ಬಿ. ವಾಮದೇವಪ್ಪರವರಿಗೆ “ಗ್ಲೋಬಲ್ ಅಚೀವರ್ಸ್” ಪ್ರಶಸ್ತಿಗಾಗಿ ಕಲಾಕುಂಚದಿಂದ ಸನ್ಮಾನ

0
9

ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಮಾನ್ಯ ಬಿ. ವಾಮದೇವಪ್ಪನವರಿಗೆ ಇತ್ತೀಚಿಗೆ ವಿದೇಶದ ದಕ್ಷಿಣ ಆಫ್ರಿಕಾದ ಸನ್‌ಸಿಟಿ ನಗರದಲ್ಲಿ ವಿಶ್ವವಾಣಿಯಿಂದ “ಗ್ಲೋಬಲ್ ಅಚೀವರ್ಸ್” ಪ್ರಶಸ್ತಿ ವಿತರಿಸಿದ್ದು ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯಿAದ ಇತ್ತೀಚಿಗೆ ದಾವಣಗೆರೆ ಕುವೆಂಪು ಕನ್ನಡ ಭವನದಲ್ಲಿ ಅಭಿಮಾನದಿಂದ ಅಭಿನಂದಿಸಿ ಶುಭ ಹಾರೈಸಿ ಸನ್ಮಾನಿಸಿ ಗೌರವ ಅರ್ಪಿಸಲಾಯಿತು ಎಂದು ಕಲಾಕುಂಚದ ಅಧ್ಯಕ್ಷರಾದ ವಾಸುದೇವ ಲಕ್ಷ್ಮ ಣ್ ರಾಯ್ಕರ್ ತಿಳಿಸಿದ್ದಾರೆ.
ವೇದಿಕೆಯಲ್ಲಿ ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ, ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಶ್ರೀಮತಿ ಜ್ಯೋತಿ ಗಣೇಶ್ ಶೆಣೈ, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ, ಕಲಾಕುಂಚ ಮಹಿಳಾ ವಿಭಾಗದ ಪ್ರಥಮ ಅಧ್ಯಕ್ಷರಾದಚಂದ್ರಶೇಖರ ಅಡಿಗ, ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here