ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಗ್ರಾಹಕ ದಿನಾಚರಣೆ

0
9

ಪುತ್ತೂರು: ದ.ಕ. ಜಿಲ್ಲಾ ಪುತ್ತೂರು ತಾಲೂಕಿನ ದರ್ಬೆಯ ಸಂತ ಫಿಲೋಮಿನಾ ಕಾಲೇಜಿನಲ್ಲಿ ಮಾರ್ಚ್ 18ರಂದು ಅಂತರಾಷ್ಟ್ರೀಯ ಗ್ರಾಹಕ ದಿನಾಚರಣೆಯ ಸಂಬಂಧವಾಗಿ ಮೆರವಣಿಗೆ, ಬೀದಿ ನಾಟಕ ಇತ್ಯಾದಿಗಳು ಜರಗಿತು.
ಅಧ್ಯಕ್ಷರಾಗಿ ಡಾ, ಆಂಟೋನಿ ಪ್ರಕಾಶ್ ಮಂಥೇರೋ ಪ್ರಾಂಶುಪಾಲರು. ಮುಖ್ಯ ಅತಿಥಿಯಾಗಿ ಡಿ ವೈಎಸ್ ಪಿ ಪ್ರಮೋದ್ ಕುಮಾರ್ ಬಿ., ಸುನಂದ ಕೆ ಅಧ್ಯಕ್ಷರು ಡಿಸಿಐಸಿ ಮಂಗಳೂರು, ಡಿ.ಆರ್.ಸುನಂದ ದಂಬೇಕೊಡಿ, ಕಾರ್ಯದರ್ಶಿ, ಕಾಲೇಜಿನ ಆಡಳಿತ ಮಂಡಳಿಯವರು ಕಾರ್ಯಕ್ರಮದಲ್ಲಿದ್ದರು. ಪ್ರಮೋದ್ ಕುಮಾರ್ ಡಿ ವೈ ಎಸ್ ಪಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಗ್ರಾಹಕರ ಹಕ್ಕುಗಳ ಬಗ್ಗೆ ಹಾಗೂ ಖರೀದಿಸುವಾಗ ವಹಿಸಬೇಕಾದಂತಹ ಮುನ್ನೆಚ್ಚರಿಕೆಗಳನ್ನು ತಿಳಿಸಿದರು. ಸುನಂದ ಕೆ ವಿದ್ಯಾರ್ಥಿಗಳು ಎಚ್ಚರಿಕೆಯ ಗ್ರಾಹಕರಾಗಿ ಶಿಕ್ಷಣದ ಮೂಲಕ ಪರಿಸರದ ಎಲ್ಲರಿಗೂ ಮಾಹಿತಿಯನ್ನು ನೀಡಿ ಜವಾಬ್ದಾರಿಯತ ಖರೀದಿದಾರರಾಗಿ ಬೆಳೆಯಿರಿ ಎಂದರು. ವಿದ್ಯಾರ್ಥಿಗಳು ರ್ಯಾಲಿಯಲ್ಲಿ ಪಾಲ್ಗೊಂಡಿದ್ದು. ಕಾಲೇಜಿನ ಗ್ರಾಹಕ ಕ್ಲಬ್ಬಿನ ಸಂಯೋಜಕ ಶಿಕ್ಷಕರಾದ ಪ್ರವೀಣ್ ಹಾಗೂ ಸ್ವಾತಿ ಶೆಟ್ಟಿ ಅವರ ಮೇಲ್ವಿಚಾರಣೆಯಲ್ಲಿ ರ್ಯಾಲಿಯು ಕಾಲೇಜಿನ ಕ್ಯಾಂಪಸ್ ಇಂದ ದರ್ಬೆ ಸರ್ಕಲ್,ಗಾಂಧಿ ಕಟ್ಟೆ ಯ ವರೆಗೆ ಆರಕ್ಷಕರ ಸಿಬ್ಬಂದಿಗಳೊಂದಿಗೆ ಶಿಸ್ತು ಬದ್ಧವಾಗಿ ಸಾಗಿತ್ತು. ವಿದ್ಯಾರ್ಥಿಗಳು ವಸ್ತುವನ್ನು ಅಂಗಡಿಯಿಂದ ಖರೀದಿಸುವಾಗ ಅನುಸರಿಸಬೇಕಾದ ಎಚ್ಚರಿಕೆ, ತಮಗೆ ವಂಚನೆಯಾದಾಗ ಎಲ್ಲಿ ಪರಿಹಾರ ಪಡೆದುಕೊಳ್ಳಬೇಕು ಹಾಗೂ ಗ್ರಾಹಕ ಹಕ್ಕುಗಳನ್ನ ಬೀದಿ ನಾಟಕದ ಮೂಲಕ ಆಡಿ ತೋರಿಸಿದರು. ವಿದ್ಯಾರ್ಥಿಗಳು ಗ್ರಾಹಕರ ಹಕ್ಕುಗಳು ಖರೀದಿಯ ಎಚ್ಚರಿಕೆ, ಘಂಟಾಘೋಷವಾಗಿ ಕೂಗುತ್ತಾ ಮೆರವಣಿಗೆಯಲ್ಲಿ ಗ್ರಾಹಕರಿಗೆ ಮಾಹಿತಿಯನ್ನು ನೀಡುತ್ತಾ ಸಾಗಿದರು.

ವರದಿ ರಾಯಿ ರಾಜ ಕುಮಾರ.

LEAVE A REPLY

Please enter your comment!
Please enter your name here