ಸುರತ್ಕಲ್ ನಲ್ಲಿ ಗ್ರಾಹಕರೊಂದಿಗೆ ಒಂದು ದಿನ

0
115

ವರದಿ- ರಾಯಿ ರಾಜಕುಮಾರ ಮೂಡುಬಿದಿರೆ

ಮಂಗಳೂರು ಸುಬ್ರಹ್ಮಣ್ಯ ಸಹಕಾರ ಸಂಘದ ಸುರತ್ಕಲ್ ಶಾಖೆಯ 11ನೇ ವರ್ಷದ ವಾರ್ಷಿಕ ದಿನಾಚರಣೆಯೊಂದಿಗೆ ಗ್ರಾಹಕರೊಂದಿಗೆ ಒಂದು ದಿನ ಕಾರ್ಯಕ್ರಮ ನಾಳೆ ಆಗಸ್ಟ್ 20 ರಂದು ನಡೆಯಲಿದೆ. ಹತ್ತು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಕಾರಣ ಬೆಳಗ್ಗೆ ಗಂಟೆ 8ಕ್ಕೆ ಗಣಪತಿ ಹವನ ಹಾಗೂ ಲಕ್ಷ್ಮಿ ಪೂಜೆ ನಡೆಯಲಿದೆ. ತರುವಾಯ ಅದೃಷ್ಟ ಗ್ರಾಹಕ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಆ ದಿನ ಬಂದವರಲ್ಲಿ ಮೂವರು ಅದೃಷ್ಟ ಗ್ರಾಹಕರಿಗೆ ಆಕರ್ಷಕ ಬಹುಮಾನವನ್ನು ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಆದುದರಿಂದ ಗ್ರಾಹಕರೆಲ್ಲರೂ ಆ ದಿನದಂದು ಹಾಜರಾಗಬೇಕೆಂದು ಸಂಘದ ಪದಾಧಿಕಾರಿಗಳು ಅಪೇಕ್ಷಿಸಿದ್ದಾರೆ.

LEAVE A REPLY

Please enter your comment!
Please enter your name here