ಮಂಗಳೂರು: ನಾಡಿನ ಕೋಟ್ಯಂತರ ಭಕ್ತರ ನಂಬಿಕೆ, ಶ್ರದ್ದೆಗಳ ಮತ್ತು ಧಾರ್ಮಿಕ ಕೇಂದ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಪೂಜ್ಯ ಧರ್ಮಾಧಿಕಾರಿಯವರ ವಿರುದ್ಧ ಕೆಲ ಸಮಾಜ ವಿರೋಧಿ ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ (ಯೂಟ್ಯೂಬ್, ಫೇಸ್ ಬುಕ್, ಇನ್ಸ್ಟಾಗ್ರಾಮ್, ವಾಟ್ಸಪ್ ಮುಂತಾದವುಗಳು) ಅಪಪ್ರಚಾರ ,ನಿಂದನೆ, ಪ್ರಚೋದನಾತ್ಮಕ, ಅವಮಾನಕರ ಮತ್ತು ಅಸಹ್ಯಕರ ಹೇಳಿಕೆಗಳನ್ನು ನೀಡುವುದರ ಮೂಲಕ ಸಮಾಜದಲ್ಲಿ ಅಶಾಂತಿಯನ್ನು ಭಯದ ವಾತಾವರಣವನ್ನು ಸೃಷ್ಟಿಸಿ ಸಾಮಾಜಿಕ ಸ್ವಾಸ್ತ್ಯವನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಸಮಾಜದ ಮೇಲೆ ದುಷ್ಪರಿಣಾಮ ಬೀರುವುದರ ಜೊತೆಗೆ ಕೋಟ್ಯಂತರ ಭಕ್ತರ ಶ್ರದ್ದೆ ಮತ್ತು ನಂಬಿಕೆಗಳಿಗೆ ತೀವ್ರ ಘಾಸಿಯನ್ನು0ಟು ಮಾಡಿದೆ. ಸಮಾಜದಲ್ಲಿ ಶಾಂತಿ, ನೆಮ್ಮದಿ, ಸಾಮರಸ್ಯಯನ್ನು ಕಾಪಾಡುವ ನಿಟ್ಟಿನಲ್ಲಿ ಇಂತಹ ಕೃತ್ಯಗಳನ್ನು ಮಾಡುವ ದುಷ್ಟ ಶಕ್ತಿಗಳನ್ನು ದಮನಿಸುವ ಸಲುವಾಗಿ ಈ ಪ್ರಕರಣದ ಹಿಂದಿರುವ ಎಲ್ಲಾ ಸಮಾಜ ವಿರೋಧಿ ವ್ಯಕ್ತಿಗಳ, ಗುಂಪುಗಳ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂಬ ಬೇಡಿಕೆಯೊಂದಿಗೆ ನಾರಾವಿ ಮತ್ತು ಕುತ್ಲೂರು ಗ್ರಾಮದ ಶ್ರೀ ಕ್ಷೇತ್ರ ಧರ್ಮಸ್ಥಳದ ಭಕ್ತಾಭಿಮಾನಿಗಳು ಮಂಗಳೂರಿಗೆ ತೆರಳಿ ಜಿಲ್ಲಾಧಿಕಾರಿಯವರಿಗೆ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಸೂರ್ಯನಾರಾಯಣ ದೇವಸ್ಥಾನ ನಾರಾವಿಯ ಮಾಜಿ ಆಡಳಿತ ಮೊಕ್ತೇಸರರಾದ ವಸಂತ ಭಟ್, ಬೆಳ್ತಂಗಡಿ ತಾಲೂಕು PWD ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ವಿನಯ್ ಹೆಗ್ಡೆ, ಸಮಾಜ ಸೇವಕರಾದ ಕುಕ್ಕುಜೆ ರಾಮಚಂದ್ರ ಭಟ್, ಜಿಲ್ಲಾ ಕೃಷಿಕ ಸಮಾಜದ ಪ್ರತಿನಿಧಿ ಮಹಾವೀರ್ ಜೈನ್, ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜವರ್ಮ ಜೈನ್, ನಿಕಟ ಪೂರ್ವ ಉಪಾಧ್ಯಕ್ಷರಾದ ಉದಯ ಹೆಗ್ಡೆ,ಸಂಘ ಪರಿವಾರದ ಹಿರಿಯ ಕಾರ್ಯಕರ್ತರಾದ ರತ್ನಾಕರ ಭಟ್ ಹೊಳೆಹೊದ್ದು, ಡಾಕಯ್ಯ ಪೂಜಾರಿ ಕುತ್ಲೂರು, ಕುತ್ಲೂರು ಹಾಲು ಉತ್ಪದಕರ ಸಂಘದ ಮಾಜಿ ಅಧ್ಯಕ್ಷರು ಮತ್ತು ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ತುಂಗಪ್ಪ ಬಂಗೇರ,ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೇಂದ್ರ ಒಕ್ಕೂಟ ಗುರುವಾಯನಕೆರೆ ಅಧ್ಯಕ್ಷರಾದ ಸದಾನಂದ ಬಂಗೇರ, ನಾರಾವಿ ಒಕ್ಕೂಟದ ಅಧ್ಯಕ್ಷರಾದ ಪ್ರವೀಣ್ S, ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ರಾಜೇಂದ್ರ ಕುಮಾರ್, ಜನಸೇವಾ ಟ್ರಸ್ಟ್ (ರಿ) ನಾರಾವಿ ಅಧ್ಯಕ್ಷರಾದ ಅಭಿಜಿತ್ ಜೈನ್ ಮತ್ತು ಕ್ಷೇತ್ರದ ಪ್ರಮುಖ ಭಕ್ತಾಭಿಮಾನಿಗಳಾದ ರಾಜೇಂದ್ರ ಪ್ರಸಾದ್, ಸುರೇಂದ್ರ ಕುಮಾರ್ ,ರತ್ನಾಕರ ಬಡೆಕ್ಕಿಲ, ಸುಂದರ ದೇವಾಡಿಗ, ಪ್ರಕಾಶ್, ಮೋಹನ್, ಶೀತಲ್, ಪ್ರಮೀಳಾ ಭಟ್, ಧರ್ಮಸ್ಥಳ ಜ್ಞಾನ ವಿಕಾಸ ಶಿಕ್ಷಕಿ ಆಶಾ ರವಿ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

