ಕಾಲೇಜು ಪೀಸು ಕಟ್ಟಲು ಹೋದ ಯುವತಿ ನಾಪತ್ತೆ

0
174

ಉಡುಪಿ: ಬಡಗಬೆಟ್ಟು ಗ್ರಾಮದ ಬೈಲೂರು ಬಬ್ಬುಸ್ವಾಮಿ ದೇವಸ್ಥಾನದ ಬಳಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಮೂಲತಃ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಯುವತಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ.

ಸಹನಾ (24) ನಾಪತ್ತೆಯವರು. ಇವರು ಸೆ. 4ರಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಕಾಲೇಜಿಗೆ ಫೀಸು ಕಟ್ಟಲೆಂದು ಮನೆಯಿಂದ ಹೋದವರು ವಾಪಾಸು ಬಾರದೆ ನಾಪ್ತತೆಯಾಗಿರುತ್ತಾರೆ.

5 ಅಡಿ 9 ಇಂಚು ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here