ಮಂಗಳೂರು: ಐಸ್‌ಕ್ರೀಂ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಕಾಸರಗೋಡು ಮೂಲದ ಯುವಕನೊಬ್ಬ ತಾನು ವಾಸವಿದ್ದ ಕದ್ರಿ ಶಿವಬಾಗ್ ಬಳಿಯ ಅಪಾರ್ಟ್ ಮೆಂಟ್ ಒಂದರಲ್ಲಿ ಕೈ ಕೊಯ್ದುಕೊಂಡು ಬಳಿಕ ಫ್ಯಾನಿಗೆ ನೇಣುಬಿಗಿದು ಕೊಂಡು ಆತ್ಮಹತ್ಯೆಗೈ ಮಾಡಿಕೊಂಡಿದ್ದಾನೆ.
ಕುಂಬಳೆ ನಿವಾಸಿ ಪೆರುವಾಡ್ ನಿವಾಸಿ ರೋಶನ್ (22) ಮೃತ ಯುವಕ.
ಹಲವು ಸಮಯದಿಂದ ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ. ಮಂಗಳವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಬುಧವಾರ ಬೆಳಗ್ಗೆ 10 ಗಂಟೆಯಾದರೂ ಕೊಠಡಿಯಿಂದ ಯುವಕ ಹೊರಗೆ ಬಾರದ ಕಾರಣ ಬಾಗಿಲು ತೆಗೆದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಆತ್ಮಹತ್ಯೆಗೆ ಮುನ್ನ ಇದು ನನ್ನ ಕೊನೆಯ ಸ್ಟೇಟಸ್ ಅಂತ ಹಾಕಿದ್ದ. ಆತ ರಕ್ತದಲ್ಲಿ ಹುಡುಗಿಯೊಬ್ಬಳ ಹೆಸರನ್ನೂ ಬರೆದಿದ್ದ ಎನ್ನಲಾಗಿದೆ. ಈ ಹಿಂದೆಯೂ ಒಂದು ಬಾರಿ ಈತ ಆತ್ಮಹತ್ಯೆಗೆ ಯತ್ನಿಸಿದ್ದ ಎಂಬ ಮಾಹಿತಿ ಲಭಿಸಿದೆ. ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

