ಶಾರದಾಕೃಷ್ಣ ಪ್ರಶಸ್ತಿಗೆ ನಟ ಸೇತುರಾಮ್​ ಆಯ್ಕೆ

0
10


ಉಡುಪಿ: ರಾಘವೇಂದ್ರ ಚಾರಿಟೇಬಲ್​ ಟ್ರಸ್ಟ್​ ಹೆಬ್ರಿ ಪ್ರಾಯೋಜಕತ್ವದಲ್ಲಿ ಸಂಸತಿ ವಿಶ್ವ ಪ್ರತಿಷ್ಠಾನ ವತಿಯಿಂದ ನೀಡುವ ಶಾರದಾಕೃಷ್ಣ ಪ್ರಶಸ್ತಿಗೆ ಈ ಬಾರಿ ಬೆಂಗಳೂರಿನ ಕನ್ನಡ ಕಿರುತೆರೆ ನಟ, ರಂಗನಿರ್ದೇಶಕ, ನಟ ಎಸ್​.ಎನ್​. ಸೇತುರಾಮ್​ ಆಯ್ಕೆಯಾಗಿದ್ದಾರೆ ಎಂದು ಸಂಸತಿ ವಿಶ್ವ ಪ್ರತಿಷ್ಠಾನದ ಸಂಚಾಲಕ ರವಿರಾಜ್​ ಎಚ್​?.ಪಿ. ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜನವರಿ 24ರಂದು 5 ಗಂಟೆಗೆ ಐವೈಸಿ ಸಭಾಂಗಣದಲ್ಲಿ ನಡೆಯುವ ಸಂಸತಿ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿ ಪತ್ರ, ಫಲಕ ಹಾಗೂ 50,000 ರೂ. ನಗದು ಪುರಸ್ಕಾರ ಒಳಗೊಂಡಿದೆ ಎಂದು ಮಾಹಿತಿ ನೀಡಿದರು.
ಪರಿಚಯ
ಎಸ್​.ಎನ್​. ಸೇತುರಾಮ್​ ಅವರು 1976 ರಲ್ಲಿ ಆದಾಯ ತೆರಿಗೆ ಇಲಾಖೆಯಲ್ಲಿ ಇನ್ಸ್​ಪೆಕ್ಟರ್​ ಆಗಿ ಸೇರಿ 2007ರಲ್ಲಿ ಆದಾಯ ತೆರಿಗೆ ಉಪ ಆಯುಕ್ತರಾಗಿ ಸ್ವಯಂಪ್ರೇರಿತ ನಿವೃತ್ತಿ ಹೊಂದಿದರು. 1981 ರಿಂದ ಕರ್ನಾಟಕದ ಹವ್ಯಾಸಿ ರಂಗಭೂಮಿಯೊಂದಿಗೆ ನಂಟು ಹೊಂದಿದ್ದು, “ಯಯಾತಿ”, “ಭಾರತೀಪುರ”, “ಭೂತೋ”, “ಕೇಳು ಜನಮೇ ಜಯ” ಮುಂತಾದ ನಾಟಕಗಳಲ್ಲಿ ನಟಿಸಿದ್ದಾರೆ. ಇವರ “ನಿಮಿತ್ತ” ನಾಟಕವು ಬಳ್ಳಾರಿಯ ಸ್ವಾಯತ್ತ ಕಾಲೇಜಿನಲ್ಲಿ ಪದವಿ 2 ನೇ ಸೆಮಿಸ್ಟರ್​ಗೆ ಪಠ್ಯ ಪುಸ್ತಕವಾಗಿದೆ. ಮಾಯಾ ಮೃಗ, ಮನ್ವಂತರ ಮತ್ತು ಮುಕ್ತ ಧಾರಾವಾಹಿಗಳಲ್ಲಿ ನಟಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ವಿಶ್ವನಾಥ್​ ಶೆಣೈ, ಅಧ್ಯಕ್ಷ ಪ್ರೊ. ಶಂಕರ್​, ಉಪಾಧ್ಯೆ ಡಾ. ಭಾರ್ಗವಿ ಐತಾಳ್​ , ರಾಘವೇಂದ್ರ ಚಾರಿಟೇಬಲ್​ ಟ್ರಸ್ಟ್​ ಸದಸ್ಯ ವಾಸುದೇವ ಅಡಿಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here