ಪುತ್ತೂರು : ನಗರದ ಮಹಾಲಕ್ಷ್ಮೀ ಕೋಲ್ಡ್ ಹೌಸ್ ಪಕ್ಕದ ಟೈಮ್ ಸೆಂಟರ್ ವಾಚ್ ರಿಪೇರಿ ಮಳಿಗೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡ ಘಟನೆ ನಡೆದಿದೆ.
ಸಂಸ್ಥೆಯ ಮಾಲಿಕ ವಸಂತ್ ಅವರು ಎಂದಿನಂತೆ ಬೆಳಿಗೆ, ಅಂಗಡಿ ಬಾಗಿಲು ತರೆದು ದೇವರಿಗೆ ದೀಪ ಹಚ್ಚುವ ವೇಳೆ ಆಕಸ್ಮಿಕವಾಗಿ ಕೈ ತಗುಲಿ ದೀಪ ಕೆಳಗಿಟ್ಟಿದ್ದ ಬಾಕ್ಸ್ ಮೇಲೆ ಬಿದ್ದು ಬೆಂಕಿ ಹತ್ತಿಕೊಂಡಿದೆ.
ಒಮ್ಮೆಲೆ ಬೆಂಕಿ ‘ಹತ್ತಿಕೊಂಡಿದ್ದರಿಂದ ವಿಚಲಿತರಾದ ವಸಂತ್ ಅವರು ಏನು ಮಾಡಬೇಕೆಂದು ಯೋಚಿಸುವಷ್ಟರಲ್ಲಿ ಬೆಂಕಿ ಕೆನ್ನಾಲಿಗೆ ಹೊರಚಾಚಿದೆ. ಹೊಗೆ ಅವರಿಸಿದನ್ನು ಕಂಡು ಶಿಕ್ಷಣ ಕಾರ್ಯಪ್ರವೃತ್ತರಾದ ಅಕ್ಕಪಕ್ಕದ ಜನ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ .
ವಸಂತ್ ಅವರ ಕೈಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿದ್ದು ಬಿಟ್ಟರ ಅಲ್ಪ ಪ್ರಮಾಣದ ಹಾನಿ ಸಂಭವಿಸಿದೆ. ಒಟ್ಟಿನಲ್ಲಿ ನಡೆಯಬಹುದಾಗಿದ್ದ ದುರಂತವೊಂದು ಸಾರ್ವಜನಿಕರ ಸಹಕಾರದಿಂದ ತಪ್ಪಿದೆ.

