ಮಂಗಳೂರು/ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದಲ್ಲಿ ಆಘಾತಕಾರಿ ಘಟನೆಯೊಂದು
ನಡೆದಿದೆ. ಹುಡುಗಿಯರನ್ನು ಮಿಸ್‌ಯೂಸ್ ಮಾಡೋ ಜಾಲದ ಮಾಹಿತಿ ಬಿಚ್ಚಿಟ್ಟು ಯುವಕ ಆತ್ಮಹ*ತ್ಯೆಗೆ ಶರಣಾಗಿದ್ದಾನೆ. ಸಂತೋಷ್ ಗಣಪತಿ ನಾಯ್ಕ (26), ಆತ್ಮಹತ್ಯೆ ಮಾಡಿಕೊಂಡ ಯುವಕ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಬೆನ್ನೂರು ಚಿಕ್ಕತೌಡತ್ತಿ ನಿವಾಸಿಯಾಗಿರುವ ಸಂತೋಷ್ ಸಾವಿಗೆ ಶರಣಾಗುವ ಮುನ್ನ ಹುಡುಗಿಯರನ್ನು ಮಿಸ್‌ಯೂಸ್ ಮಾಡೋ ಜಾಲದ ಕುರಿತು ಎಳ ಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಜಾಲದ ಬಗ್ಗೆ ಆಡಿಯೋ ಹಾಗೂ ಪೋಟೋ ಎಡಿಟ್ ಮಾಡಿದ ವಿಡಿಯೋ ಹಂಚಿ ಕೊಂಡಿದ್ಧಾನೆ.
ಅಲ್ಲದೇ ಸಿದ್ಧಾಪುರ ಕಾಂಗ್ರೆಸ್ ನಾಯಕರ ವಿರುದ್ಧವೂ ಗಂಭೀರ ಆರೋಪ ಮಾಡಿದ್ದಾನೆ. ಹುಡುಗಿಯರ ಮಿಸ್‌ಯೂಸ್ ಮಾಡೋ ಜಾಲವನ್ನು ಪತ್ತೆ ಹಚ್ಚಿದ ಹಿನ್ನೆಲೆಯಲ್ಲಿ ಸಿದ್ದಾಪುರ ತಾಲೂಕಿನ ಚನಮಾಂವದ ಚರಣ್, ಲೋಕೇಶ್, ಮನೋಜ್ ಹಾಗೂ ಇತರೆ 4 ಜನರು ಮನೆಗೆ ಬಂದು ಬೆದರಿಕ ಹಾಕಿದ್ದಾರೆ. ಇದರಿಂದ ಹೆದರಿಕೊಂಡ ಸಂತೋಷ್, ಸಿದ್ಧಾಪುರದ ತಾಲೂಕಿನ ಕಾನಹಳ್ಳಿ ಬಳಿ ದೂಪದಕಾನು ಅರಣ್ಯದಲ್ಲಿ ಅಕೇಶಿಯಾ ಮರಕ್ಕೆ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ಧಾನೆ.
ಸಂತೋಷ್ ಫೇಸ್‌ಬುಕ್‌ನಲ್ಲಿ ಯುವತಿಯ ಫೇಕ್ ಪ್ರೊಫೈಲ್ ಮಾಡಿ ಜಾಲವನ್ನು ತನ್ನ ಬಲೆಗೆ ಬೀಳಿಸಿದ್ದ. ಹುಡುಗಿಯಂತೆ ಮಾತನಾಡಿ, ಅವರಿಂದ ಮಾಹಿತಿ ಪಡೆದು ಒಂದಷ್ಟು ಹಣ ಕೂಡಾ ಪಡೆದಿದ್ದ. ಆದರೆ, ಫೇಕ್ ಪ್ರೊಫೈಲ್ ಹುಡುಗಿಯದ್ದಲ್ಲ ಸಂತೋಷನದ್ದು ಎಂದು ತಿಳಿದು ಆತನಿಗೆ ಬೆದರಿಕೆ ಹಾಕಿದ್ದಾರೆ.
ಅಲ್ಲದೇ, ಮನೆಗೆ ತೆರಳಿ ಗಲಾಟೆ ಮಾಡಿ ಆತನ ಟ್ಯಾಬ್‌ಗಳನ್ನು ಕೂಡಾ ತೆಗೆದುಕೊಂಡು ಹೋಗಿದ್ದಾರೆ. ತಾನು ಪ್ರೀತಿಸಿದ ಯುವತಿ ಅಪೇಕ್ಷಾ ಕೂಡಾ ಈ ಜಾಲಕ್ಕೆ ಬೆಂಬಲ ನೀಡುತ್ತಿರುವುದಾಗಿ ಆಡಿಯೋದಲ್ಲಿ ಹೇಳಿಕೊಂಡಿದ್ದಾನೆ. ಜಾಲದ ಬಗ್ಗೆ, ಆಡಿಯೋ ಹಾಗೂ ಪೋಟೋ ಎಡಿಟ್ ಮಾಡಿದ ವಿಡಿಯೋ ಸಹ ಹಂಚಿ ಕೊಂಡಿದ್ದಾನೆ. ಆರೋಪಿಗಳಿಗೆ ಕಾಂಗ್ರೆಸ್ ನಾಯಕರು ಬೆಂಬಲವಾಗಿ ನಿಂತಿರುವ ಬಗ್ಗೆ ಆಡಿಯೋದಲ್ಲಿ ಹೇಳಿದ್ದಾನೆ. ತಾನು ಪ್ರೀತಿಸಿದ ಯುವತಿಯನ್ನು ಜಾಲದಿಂದ ರಕ್ಷಣೆ ಮಾಡಲು ಇಷ್ಟೆಲ್ಲಾ ಮಾಡಿದ್ದೆ. ಆದರೆ, ಕೊನೆಗೆ ಪ್ರೀತಿಸಿದ ಯುವತಿಯೇ ಜಾಲಕ್ಕೆ ಬೆಂಬಲವಾಗಿ ನಿಂತಿದ್ದಾಳೆ. ಇನ್ನು ನನಗೇನು ಬೇಡ, ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಆಡಿಯೋ ಮಾಡಿ ಬಳಿಕ ನೇಣು ಹಾಕಿಕೊಂಡಿದ್ದಾನ.
ಈ ಸಂಬಂಧ ಮೃತ ಸಂತೋಷ್ ತಂದೆ ಗಣಪತಿ ಅವರು ಸಿದ್ಧಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.