ರಾಮಕೃಷ್ಣ ಮಠ, ಮಂಗಳೂರಿನಲ್ಲಿ ‘ದಾಸ-ಗಾನ-ಚಿಂತನ’ ಕಾರ್ಯಕ್ರಮ ಯಶಸ್ವಿ

0
10

ಮಂಗಳೂರು : ರಾಮಕೃಷ್ಣ ಮಠ, ಮಂಗಳೂರಿನಲ್ಲಿ ಅಮೃತ ವರ್ಷ (75ನೇ ವರ್ಷದಆಚರಣೆ) ಅಂಗವಾಗಿ “ದಾಸ-ಗಾನ-ಚಿಂತನ” ಎಂಬ ಭಕ್ತಿಮಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.ಕಾರ್ಯಕ್ರಮವು ಸಂಜೆ 5.00 ರಿಂದ 5.30 ರವರೆಗೆ ಉದ್ಘಾಟನೆ ಹಾಗೂ ಸಭಾ ಕಾರ್ಯಕ್ರಮದಿಂದ ಪ್ರಾರಂಭವಾಯಿತು.

ಈ ಸಂದರ್ಭದಲ್ಲಿ ಬೆಂಗಳೂರು ಬಸವನಗುಡಿರಾಮಕೃಷ್ಣ ಮಠದಅಧ್ಯಕ್ಷರಾಗಿರುವಸ್ವಾಮಿ ನಿತ್ಯಸ್ಥಾನಂದಜಿಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಅಧ್ಯಕ್ಷತೆಯನ್ನುಸ್ವಾಮಿಜಿತಕಾಮಾನಂದಜಿ, ಅಧ್ಯಕ್ಷರು, ರಾಮಕೃಷ್ಣ ಮಠ, ಮಂಗಳೂರು ಅವರು ವಹಿಸಿದರು.

ಮುಖ್ಯ ಕಾರ್ಯಕ್ರಮವಾಗಿ ನಡೆದ“ದಾಸ-ಗಾನ-ಚಿಂತನ”(ಸAಜೆ 5.30 ರಿಂದ 7.30) ಕಾರ್ಯಕ್ರಮದಲ್ಲಿಸುರಮಣಿಡಾ. ದತ್ತಾತ್ರೇಯಎಲ್. ವೇಲಣಕರ್‌ಅವರಗಾಯನ, ಡಾ. ಎಚ್. ಎನ್. ಮುರಳೀಧರಅವರಅರ್ಥಪೂರ್ಣ ವ್ಯಾಖ್ಯಾನ ಹಾಗೂ ತಬಲಾದಲ್ಲಿಶ್ರೀ ಶ್ರೀದತ್ತ ಪ್ರಭುಅವರ ಸಹಕಾರದಿಂದ ಭಕ್ತಿಭಾವಪೂರ್ಣ ವಾತಾವರಣ ನಿರ್ಮಾಣವಾಗಿ, ಶ್ರೋತೃಗಳನ್ನು ಆಧ್ಯಾತ್ಮಿಕ ಅನುಭವದೊಳಗೆ ಕರೆದೊಯ್ದಿತು.

ದಾಸಸಾಹಿತ್ಯದ ಭಕ್ತಿಮಯ ಸಂದೇಶಗಳನ್ನು ಸಂಗೀತ ಮತ್ತು ವಿವರಣೆಗಳ ಮೂಲಕ ಮನೋಜ್ಞವಾಗಿ ಪರಿಚಯಿಸಿದ ಈ ಕಾರ್ಯಕ್ರಮವುಎಲ್ಲರ ಮನಸೆಳೆಯಿತು. ಭಕ್ತರು, ಸಂಗೀತಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

LEAVE A REPLY

Please enter your comment!
Please enter your name here