ಮುಲ್ಕಿ : ಹೊಸ ಅಂಗಣ ತಿಂಗಳ ಬೆಳಕು ಕಾರ್ಯಕ್ರಮದಲ್ಲಿ ನವೀನ್ ಪಂಬದರರಿಗೆ ಸನ್ಮಾನ

0
19

ಮುಲ್ಕಿ : ಮುಲ್ಕಿ ಹೊಸ ಅಂಗಣ ಮಾಸ ಪತ್ರಿಕೆಯ ತಿಂಗಳ ಬೆಳಕು ಕಾರ್ಯಕ್ರಮದಲ್ಲಿ ಏಪ್ರಿಲ್ ತಿಂಗಳ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮವು ಮುಲ್ಕಿ ಪುನರೂರು ಟೂರಿಸ್ಟ್ ಹೋಮ್ನನ ಸಭಾಂಗಣದಲ್ಲಿ ನಡೆಯಿತು, ಈ ಸಂದರ್ಭದಲ್ಲಿ ಮೂಲ್ಕಿಯ ದೈವ ನರ್ತಕ ನವೀನ್ ಪಂಬದರರಿಗೆ ಪತ್ನಿ ಜಯಂತಿ ಜೊತೆ ಗೌರವಾರ್ಪಣೆ ಮಾಡಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ದೈವ ನರ್ತಕರನ್ನು ಗುರುತಿಸಿ ಅವರಿಗೆ ಗೌರವಾರ್ಪಣೆ ಮಾಡಿದರೆ ಮುಂದೆ ಅವರಿಗೆ ಒಳ್ಳೆಯ ಕೆಲಸ ಮಾಡಲು ಉತ್ತೇಜನ ಸಿಕ್ಕಿದಂತೆಯಾಗುತ್ತದೆ. ಹೊಸ ಅಂಗಣ ಪತ್ರಿಕೆಯ ಇಂತಹ ಸಾಧಕರನ್ನು ಗುರುತಿಸುದಕ್ಕೆ ಅಭಿನಂದನೆ ಸಲ್ಲಿಸಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕಿನ್ನಿಗೋಳಿ ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ, ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ಹರ್ಷರಾಜ ಶೆಟ್ಟಿ, ಗುತ್ತಿನಾರ್ ವಿಶುಕುಮಾರ್ ಕಲ್ಲಟ್ಟಿ, ಕೇಶವಾನಂದ ಸ್ವಾಮೀಜಿ ಚಿತ್ರಾಪು, ಅತಿಕಾರಿಬೆಟ್ಟು ಗ್ರಾ.ಪಂ. ಮಾಜೀ ಉಪಾಧ್ಯಕ್ಷ ಮನೋಹರ ಕೋಟ್ಯಾನ್, ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ರಮೇಶ್ ಅಮೀನ್ ಕೊಕ್ಕರಕಲ್, ಸರೋಜಿನಿ ಸುವರ್ಣ, ಜನಾರ್ದನ್ ಬಂಗೇರ ಕೆ.ಎಸ್ ರಾವ್ ನಗರ, ಕರುಣಾಕರು ಸುವರ್ಣ, ನಿವೃತ್ತ ಬ್ಯಾಂಕ್ ಪ್ರಬಂಧಕ ಸುರೇಂದ್ರ ಜಿ. ಶೈಣೆ, ವಾಸು ಪೂಜಾರಿ ಚಿತ್ರಾಪು, ಜಯಪಾಲ ಶೆಟ್ಟಿ ಐಕಳ, ಉದ್ಯಮಿ ಜೋನ್ ಕ್ವಾಡ್ರಸ್, ನಂದಾ ಪಾಯಸ್, ವಕೀಲ ರವೀಶ್ ಕಾಮತ್, ಜಯರಾಮ್ ಬಿ ಎಸ್ ಮತ್ತಿತರರು ಉಪಸ್ಥಿತರಿದ್ದರು.

ಹರಿಶ್ಚಂದ್ರ ಪಿ. ಸಾಲ್ಯಾನ್ ಸ್ವಾಗತಿಸಿದರು. ವಾಸು ಪೂಜಾರಿ ಧನ್ಯವಾದ ಅರ್ಪಿಸಿದರು, ದಿನೇಶ್ ಕೊಲ್ನಾಡು ನಿರೂಪಿಸಿದರು.

LEAVE A REPLY

Please enter your comment!
Please enter your name here