ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಆಟಿ ಊಟದ ಸಂಭ್ರಮವು ನೆರವೇರಿತು.
ಶ್ರೀ ದುರ್ಗಾ ಆದಿಶಕ್ತಿ ದೇವಿಯ ಮಹಾಪ್ರಸಾದವಾಗಿ ಬಂದಂತಹ ಭಕ್ತರುಗಳಿಗೆ ಸಾಮೂಹಿಕವಾಗಿ ಆಟಿಯ ವಿಶೇಷ ಖಾದ್ಯವನ್ನು ಉಣಬಡಿಸಲಾಯಿತು. ನುರಿತ ಬಾಣಸಿಗರಿಂದ ತಯಾರಿಸಿದ ಖಾದ್ಯದಲ್ಲಿ ಸೊಪ್ಪು ಉಪ್ಪಿನಕಾಯಿ, ದೊಡ್ಡಪತ್ರೆ ಚಟ್ನಿ ಕೆಸು ಚಟ್ನಿ, ಹುರುಳಿ ಚಟ್ನಿ, ನೆಲನೆಲ್ಲಿ ಕೋಸಂಬರಿ, ಉಪ್ಪು ಡಚ್ಚೀರ್ ಪಲ್ಯ, ಹುರುಳಿ ಕಾಳಿನ ಪಲ್ಯ, ಗೆಣಸು ಕಾಳು ಪಲ್ಯ, ಪುದಿನಾ ರೈಸ್, ಪತ್ರೊಡೆತಿರಿ, ಪತ್ರೊಡೆ ಒಗ್ಗರಣೆ, ಪತ್ರೊಡೆ ಗಶಿ, ಅನ್ನ,ಹುರುಳಿ ಸಾರು, ತಿಮರೆ, ಆದ್ರ ಸೊಪ್ಪಿನ ತಂಬುಳಿ, ಕೆಸುವಿನ ದಂಟಿನ ಮೆಣಸಿನಕಾಯಿ, ಬೇಯಿಸಿದ ಮಾವಿನಕಾಯಿ ಚಟ್ನಿ, ಹಲಸಿನ ಬೀಜ, ತೇಟ್ಲಾ ಗಶಿ, ಕಣಿಲೆ ಅವಿಲ್, ನುಗ್ಗೆ ಸೊಪ್ಪಿನ ಗಟ್ಟಿಬಜೆ, ತೋಜoಕ್ ವಡೆ, ಹಲಸಿನ ಎಲೆ ಗಟ್ಟಿ, ಅರಶಿನ ಎಲೆ ಕಟ್ಟಿ, ಹಾಲ್ಬಾಯಿ, ಹಲಸಿನ ಹಣ್ಣಿನ ಅಪ್ಪ, ಹಲಸಿನ ಪಾಯಸ, ಮಸಾಲೆ ಮಜ್ಜಿಗೆ ಹೀಗೆ ವಿಶೇಷ ಅಡುಗೆ ತಯಾರಿಸಿ ಉಣ ಬಡಿಸಲಾಯಿತು.
ಶ್ರೀ ಕ್ಷೇತ್ರದಲ್ಲಿ ಆಟಿ ತಿಂಗಳ ಒಂದು ಶುಕ್ರವಾರ ದೇವಿ ಯ ಮಹಾಪ್ರಸಾದವಾಗಿ ಪ್ರತಿ ವರ್ಷವೂ ಕೂಡ ಆಚರಿಸಲಾಗುತ್ತದೆ ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ.