ಭಾಷಾ ಉತ್ಪತ್ತಿ, ಬಳಕೆ, ವಿವಿಧತೆ ಕುರಿತು ಉಪನ್ಯಾಸ

0
9

ಮೂಡುಬಿದಿರೆ ತಾಲೂಕು ಕಲ್ಲಬೆಟ್ಟು ಉನ್ನತೀಕರಿಸಿದ ಪಿಎಂ ಶ್ರೀ ವಿದ್ಯಾಲಯದಲ್ಲಿ ಭಾಷಾ ಉತ್ಪತ್ತಿ, ಬಳಕೆ, ವಿವಿಧತೆ ಕುರಿತು ಉಪನ್ಯಾಸ ನಡೆಯಿತು. ಫೆಬ್ರವರಿ 25ರಂದು ಭಾಷೆಯ ವೈವಿಧ್ಯತೆಗಳ ಬಗ್ಗೆ ಸಮಗ್ರವಾದ ವಿವರಣೆಯನ್ನು ನೀಡಿ ಪ್ರಾಯೋಗಿಕ ಉಪಯೋಗಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು.

ಸಾಂದರ್ಬಿಕವಾದ ಹಲವಾರು ವಿಚಾರಗಳನ್ನು ಪ್ರಸ್ತುತಪಡಿಸಿ ಸಂಪನ್ಮೂಲ ವ್ಯಕ್ತಿ , ಬೆಂಗಳೂರು ಸ್ಪಾರ್ಕ್ ಅಕಾಡೆಮಿಯ ತರಬೇತುದಾರ, ರಾಯಿ ರಾಜಕುಮಾರು ವಿದ್ಯಾರ್ಥಿಗಳೊಂದಿಗೆ ಸಂವಹಿಸಿದರು. ಭಾಷೆಗೆ ನಿರ್ದಿಷ್ಟ ಚೌಕಟ್ಟನ್ನು ಒದಗಿಸಿಕೊಟ್ಟ ವ್ಯಾಕರಣದ ವಿಷಯಗಳನ್ನು ಕೂಡ ಮಕ್ಕಳಿಗೆ ಮನದಟ್ಟು ಮಾಡಿಸಿದರು.

ಮುಖ್ಯ ಶಿಕ್ಷಕಿ ನಿಶಾ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಶಿಕ್ಷಕಿ ಅನಿತಾ ಸಿಕ್ವೇರಾ ಸ್ವಾಗತಿಸಿದರು. ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು. ಡಯಾನ ಡೇಸ ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here