಲ್ಲರನ್ನು ಸ್ವಾಗತಿಸಿದರು. ಮುಖ್ಯ ಶಿಕ್ಷಕರಾದ ಪದ್ಮಿನಿ, ಶಿಕ್ಷಕರುಗಳಾದ ವಿದ್ಯಾ ನಾಯಕ್, ವಿದ್ಯಾ ಟಿ, ಮಂಜುಳಾ, ಹಾಜರಿದ್ದರು.

ಸಾಮಾಜಿಕ ಕಾರ್ಯಕರ್ತ ರುಕ್ಕಯ್ಯ ಪೂಜಾರಿ, ರಂಜನಾರವರು ತಯಾರಿಸಿದ ಕಲಾಕೃತಿಯನ್ನು ಅನಾವರಣ ಗೊಳಿಸುವುದರ ಮೂಲಕ ಮೆಟ್ರಿಕ್ ಮೇಳವನ್ನು ಉದ್ಘಾಟಿಸಿ, ಶುಭಹಾರೈಸಿದರು. ಅತಿಥಿಗಳಾಗಿ ಕೋಟಿ ಚೆನ್ನಯ ಸಂಘಟನೆಯ ಸ್ಥಾಪಕ ಅಧ್ಯಕ್ಷ ವಿಶ್ವನಾಥ್ ಕೋಟ್ಯಾನ್, ಎಸ್. ಡಿ. ಎಮ್. ಸಿಯ ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಕುಮಾರ್, ಲಕ್ಷ್ಮಣ್ ಸುವರ್ಣ, ಶುಭಕರ್, ಹಿ. ಪ್ರಾ. ಶಾಲೆಯ ಮುಖ್ಯಶಿಕ್ಷಕ ವಿನುತ, ಮಾರ್ಗರೇಟ್, ಲೋಕೇಶ್, ಗಣೀಶ್, ಯಶೋಧ, ಆಶಾಲತಾ, ಸುಶೀಲ, ಪ್ರತಿಮ, ಜಯಶ್ರೀ, ಸುಮಿತ್ರ, ಕರುಣಾಕರ್, ಭೋಜ, ಮಣಿತ, ವಿನೋದ, ಅಲ್ಫೀಯ, ತೇಜಶ್ರೀ, ನಿಷ, ಸುಚಿತ್ ಹಾಗೂ ಭಾಸ್ಕರ್ ಹಾಜರಿದ್ದರು. ಶಾಲೆಯ ಎಸ್. ಡಿ. ಎಮ್. ಸಿ ಅಧ್ಯಕ್ಷ ರವೀಂದ್ರ ಕಾರ್ಯಕ್ರಮ ಸಂಘಟಿಸಿದರು. ಪೋಷಕರು ಹಾಗೂ ಊರಿನವರು ಕಾರ್ಯಕ್ರಮದಲ್ಲಿ ಸಂಭ್ರಮದಿಂದ ಭಾಗವಹಿಸಿದ್ದರು.
ವರದಿ ರಾಯಿ ರಾಜ ಕುಮಾರ
.

