ಸರಪಾಡಿ ಸರಕಾರಿ ಪ್ರೌಢ ಶಾಲೆ ಉಚಿತ ಟ್ಯೂಷನ್ ಕ್ಲಾಸ್ ತರಬೇತಿಯ ಸಮಾರೋಪ ಕಾರ್ಯಕ್ರಮ

0
18

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ( ರಿ.) ಬಂಟ್ವಾಳ ತಾಲೂಕಿನ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಸರಪಾಡಿ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ ಮೂರು ತಿಂಗಳ ಉಚಿತ ಟ್ಯೂಷನ್ ಕ್ಲಾಸ್ ತರಬೇತಿಯ ಸಮಾರೋಪ ಮಾರ್ಚ್ 13 ಶುಕ್ರವಾರ ನಡೆಯಿತು.

ಸರಪಾಡಿ ಒಕ್ಕೂಟದ ಅಧ್ಯಕ್ಷರಾದ ಗಿರೀಶ್ ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ವಹಿಸಿದ್ದರು.

ಶಾಲಾ ಮುಖ್ಯ ಶಿಕ್ಷಕಿ ವಿನೋಲಾ ಮಾತಾಡಿ ಹಳ್ಳಿಯ ಪ್ರದೇಶದ ಸರಕಾರಿ ಶಾಲೆಗಳಲ್ಲಿ ಉಚಿತ ಟ್ಯೂಷನ್ ಕ್ಲಾಸನ್ನು ಹಮ್ಮಿಕೊಂಡಿರುವುದರಿಂದ ಗ್ರಾಮೀಣ ಪ್ರದೇಶದ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಸಹಕಾರಿಯಾಗಿದೆ. ವೀರೇಂದ್ರ ಹೆಗ್ಡೆ ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರು ಗ್ರಾಮಭಿವೃದ್ಧಿ ಯೋಜನೆ ಮೂಲಕ ಮಾಡುವ ಕಾರ್ಯಕ್ರಮಗಳು ಸಮಾಜಕ್ಕೆ ಮಾದರಿ ಎಂದರು..

ಈ ಸಂದರ್ಭ ವಲಯದ ಮೇಲ್ವಿಚಾರಕ ಭಾಸ್ಕರ್, ಜನಜಾಗೃತಿ ಅಧ್ಯಕ್ಷರಾದ ಪುರುಷೋತ್ತಮ್, ತಾಲೂಕಿನ ಜ್ಞಾನವಿಕಾಸ ಸಮನ್ವಧಿಕಾರಿ ಸವಿತಾ, ಟ್ಯೂಷನ್ ಶಿಕ್ಷಕಿ ಹರ್ಷಿತ, ಸೇವ ಪ್ರತಿನಿಧಿ ಮೋಹಿನಿ,ಜ್ಞಾನವಿಕಾಸ ಕೇಂದ್ರದ ಸದಸ್ಯರು, ಹಾಗೂ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here