ಇಂದು ಬೆಳಗ್ಗೆ ದೆಹಲಿಯಲ್ಲಿ 4.4 ತೀವ್ರತೆಯ ಭಾರೀ ಭೂಕಂಪ!

0
29

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಉತ್ತರದ ಹಲವು ಭಾಗದ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ. ಇಂದು ಬೆಳಿಗ್ಗೆ ದೆಹಲಿ-ಎನ್‌ಸಿಆರ್‌ನಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿದೆ. ಇಲ್ಲಿ ಮಾತ್ರವಲ್ಲದೇ ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಕಂಪನದ ಅನುಭವವಾಗಿದೆ ಎಂದು ವರದಿ ಆಗಿದೆ.

ದೆಹಲಿಯ ಮನೆಯಿಂದ ಹೊರ ನಾಗರಿಕರು ಆತಂಕಗೊಂಡಿದ್ದರು.ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಭೂಕಂಪವು 4.4 ತೀವ್ರತೆ ದಾಖಲಾಗಿದೆ. ಇದರ ಕೇಂದ್ರಬಿಂದು ಹರಿಯಾಣದ ಜಜ್ಜರ್‌ನಲ್ಲಿ 10 ಕಿಲೋಮೀಟರ್ ಆಳದಲ್ಲಿದೆ ಎಂದು ತಜ್ಞರು ಹೇಳಿದ್ದಾರೆ. ಬೆಳಗ್ಗೆ ಎದ್ದ ದೆಹಲಿ ಜನರಿಗೆ ಈ ಭೂಕಂಪನ ಆಘಾತ ನೀಡಿತು. ಏಕೆಂದರೆ 4.4 ತೀವ್ರತೆಯ ಭೂಕಂಪನದಿಂದ ಇಲ್ಲಿ ಕಟ್ಟಡಗಳು ನಡುಗಿದವು. ಮನೆಯಲ್ಲಿ ಉದ್ಯೋಗ ಇತರ ಕೆಲಸಗಳಿಗೆ ಸಿದ್ಧವಾಗುತ್ತಿದ್ದವರನ್ನು ಮನೆಯಿಂದ ಹೊರ ಓಡುವಂತೆ ಮಾಡಿತು. ಸದ್ಯದವರೆಗೆ ದೆಹಲಿಯ ಎನ್‌ಸಿಆರ್ ಹಾಗೂ ಇತರ ಕಡೆ ಯಾವುದೇ ಹಾನಿ ಅಥವಾ ಗಂಭೀರ ಸಮಸ್ಯೆಗಳು ಉಂಟಾಗಿದ್ದರ ಬಗ್ಗೆ ವರದಿ ಆಗಿಲ್ಲ.ಕೇವಲ ದೆಹಲಿಯಲ್ಲಿ ಮಾತ್ರವಲ್ಲದೇ ಹರಿಯಾಣ ತೀವ್ರತೆ ಕೊಂಚ ಹೆಚ್ಚಿತ್ತು ಎನ್ನಲಾಗಿದೆ. ಈ ಬಗ್ಗೆ ನಿಖರ ಮಾಹಿತಿ ಸಿಗಲಿದೆ. ಉತ್ತರ ಪ್ರದೇಶ ಮತ್ತು ಪಂಜಾಬ್‌ ರಾಜ್ಯಗಳ ಕೆಲವು ಭಾಗಗಳಲ್ಲಿ ಭೂಮಿ ಕಂಪನಿಸಿದ ಅನುಭವ ಆಗಿದೆ. ಇಲ್ಲಿನ ಜನರು ಸಹ ಆತಂಕಗೊಂಡಿದ್ದಾರೆ. ಈ ಕುರಿತು ಕೆಲವೇ ನಿಮಿಷಗಳಲ್ಲಿ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಪೂರ್ಣ ಮಾಹಿತಿ ಒದಗಿಸಲಿದೆ.

LEAVE A REPLY

Please enter your comment!
Please enter your name here