ಕಿನ್ನಿಗೋಳಿ :- ಜಾನಪದ ಪರಿಷತ್ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ,ತಾಲೂಕು ಘಟಕ ಮೂಡುಬಿದರೆ ಹಾಗೂ ಯುಗಪುರುಷ ಕಿನ್ನಿಗೋಳಿ ಸಹಭಾಗಿತ್ವದಲ್ಲಿ ತುಳುನಾಡಿನ ಪ್ರಸಿದ್ಧ ಆಚರಣೆಯಾದ “ಆಟಿಡೊಂಜಿ ದಿನ ” ಹಾಗೂ ವಾಯ್ಸ್ ಆಫ್ ಆರಾಧನಾ ತಂಡದಿಂದ “ಜನಪದ ಸಾಂಸ್ಕೃತಿಕ ಕಾರ್ಯಕ್ರಮ” ದಿನಾಂಕ 02 -08-2025 ರಂದು ಬೆಳಿಗ್ಗೆ 9.30 ರಿಂದ ಯುಗಪುರುಷ ಸಭಾಭವನ ಕಿನ್ನಿಗೋಳಿಯಲ್ಲಿ ಏರ್ಪಡಿಸಲಾಗಿದೆ ಎಂದು ಮೂಡುಬಿದಿರೆ ತಾಲೂಕು ಜಾನಪದ ಪರಿಷತ್ ಅಧ್ಯಕ್ಷೆ ಶ್ರೀಮತಿ ಪದ್ಮಶ್ರೀ ಭಟ್ ಆಮಂತ್ರಣ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಕಾರ್ಯಕ್ರಮದಲ್ಲಿ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಯುಗಪುರುಷ ಸಂಸ್ಥೆಯ ಮುಖ್ಯಸ್ಥ ಭುವನಾಭಿರಾಮ ಉಡುಪ, ಅಗರಿ ಸಂಸ್ಥೆಯ ಮುಖ್ಯಸ್ಥ ರಾಘವೇಂದ್ರರಾವ್, ಜಾನಪದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್, ಜಾನಪದ ಜಿಲ್ಲಾ ಉಪಾಧ್ಯಕ್ಷ ಮಂದಾರ ರಾಜೇಶ್ ಭಟ್, ಜಾನಪದ ಜಿಲ್ಲಾ ಕೋಶಾಧಿಕಾರಿ ರಾಜೇಶ್ ಸ್ತೈಲಾರ್ಕ್, ತುಳು ವರ್ಲ್ಡ್ ಸಂಸ್ಥೆಯ ಮುಖ್ಯಸ್ಥ ಡಾ. ರಾಜೇಶ್ ಆಳ್ವ, ಮನೋವೈದ್ಯ ಡಾಕ್ಟರ್ ನಿರಂಜನ್ ಶೆಟ್ಟಿ, ಉದ್ಯಮಿ ಅರುಣ್ ಶೆಟ್ಟಿಗಾರ್ ಭಾಗವಹಿಸಲಿದ್ದಾರೆ ಎಂದು ಆಮಂತ್ರಣ ಪತ್ರದ ಮೂಲಕ ಪತ್ರಿಕೆಗೆ ತಿಳಿಸಿದ್ದಾರೆ
ತಾಲೂಕು,ಜಿಲ್ಲಾ ಹಾಗೂ ರಾಜ್ಯಮಟ್ಟದ ಜಾನಪದ ಆಸಕ್ತರು ಹಾಗೂ ವಾಯ್ಸ್ ಆಫ್ ಆರಾಧನಾ ತಂಡದ ಸ್ನೇಹಿತರು, ಹಿತೈಷಿಗಳು ಮತ್ತು ಸದಸ್ಯರು, ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮ ಯಶಸ್ಸು ಗೊಳಿಸುವಂತೆ ಕೋರಲಾಗಿದೆ.
ವರದಿ:- ಮಂದಾರ ರಾಜೇಶ್ ಭಟ್