ಮುಲ್ಕಿ : ತಾಲೂಕು ಆಡಳಿತ ಕೇಂದ್ರ ಪ್ರಜಾ ಸೌಧ ಮಾ.14 ರಂದು ಲೋಕಾರ್ಪಣೆ-ಉಮಾನಾಥ ಕೋಟ್ಯಾನ್

0
17

ಮುಲ್ಕಿ : ದ.ಕ.ಜಿಲ್ಲಾಡಳಿತ ಮತ್ತು ಕರ್ನಾಟಕ ಗೃಹ ಮಂಡಳಿ, ಮಂಗಳೂರುನ ಸಂಯುಕ್ತ ಆಶ್ರಯದಲ್ಲಿ ಮುಲ್ಕಿ ಕಾರ್ನಾಡಿನ ಗೇರುಕಟ್ಟೆಯಲ್ಲಿ 31,600 ಚದರ ವಿಸ್ತೀರ್ಣವಿರುವ ಸುಮಾರು 10 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಗೊಂಡ ಪ್ರಜಾ ಸೌಧ , ತಾಲ್ಲೂಕು ಆಡಳಿತ ಕೇಂದ್ರದ ಉದ್ಘಾಟನೆ ಮಾರ್ಚ್ 14 ರಂದು ನಡೆಯಲಿದೆ ಎಂದು ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಅವರು ನೂತನವಾಗಿ ಉದ್ಘಾಟನೆಗೊಳ್ಳಲಿರುವ ಪ್ರಜಾಸೌಧ ಕಟ್ಟಡದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡರವರು ನೂತನ ಕಟ್ಟಡ ಉದ್ಘಾಟಿಸಲಿದ್ದಾರೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಜಿಲ್ಲಾಧಿಕಾರಿ ದರ್ಶನ್ ಎಚ್ ವಿ ಹಾಗೂ ವಿವಿಧ ಕ್ಷೇತ್ರದ ವಿಧಾನಸಭಾ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಅವರು ಮಾತನಾಡಿ ರಾಜ್ಯದ ಮಾಜೀ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜೀ ಸಚಿವ ಕೆ ಅಭಯ ಚಂದ್ರ ಜೈನ್, ಹಿರಿಯರಾದ ಗುಂಡಾಲುಗುತ್ತು ಮಹಾಬಲ ಶೆಟ್ಟಿ, ಮಾಜೀ ಕಸಾಪ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು ಮತ್ತಿತರರು ಹೋರಾಟ ಹಾಗೂ ಪ್ರಯತ್ನದ ಫಲವಾಗಿ ಇಂದು ಮುಲ್ಕಿ ತಾಲೂಕು ರಚನೆಯಾಗಿ ಭವ್ಯವಾದ ತಾಲೂಕು ಆಡಳಿತ ಸೌಧ ನಿರ್ಮಾಣವಾಗಿದೆ. ಮುಲ್ಕಿ ತಾಲೂಕಿಗೆ ಎಲ್ಲಾ ಸವಲತ್ತುಗಳು ಸಿಗಬೇಕು ಎಂಬ ಹಿರಿಯರ ಕನಸು ನನಸಾಗಿದೆ.

ಶಾಸಕರ ಕಛೇರಿ,ಸಬ್ ರಿಜಿಸ್ಟರ್ ಕಚೇರಿ, ಸಹಿತ ಎಲ್ಲಾ ಕಚೇರಿಗಳು ಒಂದೇ ಸೂರಿನಡಿ ಬರುವಂತೆ ತಾಲೂಕು ಆಡಳಿತ ಸೌಧದಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದರು
ನೂತನ ತಾಲೂಕು ಆಡಳಿತ ಸೌಧ ಕಟ್ಟಡದ ಉದ್ಘಾಟನೆಯ ಪೂರ್ವಭಾವಿಯಾಗಿ ಶುಕ್ರವಾರ ರಾತ್ರಿ ಪುರೋಹಿತರ ನೇತೃತ್ವದಲ್ಲಿ ವಾಸ್ತು ಪೂಜೆ ವಾಸ್ತು ಹೋಮ ನಡೆಯಲಿದೆ ಎಂದರು.
ಸುಮಾರು 8 ಕೋಟಿ ವೆಚ್ಚದಲ್ಲಿ ಕಾರ್ನಾಡ್ ರಸ್ತೆ ಅಗಲೀಕರಣ ಕಾಂಕ್ರಿಟೀಕರಣ , ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಮುಲ್ಕಿ ತಾಲೂಕು ಅಭಿವೃದ್ಧಿಯ ನಿಟ್ಟಿನಲ್ಲಿ ಮುಲ್ಕಿಯಿಂದ ಕಾರ್ನಾಡ್ ಜಂಕ್ಷನ್ ವರೆಗೆ ರಸ್ತೆ ಅಗಲೀಕರಣದ ಜೊತೆಗೆ ಕಾಂಕ್ರೀಟೀಕರಣ ಹಾಗೂ ಕಾರ್ನಾಡ್ ಜಂಕ್ಷನ್ ನಿಂದ ನೂತನ ಆಡಳಿತ ಸೌಧವಿರುವ ಗೇರುಕಟ್ಟೆ ಜಂಕ್ಷನ್ ವರೆಗೆ ದ್ವಿಪಥ ರಸ್ತೆ ಕಾಮಗಾರಿ ನಡೆಸಲಾಗುವುದು ಎಂದರು.

ನ್ಯಾಯಾಲಯ, ಅಗ್ನಿಶಾಮಕ ದಳ ಘಟಕ ಶೀಘ್ರ

ಮುಲ್ಕಿ ತಾಲೂಕಿಗೆ ಶೀಘ್ರವಾಗಿ ನ್ಯಾಯಾಲಯ ಹಾಗೂ ಅಗ್ನಿಶಾಮಕ ದಳ ಘಟಕ ಅನುಷ್ಠಾನಗೊಳಿಸಲಾಗುವುದು. ತಾಲೂಕಿಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಯತ್ನಿಸಲಾಗುವುದು, ಮೂಡದಲ್ಲಿ ಕನ್ವರ್ಷನ್ ಸಮಸ್ಯೆ ಬಗ್ಗೆ ಅಧಿಕಾರಿಗಳ ಜೊತೆಗೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಮುಲ್ಕಿ ತಹಶೀಲ್ದಾರ್ ಶ್ರೀಧರ ಮುಂದಲಮನಿ ಮಾತನಾಡಿ ಮಾರ್ಚ್ 14ರಂದು ಮುಲ್ಕಿ ತಾಲೂಕಿನ ನೂತನ ಆಡಳಿತ ಸೌಧದ ಪ್ರಜಾಸೌಧದ ಲೋಕಾರ್ಪಣೆ ಜೊತೆಗೆ ರಾಜ್ಯ ಕಂದಾಯ ಸಚಿವ ಕೃಷ್ಣಬೈರೇಗೌಡ ನೇತೃತ್ವದಲ್ಲಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹಾಗೂ ಶಾಸಕ ಉಮಾನಾಥ ಕೋಟ್ಯಾನ್ ಉಪಸ್ಥಿತಿಯಲ್ಲಿ ಮುಲ್ಕಿ ಮೂಡುಬಿದ್ರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 300 ಮಂದಿಗೆ 94ಸಿಸಿ ಹಾಗೂ ಹಕ್ಕು ಪತ್ರ ವಿತರಿಸಲಾಗುವುದು.ಹಾಗೂ ನೂತನ ಆಡಳಿತ ಸೌಧದಲ್ಲಿ ಆದಷ್ಟು ಬೇಗ ಎಲ್ಲ ಇಲಾಖೆಗಳು ಕಾರ್ಯನಿರ್ವಹಿಸಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಪ ತಹಶಿಲ್ದಾರ್ ದಿಲೀಪ್ ರೋಡ್ಕರ್, ಕರ್ನಾಟಕ ಗೃಹ ಮಂಡಳಿಯ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಸಹನಾ, ಮತ್ತಿತರರು ಉಪಸ್ಥಿತರಿದ್ದರು
ತಾಲೂಕು ಕಂದಾಯ ಇಲಾಖೆಯ ಅಧಿಕಾರಿ ಮೋಹನ್ ಸ್ವಾಗತಿಸಿ ನಿರೂಪಿಸಿದರು.

LEAVE A REPLY

Please enter your comment!
Please enter your name here