ಗುರುದ್ವಾರಕ್ಕೂ ಬಂತು ಕಿಡಿಗೇಡಿಗಳಿಂದ ಬೆದರಿಕೆ ಸಂದೇಶ!

0
56

ಬೀದರ್​: ಕಳೆದ ಕೆಲ ತಿಂಗಳಿಂದ ಕರ್ನಾಟಕದ  ಹಲವೆಡೆ ಕಿಡಿಗೇಡಿಗಳಿಂದ ಹುಸಿ ಬಾಂಬ್​ ಬೆದರಿಕೆಯ ಇ-ಮೇಲ್​ಗಳು ಬಂದಿವೆ. ನಿನ್ನೆ (ಶುಕ್ರವಾರ)ದಂದು ಬೆಂಗಳೂರಿನ ಸುಮಾರು 40 ಶಾಲೆಗಳಿಗೆ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿತ್ತು. ಇದೀಗ ಅದರ ಬೆನ್ನಲ್ಲೇ ನಗರದ ಗುರುದ್ವಾರ ಅಮೃತ ಕುಂಡ ಯಾತ್ರಿಕ ನಿವಾಸದಲ್ಲಿ ಸ್ಫೋಟ ಆಗುತ್ತೆಂದು ಕಿಡಿಗೇಡಿಗಳಿಂದ ಬಾಂಬ್​ ಬೆದರಿಕೆ ಇ-ಮೇಲ್​ ಸಂದೇಶ ಬಂದಿದೆ.

ವಕೀಲ ಅಲೀಂ ಅಲ್ ಬುಕಾರಿ ಎಂಬ ವ್ಯಕ್ತಿಯಿಂದ ಗುರುದ್ವಾರಕ್ಕೆ ಬೆದರಿಕೆ ಇ-ಮೇಲ್​ ಕಳುಹಿಸಲಾಗಿದೆ. ಮೇಲ್ ಬಂದಿರುವ ಕುರಿತು ಪೊಲೀಸ್ ಇಲಾಖೆಗೆ ಗುರುದ್ವಾರ ಆಡಳಿತ ಮಂಡಳಿ‌ ಮಾಹಿತಿ ನೀಡಿದೆ. ಸುದ್ದಿ ತಿಳಿಯುತ್ತಿದ್ದಂತೆ ನಿನ್ನೆ ಗುರುದ್ವಾರದಲ್ಲಿ ಎಸ್​ಪಿ, ಡಿವೈಎಸ್​ಪಿ, ಸರ್ಕಲ್ ಇನ್ಸ್‌ಪೆಕ್ಟರ್ ಸೇರಿ 30ಕ್ಕೂ ಹೆಚ್ಚು ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಮತ್ತು ಡಾಗ್ ಸ್ಕಾಡ್ ಸೇರಿ ವಿಶೇಷ ತಂಡದಿಂದ ಪರಿಶೀಲನೆ ಮಾಡಲಾಗಿದ್ದು, ಯಾವುದೇ ರೀತಿ ಸ್ಫೋಟಕ ಪದಾರ್ಥಗಳು ಪತ್ತೆಯಾಗಿಲ್ಲ.

ಬೆದರಿಕೆ ಇ-ಮೇಲ್​​ನಲ್ಲಿ ಏನಿದೆ?

ತಮಿಳುನಾಡಿನ ಡ್ರಗ್ಸ್ ಸ್ಮಗ್ಲರ್ ಜಾಫರ್ ಸಾದಿಕ್ ಕೃತಿಗಾ ಉದಯನಿಧಿ ಹೆಸರನ್ನು ಬಾಂಬ್​ ಬೆದರಿಕೆ ಇ-ಮೇಲ್​ನಲ್ಲಿ​ ಉಲ್ಲೇಖಿಸಲಾಗಿದೆ. ನಿವೇತಾ ಪೇತುರಾಜ್- ಉದಯನಿಧಿ ಪ್ರಕರಣಗಳು ಬೇರೆಡೆ ಸೆಳೆಯಲು ಸ್ಫೋಟಿಸಲಾಗುತ್ತಿದೆ. ಪಾಕ್​ನ ಐಎಸ್ಐ ಸೆಲ್ಸ್​ಗಳು ಬಾಂಬ್ ಸ್ಫೋಟದ ಸಂಚು ರೂಪಿಸಿವೆ. ಭಕ್ತರ ಮೈಕ್ರೋ ಮೊಬೈಲ್ ಫೋನ್ ಸಿಗ್ನಲ್ ಬಳಸಿ ಸ್ಫೋಟಗೊಳಿಸಲಿದ್ದಾರೆಂದು ಉಲ್ಲೇಖಿಸಲಾಗಿದೆ.

LEAVE A REPLY

Please enter your comment!
Please enter your name here