ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಗುರುವಾಯನಕೆರೆ ಹಾಗೂ ಜನಜಾಗೃತಿ ವೇದಿಕೆ ಕಣಿಯೂರು ವಲಯ ಮತ್ತು ಶ್ರೀ ಉಮಾಮಹೇಶ್ವರ ದೇವಸ್ಥಾನ ಮೆಲ್ಲೆಂಗಲ್ಲು ಇದರ ಜಂಟಿ ಆಶ್ರಯದಲ್ಲಿ ಪೂಜ್ಯರ ಹುಟ್ಟು ಹಬ್ಬದ ಪ್ರಯುಕ್ತ ಶ್ರೀ ಉಮಾಮಹೇಶ್ವರ ದೇವರಿಗೆ ಸೀಯಾಳ ಅಭಿಷೇಕ ಹಾಗೂ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಲೆಂಗಲ್ಲು ಉಮಾಮಹೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾದ ಸದಾನಂದ ಮೆಲ್ಲಂಟ ವಹಿಸಿದ್ದರು,ಮುಖ್ಯ ಅತಿಥಿಯಾಗಿ ಮಾಜಿ ತಾಲೂಕು ಸಮಿತಿ ಸದಸ್ಯರು ಶ್ರೀಮತಿ ರಾಜಶ್ರೀ.ಎಸ್.ಹೆಗ್ಡೆ ರವರು ಬಾಗವಹಿಸಿ ಪೂಜ್ಯರು ಸಮಾಜಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಮಾಹಿತಿ ನೀಡಿದರು,ವಿಶೇಷ ಆಹ್ವಾನಿತರಾಗಿ ಧರ್ಣಪ್ಪ ಗೌಡ ಬಾನಡ್ಕ ಒಕ್ಕೂಟದ ವಲಯಾಧ್ಯಕ್ಷರಾದ ರಮಾನಂದ ಪೂಜಾರಿ,ಹಾಗೂ ಉಮಾಮಹೇಶ್ವರ ದೇವಸ್ಥಾನ ಮಲ್ಲೆಂಗಲ್ಲು ಇದರ ಆಡಳಿತ ಮೊಕ್ತೇಸರರಾದ ಚಿದಾನಂದ ರಾವ್ ಕೊಲ್ಲಜೆ ರವರು ಉಪಸ್ಥಿತರಿದ್ದರು.
ರೈತ ಬಂಧು ಮಾಲಕರು ಶಿವಶಂಕರ್ ನಾಯಕ್ ರವರು ಸ್ವಾಗತ ಮತ್ತು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೀತಾ ರವರು ಪ್ರಾರ್ಥನೆ ಮಾಡಿದರು.ಕಣಿಯೂರು ವಲಯದ ಮೇಲ್ವಿಚಾರಕರಾದ ಶಿಲ್ಪಾ ರವರು ಕಾರ್ಯಕ್ರಮವನ್ನು ನಿರೂಪಿಸಿದರು,ಸೇವಾಪ್ರತಿನಿಧಿಯಾದ ಸೀತಾರಾಮ ಆಳ್ವ ರವರು ಧನ್ಯವಾದ ನೀಡಿದರು,ಈ ಸಂಧರ್ಭದಲ್ಲಿ ಜನಜಾಗೃತಿ ವಲಯಾಧ್ಯಕ್ಷರಾದ ಪ್ರಫುಲ್ಲ ಚಂದ್ರ ಅಡ್ಯಂತಾಯ,C.A ಬ್ಯಾಂಕ್ ಪದ್ಮುಂಜ ಇದರ ಅಧ್ಯಕ್ಷರಾದ ರಕ್ಷಿತ್ ಶೆಟ್ಟಿ,ತಿಮ್ಮಯ್ಯ ಗೌಡ ಪದ್ಮುಂಜ,ಸುದರ್ಶನ ಹೆಗ್ಡೆ ಕಣಿಯೂರು ಗುತ್ತು,ಸೀತಾರಾಮ ಮಡಿವಾಳ ಗ್ರಾಮ ಪಂಚಾಯತ್ ಅಧ್ಯಕ್ಷರು ಕಣಿಯೂರು,ವಿಠಲ ಶೆಟ್ಟಿ ಕೊಲ್ಲೊಟ್ಟು ಹಾಗೂ ಊರಿನ ಗಣ್ಯರು,ಊರಿನ ಭಾಕ್ತಾಭಿಮಾನಿಗಳು ಉಪಸ್ಥಿತರಿದ್ದರು.

