ಸಜೀಪ ಮಾಗಣೆಪ ಡೇರಮಾಡ ಕ್ಷೇತ್ರದಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ಜರಗುವ ಶ್ರೀ ದೈವಂಗಳ ಹಾಗೂ ಶ್ರೀ ನಾಲ್ಕೈಥಾಯ ದೈವದ ನೇಮೋತ್ಸವದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ಕೋಳಿಗುಂಟ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಶನಿವಾರದಂದು ಜರಗಿತು.

ಬಿಜಂದಾರು ಗುತ್ತು ಶಿವರಾಮ ಭಂಡಾರಿ, ಸಜೀಪ ಗುತ್ತು ಗಡಿ ಪ್ರಧಾನರಾದ ಮುತ್ತಣ್ಣ ಶೆಟ್ಟಿ ಯಾನೆ ಕಾಳ ಶೆಟ್ಟಿ, ಮಾಡದಾರು ಗುತ್ತು ಗಡಿಪ್ರದಾನ ರಾಧಾ ಶಶಿಧರ ರೈ ಯಾನೆ ನಾರಣ ಆಳ್ವ. ಪ್ರದೀಪ್ ಶೆಟ್ಟಿ , ಸತ್ಯನಾರಾಯಣ ನಾಯಕ್, ಕಿಶನ್ ಸೇಣವ. ಯಶವಂತ ಪೂಜಾರಿ ದೇರಾಜೆ ಗುತ್ತು ಮೊದಲಾದವರು ಉಪಸ್ಥಿತರಿದ್ದರು.

