ಹೆಬ್ರಿ ಅಮೃತ ಭಾರತಿಯಲ್ಲಿ ‘ಆಷಾಢದಲ್ಲೊಂದು ಅಡುಗೆ’ ಕಾರ್ಯಕ್ರಮ.

0
12


ಹೆಬ್ರಿ : ಅಮೃತ ಭಾರತಿ ವಿದ್ಯಾ ಕೇಂದ್ರದಲ್ಲಿ ‘ಆಷಾಢದಲ್ಲೊಂದು ಅಡುಗೆ’ ಎಂಬ ವಿನೂತನ ಕಾರ್ಯಕ್ರಮವನ್ನು ಶಾಲಾ ವಿದ್ಯಾರ್ಥಿಗಳು ನಡೆಸಿದರು. ಶಾಲಾ ವಿದ್ಯಾರ್ಥಿಗಳು ಕರಾವಳಿಯ ಜನತೆಯ ಮಳೆಗಾಲದ ಖಾದ್ಯಗಳನ್ನು ತಯಾರಿಸಿ, ಪ್ರದರ್ಶದಲ್ಲಿ ಇರಿಸಿದರು. ಶಾಲಾ ಶಿಕ್ಷಕಿ ಕಮಲಾ ಮಾತಾಜಿಯವರು ಈ ಕಾರ್ಯಕ್ರಮದ ಮುಂದಾಳತ್ವವನ್ನು ವಹಿಸಿಕೊಂಡಿದ್ದು, ಆಡಳಿತ ಮಂಡಳಿ ಸದಸ್ಯರಾದ ರಾಜೇಶ್ ನಾಯಕರವರು, ಹಾಗೂ ಸಂಸ್ಥೆಯ ಸಾರ್ವಜನಿಕ ಆಡಳಿತ ಅಧಿಕಾರಿಯಾದ ಶ್ರೀಯುತ ವಿಜಯಕುಮಾರ್ ಶೆಟ್ಟಿ, ಭಾಗವಹಿಸಿ ಖಾದ್ಯವನ್ನು ತಿನ್ನುವುದರ ಮೂಲಕ ಮಕ್ಕಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾಕೇಂದ್ರದ ಮುಖ್ಯಸ್ಥರು, ಶಿಕ್ಷಕಿಯರು ವಿದ್ಯಾರ್ಥಿಗಳು ಖಾದ್ಯವನ್ನು ಸವಿದು  ಸಂತಸ ಪಟ್ಟರು.

LEAVE A REPLY

Please enter your comment!
Please enter your name here