ಪ್ರಗತಿ ಸ್ಟಡಿ ಸೆಂಟರ್ ಕ್ಯಾಂಪಸ್ನಲ್ಲಿ ವೈವಿಧ್ಯಮಯ “ನವಾದಶ ಸಡಗರ:25”:19ನೇ ವರ್ಷದ ವಾರ್ಷಿಕಾಚರಣೆ

0
46

ಕಲಿಕೆಯಲ್ಲಿ ಹಿಂದೆ ಸರಿದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸದ ಧೈರ್ಯ ತುಂಬಿಸಿ ಬೆಳಕಿಗೆ ತರುವ, ಹತ್ತೂರಿನಲ್ಲೂ ಹೆಸರು ಪಡೆದ ಪುತ್ತೂರಿನ, ಮುಖ್ಯ ರಸ್ತೆಯ ಶ್ರೀ ಧರ್ಮಸ್ಥಳ ಎರಡನೇ ಮಹಡಿಯಲ್ಲಿ, ಕಳೆದ ಹದಿನೆಂಟು ವರ್ಷಗಳಿಂದ ಶೈಕ್ಷಣಿಕ ಸಾಧನೆ ಮಾಡುವುದರ ಮೂಲಕ, ರಾಜ್ಯ- ನಾಡಿನ-ಗಡಿನಾಡಿನ ಗಮನ ಸೆಳೆದಿರುವ “ಪ್ರಗತಿ ಸ್ಟಡಿ ಸೆಂಟರ್:ಪುತ್ತೂರು ” ಇದರ 19ನೇ ವರ್ಷದ “ನವಾದಶ ಸಡಗರ” ಸೃಜನಾತ್ಮಕ ಕಾರ್ಯಕ್ರಮ,18 ಆಗಸ್ಟ್ 2025,ಸೋಮವಾರ,2025-26ರ ಶೈಕ್ಷಣಿಕ ಕಾರ್ಯಕ್ರಮವಾಗಿ ಸಂಪನ್ನಗೊಂಡಿತು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇದರ ಮುಖ್ಯೋಪಾಧ್ಯಾಯರು ಶ್ರೀಮತಿ ಆಶಾ ಬೆಳ್ಳಾರೆ, ದೀಪ ಪ್ರಜ್ವಲನ ಗೊಳಿಸಿ, “ಪ್ರಗತಿ ಎಂದರೆ ಬೆಳಕು, ಶಕ್ತಿ, ಓದು. ‘ನನಗೇನು ಸಾಧ್ಯನಾ.. ಅದು ನಿನಗೆ ಮಾತ್ರ ಸಾಧ್ಯ..’ಪ್ರೀತಿ, ಕಾಳಜಿ, ಎಚ್ಚರದಿಂದ ಮುಂದುವರಿಯಬೇಕೆಂದು ಪ್ರೇರಣಾತ್ಮಕ ಮಾತುಗಳಿಂದ ಎಲ್ಲರ ಗಮನ ಸೆಳೆದರು.
. ಇದೇ ಸಂದರ್ಭದಲ್ಲಿ ಸಂಸ್ಥೆಯ ಹಿರಿಯ ವಿದ್ಯಾರ್ಥಿ, ಆರೋಗ್ಯ ಕಾರ್ಯಕರ್ತೆ, ಯಕ್ಷಗಾನ ಕಲಾವಿದೆ,ಶ್ರೀಮತಿ ಜಯಂತಿ ಅಚ್ಚುತ ಸುಳ್ಯ,ಇವರನ್ನು ದಂಪತಿ ಸಮೇತ,ಸಂಸ್ಥೆಯ ವತಿಯಿಂದ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ “ತನ್ನ ಬದುಕಿಗೆ ಜ್ಞಾನದ ಬೆಳಕನ್ನು ನೀಡಿರುವ ದೇವಸ್ಥಾನ ಪ್ರಗತಿ ಸ್ಟಡಿ ಸೆಂಟರ್. ಕಲಿಕೆಗೆ ವಯಸ್ಸು ಮುಖ್ಯವಲ್ಲ.. ಆಸಕ್ತಿ ಅವಕಾಶ ಪ್ರೋತ್ಸಾಹ ಬೇಕು. ಸಂಸ್ಥೆಯ ಸ್ಥಾಪಕಾಧ್ಯಕ್ಷರು ಶ್ರೀ ಗೋಕುಲ್ ನಾಥ್ ಪಿ.ವಿ, ಪ್ರಾಂಶುಪಾಲರು ಶ್ರೀಮತಿ ಹೇಮಲತಾ ಗೋಕುಲ್ ನಾಥ್, ಮುಖ್ಯೋಪಾಧ್ಯಾರು ಶ್ರೀಮತಿ ಪ್ರಮೀಳಾ ಎನ್. ಡಿ ಹಾಗೂ ಉಪನ್ಯಾಸಕರು ಅಭಿವಂದನೀಯರು ಎಂದು ಕೃತಜ್ಞತೆಯ ನುಡಿಗಳನ್ನಾಡಿದರು.
. ಹಿರಿಯರು ಮಾತೃಶ್ರೀ ದಿ. ಪಿ. ವಿ. ಸಾವಿತ್ರಿ ವಿಜಯಗೋಪಾಲ್ ಅವರ ಶುಭಾಶೀರ್ವಾದಗಳೊಂದಿಗೆ ನಡೆದ ಈ ಕಾರ್ಯಕ್ರಮದ ಹಿನ್ನಲೆ ಕುರಿತು ಶ್ರೀ ಗೋಕುಲ್ ನಾಥ್ ಪಿ. ವಿ, ಶ್ರೀಮತಿ ಹೇಮಲತಾ ಗೋಕುಲ್ ನಾಥ್ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯರು ಶ್ರೀಮತಿ ಪ್ರಮೀಳಾ ಎನ್.ಡಿ ಸಕಾಲಿಕವಾಗಿ ಸಂಸ್ಥೆಯ ಪ್ರಗತಿಯ ಕುರಿತು ಮಾತನಾಡಿದರು.
. ವಿದ್ಯಾರ್ಥಿಗಳೇ ನಿರ್ವಹಿಸಿದ ಈ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಹಾಗೂ ವಿಶೇಷವಾಗಿ “ಶಾಲಾ ಸರಕಾರದ ಅಧಿವೇಶನ”ನಡೆದುದು ಸೃಜನಾತ್ಮವಾಗಿದೆ. ಕವಯತ್ರಿ ಶಾಲಾ ಸರಕಾರದ ಶಿಕ್ಷಣ ಮಂತ್ರಿ ಕು. ಸಾನಿಧ್ಯ ಮಾರನಹಳ್ಳಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
✍ನಾರಾಯಣ ರೈ ಕುಕ್ಕುವಳ್ಳಿ. ನವಾದಶ ಕಾರ್ಯಕ್ರಮದ ಅಧ್ಯಕ್ಷರು.

LEAVE A REPLY

Please enter your comment!
Please enter your name here