ಮರದಿಂದ ಹಲಸಿನ ಕಾಯಿ ತೆಗೆಯಲು ಹೋಗಿ ಆಯತಪ್ಪಿ ಬಿದ್ದು ಯುವಕ ಸಾವು

0
655

ಮುಲ್ಕಿ:ಕಿನ್ನಿಗೋಳಿ ಸಮೀಪದ ಬಾಬಾಕೋಡಿ ಎಂಬಲ್ಲಿ ಮರದಿಂದ ಹಲಸಿನ ಕಾಯಿ ತೆಗೆಯಲು ಹೋಗಿ ಆಯತಪ್ಪಿ ಬಿದ್ದು ಯುವಕನೋರ್ವ ಸಾವನ್ನಪ್ಪಿದ್ದಾನೆ
ಮೃತ ಯುವಕನನ್ನು ಕರ್ನೀರೆ ನಿವಾಸಿ ಕೆಮ್ಮಡೆಯಲ್ಲಿ ವಾಸ್ತವ್ಯವಿದ್ದ ಹರೀಶ್ (40)ಎಂದು ಗುರುತಿಸಲಾಗಿದೆ
ಮೃತ ಹರೀಶ್ ತೆಂಗಿನ ಮರ ಏರಿ ತೆಂಗಿನಕಾಯಿ ಕೊಯ್ಯುವ ವೃತ್ತಿ ನಡೆಸುತ್ತಿದ್ದು ಕಿನ್ನಿಗೋಳಿ ಸಮೀಪದ ಬಾಬಾಕೋಡಿ ಎಂಬಲ್ಲಿ ಫೆಲಿಕ್ಸ್ ಡಿಸೋಜಾ ಎಂಬವರ ಮನೆಯಲ್ಲಿ ತೆಂಗಿನಕಾಯಿ ಕೊಯ್ದು ಬಳಿಕ ಹಲಸಿನ ಹಣ್ಣಿನ ಮರಕ್ಕೆ ಹತ್ತಿ ಹಲಸಿನ ಕಾಯಿ ಕೊಯ್ಯುವ ವೇಳೆ ಆಯ ತಪ್ಪಿ ಬಿದ್ದು ಕಾಂಕ್ರೀಟ್ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗಳಾಗಿ ಸಾವನ್ನಪ್ಪಿದ್ದಾರೆ
ಮೃತ ಹರೀಶ್ ಅವರು ಮರ ಕಡಿಯುವ ಕೆಲಸ ನಿರ್ವಹಿಸುತ್ತಿದ್ದು ಕಳೆದ ವರ್ಷದ ಹಿಂದೆ ಕಿನ್ನಿಗೋಳಿಯ ಮುಖ್ಯ ರಸ್ತೆ ಬದಿಯಲ್ಲಿ ಮರದ ರೆಂಬೆ ಕಡಿಯಲು ಮರ ಹತ್ತಿದ್ದು ಮರದಲ್ಲಿಯೇ ತಲೆಸುತ್ತಿ ಸಿಲುಕಿದ್ದರು, ಆ ಸಂದರ್ಭ ಅದೇ ದಾರಿಯಲ್ಲಿ ಹೋಗುತ್ತಿದ್ದ ಪಟ್ಟೆ ನಿವಾಸಿ ವಿಜಯ್ ಅಮೀನ್ ಮರ ಹತ್ತಿ ಹಗ್ಗದಲ್ಲಿ ಹರೀಶ್ ಅವರನ್ನು ಮರದ ರೆಂಬೆಗೆ ಕಟ್ಟಿ ಅಪಾಯವನ್ನು ತಪ್ಪಿಸಿದ್ದರು, ನಂತರ ಯಂತ್ರದ ಮೂಲಕ ಕೆಳಗಿಳಿಸಲಾಗಿತ್ತು. ಮೃತ ಹರೀಶ್ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here