ಐದು ಮಂದಿ ಸಮಾನ ಆಸಕ್ತರಿಂದ ಪ್ರಾರಂಭಗೊಂಡು ಉತ್ತಮ ಯಶಸ್ವಿ ಕಂಡ ಬಂಟ್ವಾಳ ಉತ್ಸವವು ಕೇವಲ ಹಣಗಳಿಸುವ ಮಾದ್ಯಮ ಅಥವಾ ಕೇವಲ ಒಂದು ಮನೋರಂಜನೆಯಾಗಿರದೆ, ಹಲವು ಅಶಕ್ತ ಕುಟುಂಬದ ಕಣ್ಣೊರೆಸುವ ಕೈಂಕಾರ್ಯವಾಗಿರುವುದರೊಂದಿಗೆ ಇಂತಹ ಕಾರ್ಯಕ್ರಮ ಮಾಡುವ ಇತರರಿಗೆ ಆದರ್ಶಪ್ರಿಯವಾಗಿದೆ ಎಂದು ಬಂಟ್ವಾಳ ತುಳುಕೂಟದ ಅಧ್ಯಕ್ಷರಾದ ಸುದರ್ಶನ್ ಜೈನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಕಳೆದ ಒಂದು ತಿಂಗಳಿನಿಂದ ಬಂಟ್ವಾಳ ಬಿ.ಸಿ ರೋಡಿನ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ಬಂಟ್ವಾಳ ಫೆಸ್ಟ್ ವತಿಯಿಂದ ಅದ್ಧೂರಿಯಿಂದ ನಡೆದ ಬೃಹತ್ ಗ್ರಾಹಕರ ಮೇಳ, ಆಮ್ಯೂಸ್ಮೆಂಟ್ ಪಾರ್ಕ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡ ಬಂಟ್ವಾಳ ಉತ್ಸವದ ಅಧ್ಯಕ್ಷತೆಯ ನೆಲೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ ಕಾರ್ಯಕ್ರಮದ ಯಶಸ್ಸಿಗೆ ಉತ್ತಮ ಶ್ಲಾಘನೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಆಯೋಜಕದಲ್ಲಿ ಒಬ್ಬರಾದ ಇಬ್ರಾಹಿಂ ಕೈಲಾರ್ ತನ್ನ ಪ್ರಾಸ್ತಾವಿಕ ನುಡಿಗಳಲ್ಲಿ ಅದೆಷ್ಟೋ ಅಡಚಣೆಗಳನ್ನು ಎದುರಿಸಿ, ಹಿರಿಯರ ಮಾರ್ಗದರ್ಶನದಲ್ಲಿ ಆರಂಭಿಸಿದ ಬಂಟ್ವಾಳ ಉತ್ಸವಕ್ಕೆ ಸಹಕಾರ ನೀಡಿದ ದಕ್ಷಿಣಕನ್ನಡ ಜಿಲ್ಲಾಡಳಿತದಿಂದ ಹಿಡಿದು ಬಂಟ್ವಾಳದ ಇಲಾಖೆಗಳ ಸರ್ವರ ಸಹಕಾರವನ್ನು ಸ್ಮರಿಸಿ, ಧನ್ಯವಾದಗಳನ್ನು ಅರ್ಪಿಸಿದರು.
ನವೆಂಬರ್ 21ರಂದು ಆರಂಭವಾದ ಕಾರ್ಯಕ್ರಮದಲ್ಲಿ ಡಿಸೆಂಬರ್ 21ರವರೆಗೆ 15 ಅಶಕ್ತ ಕುಟುಂಬಗಳಿಗೆ ಸಹಾಯಧನ ವಿತರಣೆ ನಡೆಸಿದ ತಂಡವು ಕ್ಯಾನ್ಸರ್ ರೋಗಿಗಳಾದ ನಸೀಮಾ ಕೊಡಾಜೆ, ಹಮೀದ್ ನೆಲ್ಲಿಗುಡ್ಡೆ, ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಜಯಂತಿ ಮಾರ್ದೋಡಿ, ತೇಜಸ್ ವಳಚ್ಚಿಲ್, ಅಬ್ದುಲ್ಲ ಶಾಂತಿ ಅಂಗಡಿ, ಬಹು ಅಂಗಾಂಗ ವೈಫಲ್ಯದಿಂದ ಬಳಲುವ ರಂಜಿತ್ ಕುಮಾರ್ ಮೊಡಂಕಾಪು, ಪಾರ್ಶ್ವವಾಯು ಸಮಸ್ಯೆಯ ಚಂದ್ರ ಪೂಜಾರಿ ನೇಲ್ಯಪಲ್ಕೆ, ಶ್ವಾಸಕೋಶ ಮತ್ತು ಉಸಿರಾಟದ ಸಮಸ್ಯೆಯ ಯಾದವ ಪೂಜಾರಿ ನೇಲ್ಯ ಪಲ್ಕೆ, ಅಪಘಾತದಿಂದ ಸಂಕಷ್ಟ ಅನುಭವಿಸುತ್ತಿರುವ ನಾರಾಯಣ ನರಿಕೊಂಬು, ಸುಧಾಕರ್ ಪಂಜಿಕಲ್ಲು, ಕೋಮಾ ಸ್ಥಿತಿಯಲ್ಲಿರುವ ಮಮತಾ ಸುಜಿರ್, ಆರ್ಥಿಕ ಅಶಕ್ತ ಕುಟುಂಬಗಳಾದ ಸದಾಶಿವ ಮಾಣಿಮಂಜ, ಧರ್ಣಮ್ಮ ಆಲಾಡಿ, ಶಕೀಲ ಬಾಳ್ತಿಲ ಮತ್ತು ನೋಣಯ್ಯ ನಾಯ್ಕ ಮಜಲೋಡಿಯವರಿಗೆ ಧನಸಹಾಯ ಮಾಡಿದರು.
ಇಂಡಿಯನ್ ಅಮ್ಯೂಸ್ಮೆಂಟ್‌ನ ನಾಸಿರ್ ಕಾವಳಕಟ್ಟೆ, ವಿನೋದ್ ದೊಡ್ಡಬಳ್ಳಾಪುರ, ಫಾರೂಕ್ ಪುತ್ತೂರು, ಹೈದರ್, ಮುಸ್ತಾಪ, ಇಲಿಯಾಸ್ ನಂದಾವರ ಹಾಗೂ ಸ್ಟಾರ್ ಸೌಂಡ್ಸ್ ಬಜ್ಪೆಯ ನಿಜಾಮ್, ಸಲೀಮ್ ನಂದಾವರ ಹಾಗೂ ಇಜಾನ್‌ರವರನ್ನು ಗೌರವಿಸಲಾಯಿತು.
ಸಮಾರೋಪ ಸಮಾರಂಭದ ವೇದಿಕೆಯಲ್ಲಿ ನೋಟರಿ ಮತ್ತು ವಕೀಲರಾದ ಜಯರಾಮ ರೈ, ದ.ಕ ವರ್ತಕರ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಸ್ಪರ್ಶ ಅರೇಂಜರ್ಸ್ ಮಾಲಕರಾದ ಸುಭಾಶ್ಚಂದ್ರ ಜೈನ್, ಸಂಘಟಿತ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷರಾದ ಅಬ್ಬಾಸ್ ಆಲಿ, ನರಿಕೊಂಬು ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ಸಪಲ್ಯ, ಭಂಡಾರಿಬೆಟ್ಟು ರಾಮ ಗಣೇಶ್ ಆಟೋವರ್ಕ್ಸ್ ಮಾಲಕ ಉಮೇಶ್ ನೆಲ್ಲಿಗುಡ್ಡೆ, ವಿಟ್ಲ ವಿಠಲ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಅಣ್ಣಪ್ಪ ಸಾಸ್ತಾನ ಮತ್ತು ಶಿಕ್ಷಕಿ ಜ್ಯೋತಿ ಮಾರ್ಟಿಸ್ ಉಪಸ್ಥಿತರಿದ್ದರು.
ಕಾರ್ಯಕ್ರಮ ಆಯೋಜಕರಾದ ನವೀನ್ ಕುಮಾರ್ ಪಾಣೆಮಂಗಳೂರು, ಇಬ್ರಾಹಿಂ ಕೈಲಾರ್, ಶಿವಪ್ರಸಾದ್ ಕೊಟ್ಟಾರಿ ಬಂಟ್ವಾಳ, ಮಹಮ್ಮದ್ ನಂದಾವರ ಹಾಗೂ ವಿಶ್ವನಾಥ ಕೊಟ್ಟಾರಿ ಉಪಸ್ಥಿತರಿದ್ದರು.
ಸೌಮ್ಯ ಯಶವಂತ್ ಭಂಡಾರಿಬೆಟ್ಟು ಸ್ವಾಗತಿಸಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯೆ ಶ್ರೀಶಾವಾಸವಿ ತುಳುನಾಡ್ ಧನ್ಯವಾದಗಳನ್ನರ್ಪಿಸಿದರು. ರಾಜೇಶ್ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.
ಬಂಟ್ವಾಳ ಉತ್ಸವದ ಸಾಂಸ್ಕೃತಿಕ ವೇದಿಕೆಯಲ್ಲಿ ಸ್ಟೆಪ್ ಝೋನ್ ಡ್ಯಾನ್ಸ್ ಅಕಾಡೆಮಿ ಮೊಗರ್ನಾಡು, ಲಾಸ್ಯ ನಾಟ್ಯ ನಿಕೇತನ ಮಾರುತಿನಗರ, ನಿಶಾನಿ ಡ್ಯಾನ್ಸ್ ಕ್ರಿವ್ ಮೊಗರ್ನಾಡು, ಎಕ್ಸ್ಟ್ರೀಮ್ ಡ್ಯಾನ್ಸ್ ಕ್ರಿವ್ ಬಿ.ಸಿ ರೋಡ್, ಶಿವರಂಜಿನಿ ಕಲಾಕೇಂದ್ರ ಪೊಳಲಿ ಬೊಕ್ಕಸ ತಂಡದಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಗಳು, ಶಾ ಬ್ಯಾಂಡ್ ಮಂಗಳೂರು, ರಶೀದ್ ನಂದಾವರ, ಅಪೋಲೋ ಅಶ್ರಫ್, ಸ್ವರ ಸಂಗಮ ಮೆಲೋಡೀಸ್, ಕೂಲ್ ಮ್ಯೂಸಿಕ್ ಟ್ರೂಪ್ ಮುಂತಾದ ತಂಡಗಳಿಂದ ಸಂಗೀತ ರಸಮಂಜರಿ ಜರುಗಿ, ಪ್ರೇಕ್ಷಕರ ಮನಸೂರೆಗೊಂಡಿತು.


