ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು : ‘ಧುರಂಧರ್’ ಸಿನಿಮಾ 100 ದಿನ ಪೂರೈಕೆ

0
62

ಕೋವಿಡ್ ನಂತರ 100 ದಿನ ಪೂರೈಸಿದ ಏಕೈಕ ಚಿತ್ರ ‘ಧುರಂಧರ್’ ಹೊಸ ದಾಖಲೆ ಬರೆದ್ದಿದ್ದು , ಥಿಯೇಟರ್‌ಗಳಲ್ಲಿ ಯಶಸ್ವಿ ಪ್ರದರ್ಶನ ಮುಂದುವರೆಸಿರುವ ಇದರ ಸೀಕ್ವೆಲ್ ‘ಧುರಂಧರ್ 2’ ಇದೇ ಮಾರ್ಚ್ 19ಕ್ಕೆ ತೆರೆ ಕಾಣಲಿದೆ. ಮೊದಲ ಭಾಗ ಒಟಿಟಿಯಲ್ಲಿದ್ದರೂ ಥಿಯೇಟರ್‌ಗಳಲ್ಲಿ ಶತದಿನೋತ್ಸವ ಆಚರಿಸಿ, ಸೀಕ್ವೆಲ್ ಜೊತೆಗೇ ಪ್ರದರ್ಶನಗೊಳ್ಳುತ್ತಿರುವುದು ಒಂದು ಅಪರೂಪದ ವಿದ್ಯಮಾನ.

‘ಧುರಂಧರ್ 2’ ಸಿನಿಮಾ ರಿಲೀಸ್​​​ಗೆ ಇನ್ನು ಒಂದು ವಾರ ಮಾತ್ರ ಬಾಕಿ ಇದೆ. ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾತುರರಾಗಿದ್ದಾರೆ. ಮಾರ್ಚ್ 18ರಂದು ಸಂಜೆ 5 ಗಂಟೆಗೆ ಪ್ರೀಮಿಯರ್ ಶೋಗಳು ಆರಂಭ ಆಗುತ್ತಿದೆ. ಮಾರ್ಚ್ 19ರಂದು ಸಿನಿಮಾ ಅಧಿಕೃತವಾಗಿ ತೆರೆಗೆ ಬರುತ್ತಿದೆ. ಈ ಚಿತ್ರದ ಟಿಕೆಟ್​​​ಗಳು ಸುಮಾನಿ ರೀತಿಯಲ್ಲಿ ಬುಕ್ ಆಗುತ್ತಿದೆ. ಮಾರ್ಚ್ 12ರಂದು ‘ಧುರಂಧರ್’ ರೀ-ರಿಲೀಸ್ ಆಗಿದೆ ಎಂಬುದು ಮತ್ತೊಂದು ವಿಶೇಷ. ಈ ಮಧ್ಯೆ ‘ಧುರಂಧರ್’ ಸಿನಿಮಾ ಹೊಸ ದಾಖಲೆ ಒಂದನ್ನು ಬರೆದಿದೆ. ಥಿಯೇಟರ್​​ ಅಲ್ಲಿ ಸಿನಿಮಾ 100 ದಿನವನ್ನು ಪೂರ್ಣಗೊಳಿಸುತ್ತಿದೆ.

ಸಾಮಾನ್ಯವಾಗಿ ಸಿನಿಮಾ ಒಟಿಟಿಗೆ ಕಾಲಿಟ್ಟ ಬಳಿಕ ಚಿತ್ರ ಥಿಯೇಟರ್​​​ನಿಂದ ಕಾಲ್ಕೀಳುತ್ತವೆ. ಆದರೆ ‘ಧುರಂಧರ್’ ಸಿನಿಮಾ ವಿಷಯದಲ್ಲಿ ಆ ರೀತಿ ಆಗಿಲ್ಲ. ಈ ಚಿತ್ರವನ್ನು ಒಟಿಟಿ ಜೊತೆಗೆ ಥಿಯೇಟರ್​​​​​ನಲ್ಲೂ ವೀಕ್ಷಿಸಿದ್ದಾರೆ ಅನ್ನೋದು ವಿಶೇಷ. ಅಚ್ಚರಿಯ ವಿಷಯ ಎಂದರೆ ವಿಶ್ವಾದ್ಯಂತ ಸಾವಿರ ಪರದೆಗಳಲ್ಲಿ ಈ ಚಿತ್ರ ರನ್ ಆಗುತ್ತಿದ್ದು, 1250 ಶೋಗಳನ್ನು ಚಿತ್ರಕ್ಕೆ ನೀಡಲಾಗಿದೆ.

ಇನ್ನು, ಸೀಕ್ವೆಲ್ ರಿಲೀಸ್ ಸಂದರ್ಭದಲ್ಲಿ ಮೊದಲ ಪಾರ್ಟ್ ರನ್ ಆಗುತ್ತಿರುವುದು ಇದೇ ಮೊದಲು ಎಂದು ಹೇಳಲಾಗಿದೆ. ‘ಧುರಂಧರ್’ ರಿಲೀಸ್ ಆದ ಬಳಿಕ ‘ಧುರಂಧರ್ 2’ ತುಂಬಾನೇ ಕಡಿಮೆ ಅವಧಿಯಲ್ಲಿ ರಿಲೀಸ್ ಆಗುತ್ತಿದೆ. ಇದು ಕೂಡ ಈ ಹೊಸ ದಾಖಲೆ ನಿರ್ಮಿಸಲು ಕಾರಣವಾಗಿದೆ.

LEAVE A REPLY

Please enter your comment!
Please enter your name here