ಬಾಯಲ್ಲಿ ಪಟಾಕಿ ಹಚ್ಚಿಕೊಂಡ ಯುವಕ..!

0
185

ಉತ್ತರ ಪ್ರದೇಶ: ದೀಪಾವಳಿ ಹಬ್ಬವೇ ಹಾಗೆ ಸಂಭ್ರಮ ಸಡಗರ ತುಂಬಿರುತ್ತದೆ. ಬೆಳಕಿನ ಹಬ್ಬವು ಪಟಾಕಿ ಸದ್ದು ಇಲ್ಲದೇ ಪೂರ್ಣ ಗೊಳ್ಳುವುದೇ ಇಲ್ಲ. ಕೆಲವರು ಈ ಪಟಾಕಿಯನ್ನು ಕೈಯಲ್ಲಿ ಹಿಡಿದು ಬೆಂಕಿ ಹಚ್ಚಿಕೊಂಡು ಅಪಾಯವನ್ನು ಮೈ ಮೇಲೆ ಎಳೆದುಕೊಳ್ಳುತ್ತಾರೆ. ಪಟಾಕಿಯನ್ನು ನೆಲದ ಮೇಲಿಟ್ಟು ಬೆಂಕಿ ಹಚ್ಚುತ್ತೇವೆ. ಆದರೆ ಇಲ್ಲೊಬ್ಬ ಯುವಕನು ಬೇರೆಯದ್ದೇ ಈ ರೀತಿ ಪಟಾಕಿ ಹೊಡೆಯಲು ಮುಂದಾಗಿದ್ದಾನೆ. ಈ ಯುವಕನು ಬಾಯಲ್ಲಿ ಪಟಾಕಿ ಇಟ್ಟುಕೊಂಡು ಲೈಟರ್‌ನಿಂದ ಬೆಂಕಿ ಹಚ್ಚಿಕೊಂಡಿದ್ದಾನೆ. ಆ ಬಳಿಕ ಭಯವಿಲ್ಲದೇ ತೋಳುಗಳನ್ನು ಚಾಚಿ ನಿಂತುಕೊಂಡಿದ್ದು ಈ ಘಟನೆಯೂ ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲಿ ನಡೆದಿದೆ ಎನ್ನಲಾಗಿದೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು ನೆಟ್ಟಿಗರು ಯುವಕನ ವಿರುದ್ಧ ಗರಂ ಆಗಿದ್ದಾರೆ.

ವಿನೋದ್‌ ಕಲೆ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಯುವಕನು ದೀಪಾವಳಿ ಹಬ್ಬದಂದು ಪಟಾಕಿಯನ್ನು ವಿಭಿನ್ನ ರೀತಿಯಲ್ಲಿ ಹೊಡೆಯಲು ಮುಂದಾಗಿದ್ದಾನೆ. ಕೆಂಪುಬಣ್ಣದ ಶರ್ಟ್ ಧರಿಸಿರುವ ಯುವಕನೊಬ್ಬ ತನ್ನ ಬಾಯಿಯಲ್ಲಿ ಪಟಾಕಿಯನ್ನು ಇಟ್ಟುಕೊಂಡಿರುವುದನ್ನು ನೀವು ನೋಡಬಹುದು. ಆ ಬಳಿಕ ಲೈಟರ್‌ನಿಂದ ಬೆಂಕಿ ಹಚ್ಚಿದ್ದು, ಪಟಾಕಿ ಹೊತ್ತಿಕೊಂಡಾಗ ಕಿಡಿಗಳು ಹಾರಲು ಶುರುವಾಗಿದೆ. ಯುವಕ ಮಾತ್ರ ತನ್ನ ಎರಡು ತೋಳುಗಳನ್ನು ಚಾಚಿ ನಿಂತಿದ್ದು, ಏಕಾಏಕಿ ಪಟಾಕಿಯು ಸಿಡಿದಿದೆ. ಆದರೆ ಅದೃಷ್ಟವಶಾತ್  ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.

ಈ ವಿಡಿಯೋ ಹದಿನಾರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಒಬ್ಬ ಬಳಕೆದಾರ ಜೀವಕ್ಕೆ ಬೆಲೆಯೇ ಅನ್ನೋದಕ್ಕೆ ಇದು ನೈಜ ಉದಾಹರಣೆ ಎಂದಿದ್ದಾರೆ. ಮತ್ತೊಬ್ಬರು ಇವ್ನು ಗಾಜಿಯಾಬಾದ್‍ ರಾವಣ ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ದಯವಿಟ್ಟು ಈ ರೀತಿ ಯಾರು ಪ್ರಯತ್ನಿಸಬೇಡಿ ಸುರಕ್ಷಿತವಾಗಿರಿ ಎಂದು ಸಲಹೆ ನೀಡಿದ್ದಾರೆ.

https://www.instagram.com/reel/DP29Zf5krXY/?utm_source=ig_embed&ig_rid=80057930-663e-44fc-9b28-b040ddd33a78

LEAVE A REPLY

Please enter your comment!
Please enter your name here