ಆನೆಕೆರೆಯ ಕುಡಿಯುವ ನೀರಿನ ಬಾವಿಯಲ್ಲಿ ಸತ್ತ ಹಾವು ಮೀನು

0
14

ಕಾರ್ಕಳ ಪುರಸಭಾ ವ್ಯಾಪ್ತಿಯ ಆನೆಕೆರೆಯಲ್ಲಿರುವ ಕುಡಿಯುವ ನೀರಿನ ಬಾವಿಯಲ್ಲಿ ಹಾವು ಮೀನು(ಪೂ ಮೀನು) ಸತ್ತು ದಿನ ಕಳೆದರೂ ಗೊತ್ತಾಗದಿರುವುದು ಆಶ್ಚರ್ಯ ಸಂಗತಿ. ಆನೆಕೆರೆ ಬಸದಿಗೆ ಬರುವ ನೂರಾರು ಯಾತ್ರಾರ್ಥಿಗಳು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಸ್ಥಳೀಯ ಟೆಂಪೋ ಚಾಲಕರು ಕಾರ್ಕಳ ಪುರಸಭೆಯ ಮಾಜಿ ಸದಸ್ಯ ಪ್ರಕಾಶ್ ರಾವ್ ಅವರಿಗೆ ಫೋನಾಯಿಸಿ ಸ್ಥಳೀಯ ಪರಿಸ್ಥಿತಿಯನ್ನು ತಿಳಿ ಹೇಳಿದ ಕೂಡಲೇ, ಅವರು ಕುಡಿಯುವ ನೀರಿನ ಅವಶ್ಯಕತೆಯನ್ನು ಅರಿತು ಬಾವಿಯ ಬಗ್ಗೆ ಸ್ಪಂದಿಸಿ ಕಾರ್ಯ ಪ್ರವರ್ತರಾಗಿ ಬಾವಿಯಲ್ಲಿ ಸತ್ತು ಹೋದ ಮೀನನ್ನು ಮೇಲಕ್ಕೆ ತೆಗೆದು ಮಾನವೀಯತೆ ಮೆರೆದಿರುತ್ತಾರೆ.

ಪುರಸಭೆ ನಾಳೆ ಎನ್ನುವ ಮಾತು ಬಿಟ್ಟರೆ ಈ ದಿನ ಯಾವುದೇ ಕಾರ್ಯವನ್ನು ಮಾಡಲು ಎಚ್ಚೆತ್ತುಕೊಳ್ಳಲಿಲ್ಲ. ರಾತ್ರಿ ಹೊತ್ತು ಪುರಸಭಾ ಕಾರ್ಮಿಕರಾದ ಆನಂದ ಬಂಡಿಮಠ ಇವರ ಜೊತೆ ಸೇರಿ ಮಾಡಿದ ಕಾರ್ಯ ಪ್ರಶಾಂನಿಯ.

ಸ್ಥಳೀಯ ಆಡಳಿತದ ಅಧಿಕಾರಿ ವರ್ಗದವರು ಹೆಡ್ ಕ್ವಾಟ್ರಸ್ ನಲ್ಲಿ ಇದ್ದಾರೆ ಸ್ಥಳೀಯ ಸಮಸ್ಯೆಗಳನ್ನು ಕೂಡಲೇ ಸರಿಪಡಿಸುವ ವ್ಯವಸ್ಥೆ ಮಾಡಬಹುದು ಇಲ್ಲದಿದ್ದರೆ ಜನತೆಯ ಮೇಲೆ ದುಷ್ಪರಿಣಾಮ ಬೀರುವಂತಾಗುತ್ತದೆ. ಇನ್ನಾದರೂ ಇಂತಹ ಕಾರ್ಯಗಳಿಗೆ ಸ್ಪಂದಿಸುವಂತಹ ಕೆಲಸ ಪುರಸಭೆಯಿಂದ ಆಗಬೇಕಾಗಿದೆ ಎಂದು ಸ್ಥಳೀಯರ ಬಾಯಿಂದ ಮಾತುಗಳು ಈ ವೇಳೆ ಕೇಳಿ ಬಂದಿದೆ.

LEAVE A REPLY

Please enter your comment!
Please enter your name here