ನಂದಳಿಕೆ: ಜು. 20ರಂದು M.K. ಫ್ರೆಂಡ್ಸ್ ಮಾವಿನಕಟ್ಟೆ ನೇತೃತ್ವದಲ್ಲಿ “ಕೆಸರ್‌ಡ್ ಒಂಜಿ ದಿನ” ಗ್ರಾಮೀಣ ಕ್ರೀಡೋತ್ಸವ

0
50

ಕಾರ್ಕಳ: M.K. ಫ್ರೆಂಡ್ಸ್ ಮಾವಿನಕಟ್ಟೆ ಸಂಸ್ಥೆಯ ನೇತೃತ್ವದಲ್ಲಿ ನಾಲ್ಕನೇ ವರುಷದ ಗ್ರಾಮೀಣ ಕ್ರೀಡೋತ್ಸವ “ಕೆಸರ್‌ಡ್ ಒಂಜಿ ದಿನ” ಕಾರ್ಯಕ್ರಮವು ಜು. 20ರಂದು ಬೆಳಿಗ್ಗೆಯಿಂದ ಸಂಜೆಯವರೆಗೆ ಕಾರ್ಕಳ ನಂದಳಿಕೆಯ ಮಾವಿನಕಟ್ಟೆ ಮನ್‌ಬೊಟ್ಟು ಗದ್ದೆ ಇಲ್ಲಿ ಬಹಳ ಅದ್ದೂರಿಯಾಗಿ ನಡೆಯಲಿದೆ.

ಕೆಸರಿನ ಗದ್ದೆಯಲ್ಲಿ ಪುರುಷರಿಗೆ ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೆಳಿಗ್ಗೆ 8.30ಕ್ಕೆ ಕ್ರೀಡೋತ್ಸವವಕ್ಕೆ ಚಾಲನೆ ದೊರೆಯಲಿದ್ದು, ಗಣೇಶ್ ಕುಡ್ವ ಆಡಳಿತ ಮೊಕ್ತೇಸರರು, ಶ್ರೀ ಮಹಮ್ಮಾಯಿ ದೇವಸ್ಥಾನ, ಮಾವಿನಕಟ್ಟೆ,, ಸುರೇಶ್ ಕೋಟ್ಯಾನ್, ನಿಟ್ಟೆ ಪರಪ್ಪಾಡಿ, ಸಂತೋಷ್ ಶೆಟ್ಟಿ ಗ್ರಾಮ ಪಂಚಾಯತ್ ಸದಸ್ಯರು ನಂದಳಿಕೆ ಇವರು ಉಪಸ್ಥಿತಿ ಇರಲಿದ್ದಾರೆ. ಬೆಳಿಗ್ಗೆ 11-00ಕ್ಕೆ ನಡೆಯುವ ಸಭಾ ಕಾರ್ಯಕ್ರಮಕ್ಕೆ ಪೂನಾದ ಉದ್ಯಮಿ ಪ್ರಕಾಶ್ ಶೆಟ್ಟಿ ಬಜಗೋಳಿ ಅವರು ಚಾಲನೆ ನೀಡಲಿದ್ದು, ಸಭಾರಂಭದ ಅಧ್ಯಕ್ಷತೆಯನ್ನು ನವಿ ಮುಂಬಯಿಯ ಯುವ ಹೊಟೇಲ್ ಉದ್ಯಮಿ ಸುಕೇಶ್ ಶೆಟ್ಟಿ ತೆಳ್ಳಾರು ಅವರು ವಹಿಸಲಿದ್ದಾರೆ. ವಿಶೇಷ ಆಮಂತ್ರಿತರಾಗಿ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಅವರು ಆಗಮಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಪ್ರಸಿದ್ಧ ಉದ್ಯಮಿಗಳಾದ ಇನ್ನಾದ ದಿವಾಕರ ಶೆಟ್ಟಿ, ವಿಖ್ಯಾತ್ ಶೆಟ್ಟಿ ಕಾರ್ಕಳ, ಹಿಂದೂ ಮುಖಂಡ ಗುರುಪ್ರಸಾದ್ ಶೆಟ್ಟಿ ನಾರಾವಿ, ಸಾಮಾಜಿಕ ಕಾರ್ಯಕರ್ತ ಅರುಣ್ ನಿಟ್ಟೆ, ಹಿಂದೂ ಮುಖಂಡ ರತ್ನಾಕರ ಅಮೀನ್ ಅಜೆಕಾರು ಇವರು ಆಗಮಿಸಲಿದ್ದಾರೆ.

ಸಂಜೆ 5-30 ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಖ್ಯಾತ ಧಾರ್ಮಿಕ ಮುಂದಾಳು ಸುಹಾಸ್ ಹೆಗ್ಡೆ ಚಾವಡಿ ಅರಮನೆ ನಂದಳಿಕೆ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರೋಪದ ಮುಖ್ಯ ಅತಿಥಿಗಳಾಗಿ ಕೆ. ಕೃಷ್ಣಮೂರ್ತಿ ಆಚಾರ್ಯ, ನಿಕಟಪೂರ್ವ ಅಧ್ಯಕ್ಷರು ಶ್ರೀ ಜಯ ದುರ್ಗಾಪರಮೇಶ್ವರಿ ದೇವಸ್ಥಾನ ಕನ್ನರ್ಪಾಡಿ ಉಡುಪಿ, ಧಾರ್ಮಿಕ ಮುಖಂಡ ರವೀಂದ್ರ ಶೆಟ್ಟಿ ಬಜಗೋಳಿ ಅಧ್ಯಕ್ಷರು ಸ್ಟೋನ್ & ಕ್ರಷರ್ ಮಾಲಕರ ಸಂಘ ಕರ್ನಾಟಕ, ಮಣಿಪಾಲದ ಹೊಟೇಲ್ ಉದ್ಯಮಿ ಹಾಗೂ ಕಂಬಳ ಕ್ಷೇತ್ರದ ಮಹಾನ್ ಸಾಧಕ ನಂದಳಿಕೆ ಶ್ರೀಕಾಂತ್ ಭಟ್ , ಪ್ರಸಿದ್ಧ ಉದ್ಯಮಿ ಕಾರ್ಕಳ ಟೈಗರ್ಸ್ ಖ್ಯಾತಿಯ ಬೋಳ ಪ್ರಶಾಂತ್ ಕಾಮತ್, ನಂದಳಿಕೆಯ ಉದ್ಯಮಿ ರವಿದಾಸ್ ಕುಡ್ವ, ಖ್ಯಾತ ಉದ್ಯಮಿ ಪ್ರಭಾಕರ್ ಶೆಟ್ಟಿ ಇಂದಾರು, ಬೆಳ್ಮಣ್ಣಿನ ಉದ್ಯಮಿ ನಿತ್ಯಾನಂದ ಶೆಟ್ಟಿ, ಉದ್ಯಮಿ ಹರೀಶ್ ಪಕಲ ಇವರ ದಿವ್ಯ ಉಪಸ್ಥಿತಿ ಇರಲಿದೆ.

ವಾಲಿಬಾಲ್ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ನಂದಳಿಕೆಯ ಯುವ ಕ್ರೀಡಾಪಟು ಸೃಜನ್ ಶೆಟ್ಟಿ ನಂದಳಿಕೆ ಅವರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ನಂದಳಿಕೆ ಕೆಸರಿನ ಗದ್ದೆಯಲ್ಲಿ ನಡೆಯಲಿರುವ ಈ ಕ್ರೀಡಾಕೂಟದ ಸುಂದರ ಚಿತ್ರೀಕರಣ/ ರೀಲ್ಸ್ ಮಾಡುವ ಹವ್ಯಾಸಿ ವೀಡಿಯೋ ಗ್ರಾಫ್‌ರುಗಳಿಗೆ ಆಕರ್ಷಕ ನಗದು ಬಹುಮಾನ (ಪ್ರಥಮ, ದ್ವಿತೀಯ ತೃತೀಯ) ಘೋಷಿಸಲಾಗಿದೆ.

LEAVE A REPLY

Please enter your comment!
Please enter your name here