ಒಮನ್‌ನಲ್ಲಿ ಅಪಘಾತ : ಕಾಪು ಯುವಕ ಬಲಿ

0
115

ಉಡುಪಿ : ಕೊಲ್ಲಿ ರಾಷ್ಟ್ರವಾದ ಒಮನ್‌ನಲ್ಲಿ ನಡೆದ ಅಪಘಾತವೊಂದರಲ್ಲಿ ಕಾಪು ತಾಲೂಕಿನ ಯುವಕರೊಬ್ಬರು ಮೃತ ಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕಾಂಜರಕಟ್ಟೆಯ ಚೇತನ್ ಕುಲಾಲ್ (26) ಮೃತ ಯುವಕ.

ಉಡುಪಿ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್‌ನ 2016ನೇ ಸಾಲಿನ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಚೇತನ್ ಕುಲಾಲ್ ಮಂಗಳೂರಿನ ಶ್ರೀನಿವಾಸ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದರು. ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡು, ದೊಡ್ಡಮ್ಮನ ಆಶ್ರಯದಲ್ಲಿ ಬೆಳೆದಿದ್ದ ಚೇತನ್, ತಂಗಿಯನ್ನು ಅಗಲಿದ್ದಾರೆ. ಚೇತನ್ ಅಕಾಲಿಕ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಹಾಗೂ ವಿದ್ಯಾಪೋಷಕ್ ಕುಟುಂಬ ತೀವ್ರ ಸಂತಾಪ ವ್ಯಕ್ತಪಡಿಸಿದೆ.

LEAVE A REPLY

Please enter your comment!
Please enter your name here