ರೋಶನ್ ಮರೋಲ್ ಮತ್ತು ಕೆ.ಜೆ. ರೋಯ್ ತಂಡಕ್ಕೆ ಪ್ರಶಸ್ತಿ
ಭಾರತೀಯ ಬ್ಯಾಡ್‌ಮಿಂಟನ್ ಸಂಸ್ಥೆಯ ಆಶ್ರಯದಲ್ಲಿ 48ನೇ ವಾರ್ಷಿಕ ಅಖಿಲ ಭಾರತ ರಾಷ್ಟ್ರೀಯ ಯೊನೆಕ್ಸ್ ಸನ್‌ರೈಸ್ ಮಾಸ್ಟರ್ಸ್ ಬ್ಯಾಡ್‌ಮಿಂಟನ್ ಸ್ಪರ್ಧಾಕೂಟವು ಗೋವಾ ರಾಜ್ಯದ ಮಡಗಾವ್ ನಗರದಲ್ಲಿ ದಿ. ಮನೋಹರ್ ಪರಿಕ್ಕರ್ ಒಳಾಂಗಣ ಕ್ರೀಡಾಂಗಣದಲ್ಲಿ 18ನೇ ಮಾರ್ಚ್‌ನಿಂದ 20ನೇ ಮಾರ್ಚ್ ವರೆಗೆ ಜರಗಿತು.
ಹಿರಿಯರ ವಿಭಾಗದಲ್ಲಿ ಮಿಶ್ರ ಜೋಡಿ ವರ್ಗದಲ್ಲಿ ನಗರದ ಕೆನರಾ ಕ್ಲಬ್‌ನ್ನು ಪ್ರತಿನಿಧಿಸಿದ ಶ್ರೀಮತಿ ರೋಶನ್ ಮರೋಲ್ ಮತ್ತು ಕೆ.ಜೆ. ರೋಯ್ ತಂಡವು, ಅಂತಿಮ ಮತ್ತು ನಿರ್ಣಾಯಕ ಪಂದ್ಯಾಟದಲ್ಲಿ, ಬಂಟ್ವಾಳ್ ಸುನೀಲ್ ಪೈ ಮತ್ತು ಶ್ರೀಮತಿ ಶೋಭಾ ವಿಜಯನ್ ತಂಡವನ್ನು ನೇರ ಸೆಟ್‌ನಲ್ಲಿ 21-11, 21-09 ಅಂಕಗಳಿಂದ ಸೋಲಿಸಿ ಪ್ರಥಮ ಸ್ಥಾನ ಪಡೆದು, ಪ್ರತಿಷ್ಟಿತ ಆಕರ್ಷಕ ಪ್ರಶಸ್ತಿ ಮತ್ತು ಪ್ರಶಸ್ತಿ ಪ್ರಮಾಣ ಪತ್ರ ವಿಜೇತರಾದರು.
ಈ ಸ್ಪರ್ದಾಕೂಟದಲ್ಲಿ ವಿವಿಧ ರಾಜ್ಯಗಳಿಂದ ಸುಮಾರು 16 ತಂಡಗಳು ಭಾಗವಹಿಸಿದ್ದವು. ಕೆನರಾ ಕ್ಲಬ್ ನ ಸಹ ಆಟಗಾರರು ಶ್ರೀಮತಿ ರೋಶನ್ ಮರೋಲ್ ರವರ ವಿಶಿಷ್ಟ ಸಾಧನೆಯನ್ನು ಅಭಿನಂದಿಸಿದ್ದಾರೆ.
ವರದಿ : ಎಂ.ವಿ. ಮಲ್ಯ

