ಕುದ್ರೆಬೆಟ್ಟು ವಿನಲ್ಲಿ ರಾರಾಜಿಸುತ್ತಿದೆ ವಿಶೇಷ ಪರಿಕಲ್ಪನೆಯ ಗೂಡುದೀಪ

0
4

ಕಲ್ಲಡ್ಕ: ದೀಪಾವಳಿ ಸಂದರ್ಭದಲ್ಲಿ ಮನೆ ಮನೆಗಳಲ್ಲಿ ಬಿದಿರಿನ ಕಡ್ಡಿಗಳನ್ನು ಒಟ್ಟು ಮಾಡಿ ಬಣ್ಣ ಕಾಗದ ಮೂಲಕ ಅಂದ ಚಂದವನ್ನು ಹೆಚ್ಚಿಸಿ ಗೂಡು ದೀಪವನ್ನು ರಚಿಸುತ್ತಿದ್ದರು. ಆದರೆ ಇತ್ತೀಚಿಗೆ ಅದೆಲ್ಲವೂ ಮರೆಮಾಚಿ ಅಂಗಡಿಗಳಲ್ಲಿ ಸಿಗುವಂತ ಬಣ್ಣ ಬಣ್ಣದ ಗೂಡು ದೀಪಗಳನ್ನು ಮನೆ ಅಂಗಳದಲ್ಲಿ ನೇತಾಡಿಸುವುದು ಸಾಮಾನ್ಯವಾಗಿದೆ.


ಆದರೆ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟುವಿನಲ್ಲಿ ಸ್ಥಳೀಯರೇ ರಚಿಸಿದ ಬೃಹದಾಕಾರದ ಗೂಡು ದೀಪವನ್ನು ಶ್ರೀ ಮಣಿಕಂಠ ಮಂದಿರದ ಕಲ್ಲುರ್ಟಿ ದೈವಸ್ಥಾನದ ಅಂಗಣದಲ್ಲಿ ರಾರಾಜಿಸುತ್ತಿದೆ.

ಧರ್ಮ,ಸಂಘಟನೆ, ದೇಶ , ಧಾರ್ಮಿಕತೆ, ತುಳು ಸಂಸ್ಕೃತಿ ಇವೆಲ್ಲವನ್ನು ಬಿಂಬಿಸುದರ ಮೂಲಕ ಇದರಲ್ಲಿ ಬಣ್ಣದ ಚಿತ್ತಾರವನ್ನು ಮೂಡಿಸಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರನೇ ವರ್ಷದ ಸಂದರ್ಭದಲ್ಲಿ RSS 100 ಹಾಗೂ 500 ವರ್ಷದ ಹೋರಾಟದ ಫಲ ಅಯೋಧ್ಯ ಶ್ರೀರಾಮ ಮಂದಿರ, ದೇಶ ರಕ್ಷಕರಾಗಿ ಹೋರಾಡುವ ಸೈನಿಕರ ಸವಿನೆನಪು ಇಂಡಿಯಾ ಗೇಟ್, ತುಳುನಾಡಿನ ತುಳು ಸಂಸ್ಕೃತಿಯನ್ನು ಬಿಂಬಿಸುವ ಚಿತ್ತಾರದೊಂದಿಗೆ ಜೈ ತುಳುನಾಡು ಚಿತ್ರಗಳನ್ನು ಮೂಡಿಸುದರ ಮೂಲಕ ವಿಶೇಷವಾಗಿ ಕುದ್ರೆಬೆಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ ನೋಡುಗರ ಮನಸೆಳೆಯುತ್ತಿದೆ

LEAVE A REPLY

Please enter your comment!
Please enter your name here