ಕೊರಿಯನ್ ಗೇಮ್ ಮೋಹಕ್ಕೆ ಬಲಿಯಾದ ಯುವಕ

0
35

ಧಾರವಾಡ : ಕೊರಿಯನ್ ಗೇಮ್ ಮೋಹಕ್ಕೆ ಬಲಿಯಾದ ಯುವಕ ನೇ‌ಣಿಗೆ ಶರಣಾದ ಘಟನೆ ಧಾರವಾಡ ನಗರದ ಮಂಗಳಗಟ್ಟಿ ಪ್ಲಾಟ್ ನಲ್ಲಿ ನಡೆದಿದೆ.

20 ವರ್ಷದ ವಿಕಾಸ್ ಆತ್ಮಹತ್ಯೆ ಮಾಡಿಕೊಂಡಿರುವ ಯುವಕ . ಘಟನೆ ಬಳಿಕ ಪೊಲೀಸರು ಆತನ ಮೊಬೈಲ್ ನ್ನು ವಶಕ್ಕೆ ಪಡೆದಿದ್ದು, ಮೊಬೈಲ್ ಪರಿಶೀಲನೆ ವೇಳೆ ಕೊರಿಯನ್ ಗೇಮ್ಸ್ ಪತ್ತೆಯಾಗಿದೆ. ಕೊರಿಯನ್ ಗೆಮ್ಸ್ ಗೆ ವಿಕಾಸ್ ವ್ಯಸನಿ ಆಗಿದ್ದ ಎಂಬ ವಿಚಾರ ತನಿಖೆ ವೇಳೆ ಗೊತ್ತಾಗಿದೆ.

ಪಿಯುಸಿ ಮುಗಿಸಿ ಮನೆಯಲ್ಲೇ ಇದ್ದ ವಿಕಾಸ್ ಯಾರಿಗೂ ಗೊತ್ತಿಲ್ಲದೇ ಗೆಮ್ಸ್ ಆಡುತ್ತಿದ್ದ ಎನ್ನಲಾಗಿದ್ದು ಆತ್ಮಹತ್ಯೆಗೂ ಮುನ್ನ ನನ್ನ ಸಾವಿಗೆ ನಾನೇ ಕಾರಣ ಎಂದು ಸೆಲ್ಸ್ ಮೆಸೇಜ್ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here