ಬೈಕ್ ಸವಾರನ ಮೇಲೆ ಹಾರಿದ ಕಡವೆ; ಬೈಕ್ ಬಿದ್ದು ಸವಾರ ಸ್ಥಳದಲ್ಲೇ ಮೃತ್ಯು

0
107

ಕುಂದಾಪುರ: ಕಮಲಶಿಲೆಯಿಂದ ನೆಲ್ಲಿಕಟ್ಟೆಯ ಕಡೆಗೆ ಚಲಿಸುತ್ತಿದ್ದ ಬೈಕ್ ಮೇಲೆ ಕಡವೆ ಹಾರಿ ಬೈಕ್ ಬಿದ್ದು ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೊಬ್ಬ ಗಂಭೀರ ಗಾಯಗೊಂಡ ಘಟನೆ ಕಮಲಶಿಲೆ ಸಿದ್ದಾಪುರ ಮುಖ್ಯ ರಸ್ತೆಯ ತಾರೆಕೊಡ್ಲು ಬಳಿ ನಡೆದಿದೆ.

ಮೃತ ಯುವಕ ನೆಲ್ಲಿಕಟ್ಟೆ ನಿವಾಸಿ ಶ್ರೇಯಸ್ ಮೊಗವೀರ (22) ಎಂದು ತಿಳಿದು ಬಂದಿದೆ. ಗಂಭೀರ‌ ಗಾಯಗೊಂಡ ಯುವಕ ವಿಪ್ಪೇಶ್ (19) ಎಂದು ತಿಳಿದು ಬಂದಿದೆ. ಇವರು ಬೈಕ್ ನಲ್ಲಿ ಕಮಲಶಿಲೆ ದೇವಸ್ಥಾನಕ್ಕೆ ತೆರಳಿ ವಾಪಸ್ ಬರುವಾಗ ತಾರೆಕೊಡ್ಲು ಬಳಿ ಕಡೆವೆ ಬೈಕ್ ಮೇಲೆ ಹಾರಿ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here