ಹೆಬ್ರಿ : ಕಲಬುರಗಿ ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘ ರಾಜ್ಯ ಘಟಕ ಸಾವಿತ್ರಿಬಾಯಿ ಫುಲೆ ಹಾಗೂ ಫಾತಿಮಾ ಶೇಕ್ ರವರ ೧೯೫ನೇ ಜನ್ಮದಿನೋತ್ಸವದಲ್ಲಿ ಪ್ರತಿಭಾವಂತರಾಗಿರುವ ಕಾರ್ಕಳ ತಾಲ್ಲೂಕು ಬೆಳ್ಮಣ್ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಹಶಿಕ್ಷಕಿ ಅಜೆಕಾರು ಡಾ.ಮಾಲತಿ ಪೈ ಅವರಿಗೆ ” ಆದರ್ಶ ಯೋಗಾಂಜಲಿ” ಪ್ರಶಸ್ತಿ ಲಭಿಸಿದ್ದು ಕಲಬುರಗಿಯಲ್ಲಿ ಇತ್ತೀಚೆಗೆ ಸ್ವೀಕರಿಸಿದರು. ಶಿಕ್ಷಣ ಮತ್ತು ಯೋಗದ ಬಗ್ಗೆ ರಾಜ್ಯಮಟ್ಟ – ರಾಷ್ಟ್ರಮಟ್ಟದ ಹಲವಾರು ಪ್ರಶಸ್ತಿಗಳನ್ನು ಡಾ.ಮಾಲತಿ ಪೈ ಕಾರ್ಕಳ ಪಡೆದಿದ್ದಾರೆ. ವಿವಿಧ ಸ್ನಾತಕೋತ್ತರ ಪದವಿ ಪಡೆದು ಭಿನ್ನ ಸಾಮಥ್ರ್ಯದ ಮಕ್ಕಳ ಶಿಕ್ಷಣದಲ್ಲಿ ವಿಶೇಷ ತರಬೇತಿ ಪಡೆದಿದ್ದಾರೆ. ಮಾನಸಿಕ ಸ್ವಾಸ್ಥ್ಯ ವಿಷಯದಲ್ಲಿ ಎಂಫಿಲ್ ಮತ್ತು ಯೋಗ ವಿಜ್ಞಾನದಲ್ಲಿ ಪಿಎಚ್‍ಡಿ ಪಡೆದಿದ್ದಾರೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವು ಸೆಮಿನಾರ್ ನಡೆಸಿಕೊಟ್ಟಿದ್ದಾರೆ.
ಡಾ.ಮಾಲತಿ ಪೈ ಕಾರ್ಕಳ : ವ್ಯಕ್ತಿ ಪರಿಚಯ
ಡಾ. ಮಾಲತಿ ಪೈ ಕಾರ್ಕಳ ಉದ್ಯೋಗ : ಶಿಕ್ಷಕಿ,ಸರಕಾರಿ ಪದವಿಪೂರ್ವ ಕಾಲೇಜು, ಬೆಳ್ಮಣ್ಣು
ವಿದ್ಯಾರ್ಹತೆ : 1) ಎಂ.ಎಸ್ಸಿ. ಇನ್ ಯೋಗ & ಪಿಎಚ್‍ಡಿ 2) ಎಂ.ಎ. ಇನ್ ಎಜುಕೇಶನ್, 3) ಕನ್ನಡ ಎಂ.ಎ 4) ಹಿಂದಿ ಎಂ.ಎ. 5) ಸಮಾಜಶಾಸ್ತ್ರ ಎಂ.ಎ 6) ತುಳು ಎಂ.ಎ.
ವಿಶೇಷ ಶಿಕ್ಷಣ : 1) ಬಿ.ಎಡ್., ಭಿನ್ನ ಸಾಮಥ್ರ್ಯದ ಮಕ್ಕಳ ಶಿಕ್ಷಣದಲ್ಲಿ ವಿಶೇಷ ತರಬೇತಿ ಹೊಂದಿರುವುದು. (ಬ್ರೈಲ್‍ಲಿಪಿ ಶಿಕ್ಷಣ), 2) ಎಂ.ಎಡ್., ಎಂ.ಫಿಲ್ ಪದವಿ(ಮಾನಸಿಕ ಸ್ವಾಸ್ಥ್ಯ) 3) ಪಿಎಚ್‍ಡಿ (ಯೋಗ ವಿಜ್ಞಾನ) ಶಿಕ್ಷಣ ಮತ್ತು ಯೋಗದ ಬಗ್ಗೆ ರಾಜ್ಯಮಟ್ಟ/ರಾಷ್ಟ್ರಮಟ್ಟದ ಪ್ರಶಸ್ತಿಗಳು ಬಂದಿವೆ. ತಾಲೂಕು/ಜಿಲ್ಲೆ/ರಾಜ್ಯ/ ರಾಷ್ಟ್ರಮಟ್ಟದ ಸೆಮಿನಾರ್/ವೆಬಿನಾರ್‍ಗಳಲ್ಲಿ ಉಪನ್ಯಾಸ-ತರಬೇತಿ ನೀಡಿಕೆ. ಸುಮಾರು 28 ವರ್ಷಗಳಿಂದ ಯೋಗ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದು, ವಿವಿಧ ಸ್ಥಳೀಯ ಟಿವಿ ವಾಹಿನಿಗಳಲ್ಲಿ ಯೋಗ ಶಿಕ್ಷಣ ತರಬೇತಿ ನೀಡುತ್ತಿರುವುದು. ಆಕಾಶವಾಣಿಯಲ್ಲೂ ಕಾರ್ಯಕ್ರಮ ಪ್ರಸ್ತುತಿ. ಕಳೆದ 28 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಶಿಕ್ಷಣ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಳ್ಳುವಿಕೆ.

1 )ಕೋವಿಡ್-19 ಲಾಕ್‍ಡೌನ್ ಸಂದರ್ಭದಲ್ಲಿ ಸುಮಾರು 3 ತಿಂಗಳ ಕಾಲ ಆನ್‍ಲೈನ್ ಮೂಲಕ ಉಚಿತವಾಗಿ ಮುದ್ರೆ, ಪ್ರಾಣಾಯಾಮ ತರಬೇತಿಗಳನ್ನು ಹಮ್ಮಿಕೊಂಡಿರುವುದು. ಹಲವಾರು ಸಂಘಸಂಸ್ಥೆಗಳ ಸಂಯೋಜನೆಯಲ್ಲಿ ಪೋಷಕರಿಗೆ ತರಬೇತಿ ನೀಡಿರುವುದು.ತರಬೇತಿ ನೀಡಿರುವುದು. ವಿದ್ಯಾರ್ಥಿಗಳಿಗೆ, ಶಾಲಾ ಮಕ್ಕಳಿಗೆ ಯೋಗ ಶಿಕ್ಷಣ ನೀಡುವುದು ಮತ್ತು ಆಸಕ್ತರಿಗೆ ಯೋಗ ತರಬೇತಿ ನೀಡಿಕೆ.
ವಿಶೇಷ ಪರಿಣಿತಿ : ಸೈಲೆಂಟ್ ಮೆಡಿಟೇಶನ್(ವಿಪಶ್ಶನಧ್ಯಾನ), ಕಲರ್ ಮೆಡಿಟೇಶನ್, ಚಕ್ರ ಮೆಡಿಟೇಶನ್.
ಹವ್ಯಾಸ : ಯಕ್ಷಗಾನ ಪಾತ್ರ ನಿರ್ವಹಣೆ, ಸಮಾಜಸೇವೆ, ಬಡವ/ದುರ್ಬಲರಿಗೆ ಸಹಕಾರ (ಸಂಘಸಂಸ್ಥೆಗಳ ನೆರವಿನೊಂದಿಗೆ), ಯೋಗ ತರಬೇತಿ(ಆನ್‍ಲೈನ್ ಮೂಲಕವೂ)
ತಿಳಿದಿರುವ ಭಾಷೆಗಳು: 1) ಕೊಂಕಣಿ 2)ಕನ್ನಡ 3) ಹಿಂದಿ 4)ಇಂಗ್ಲಿಷ್ 5)ತುಳು 6) ತೆಲುಗು.
ಕಾರ್ಯ ಸಾಧನೆ ವಿವರ
ಶೈಕ್ಷಣಿಕ ಕ್ಷೇತ್ರದಲ್ಲಿ ಯೋಗ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡುಕುಡೂರು ಇಲ್ಲಿನ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿದ್ದು, ಇಲ್ಲಿನ ನೂರಾರು ವಿದ್ಯಾರ್ಥಿಗಳು ತಾಲೂಕು ಮಟ್ಟ, ಜಿಲ್ಲಾಮಟ್ಟ, ವಲಯ
ಮಟ್ಟಗಳಲ್ಲಿ ಭಾಗವಹಿಸಿರುವುದು. ಬಳಿಕ ವರ್ಗಾವಣೆಗೊಂಡಾಗ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುದ್ರಾಡಿ ಇಲ್ಲಿನ ಅನೇಕ ವಿದ್ಯಾರ್ಥಿಗಳು ತಾಲೂಕು, ಜಿಲ್ಲೆ, ರಾಜ್ಯ ಮಟ್ಟದ ಯೋಗಾಸನ ಸ ್ಪzs ರ್Éಗಳಲ್ಲಿ ಬಹುಮಾನ ವಿಜೇತರಾಗುವಲ್ಲಿ ತರಬೇತಿ ನೀಡಿರುವುದು.
ಮಂಗಳೂರು ಸಂದರ್ಭದಲ್ಲಿ ‘ತುಳು ವಿಶ್ವವಿದ್ಯಾನಿಲಯದಲ್ಲಿ ತುಳು ಎಂ.ಎ. ಅಧ್ಯಯನ ನಡೆಸುತ್ತಿರುವ ನಾಡ್‍ದ ಬೇಲೆಲೆಡ್ ಯೋಗದ ನಿಲೆ’ ಎಂಬ ಸಂಯೋಜಿತ ಸಂಪ್ರಬಂಧ (ಡಿಸರ್ಟೇಶನ್) ಸಲ್ಲಿಕೆ
ಖಾಸಗಿ ಟಿವಿ ವಾಹಿನಿಗಳು, ಆನ್‍ಲೈನ್ ಮಾದ್ಯಮಗಳಲ್ಲಿ ಹಾಗೂ ಆಕಾಶವಾಣಿ ಮಾದ್ಯಮದ ಮೂಲಕ ವಿದ್ಯಾರ್ಥಿಗಳಿಗೆ ಸ್ಮರಣಶಕ್ತಿ ಸಂವರ್ಧನೆ ಹಾಗೂ ಪರೀಕ್ಷೆಗೆ ಸಮರ್ಥ ಸಿದ್ಧತೆ ನಡೆಸುವ ಬಗ್ಗೆ ತರಬೇತಿ ನೀಡಿರುವುದು ಮತ್ತು ಇಂತಹ ವಿಷಯಗಳಲ್ಲಿ ಯೋಗದ ಅನ್ವಯದ ಮೂಲಕ ಹೆಚ್ಚು ಪರಿಣಾಮಕಾರಿಯಾಗಿಸಿರುವುದು.
ಸಾವಿರಾರು ಶಿಕ್ಷಕರಿಗೆ ಯೋಗ ತರಬೇತಿ ನೀಡಿರುವುದು. ಖಾಸಗಿ ವಿದ್ಯಾಸಂಸ್ಥೆಗಳ ಆಹ್ವಾನದ ಮೇರೆಗೆ ಅಲ್ಲಿನ ಮಕ್ಕಳಿಗೂ ಕಲಿಕಾ ಕೌಶಲ ಸಂವರ್ಧನೆ ಕುರಿತಂತೆ ಯೋಗಾಸನ, ಧ್ಯಾನ, ಮುದ್ರೆ, ಆಕುಪ್ರೆಶರ್, ಆಕುಪಂಕ್ಚರ್ ತರಬೇತಿ ನೀಡಿರುವುದು.
ನಿಧಾನ ಕಲಿಕೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯುವಲ್ಲಿ ಯೋಗಾಭ್ಯಾಸದ ತರಬೇತಿ ನೀಡಿರುವುದು ಮತ್ತು ನೀಡುತ್ತಿರುವುದು. ಕೆನರಾ ಬ್ಯಾಂಕ್ ಸಿಬ್ಬಂದಿಗಳಿಗೆ ನಿಯಮಿತವಾಗಿ ಯೋಗ, ಪ್ರಾಣಾಯಾಮ ತರಬೇತಿ ನೀಡಿರುವುದು. ಪ್ರಸಕ್ತ ಕರ್ತವ್ಯ ನಿರ್ವಹಿಸುತ್ತಿರುವ ಸರಕಾರಿ ಪದವಿಪೂರ್ವ ಕಾಲೇಜು ಬೆಳ್ಮಣ್ಣು ಇಲ್ಲಿ ಕಳೆದ ಹತ್ತು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಮುಂಜಾನೆ ವೇಳೆ ಆನ್‍ಲೈನ್ ಮೂಲಕ ಯೋಗ ತರಬೇತಿ ನೀಡುತ್ತಿರುವುದು ಮತ್ತು ಉತ್ತಮ ಫಲಿತಾಂಶ ಸಾಧಿಸುವಲ್ಲಿ ಶ್ರಮಿಸುತ್ತಿರುವುದು. ಎಂಎಸ್‍ಸಿ ಇನ್ ಯೋಗ ಹಾಗೂ ಪಿಎಚ್‍ಡಿ ವಿದ್ಯಾರ್ಥಿಗಳಿಗೆ ಯೋಗ
ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.
ಹಾಗೆಯೇ ಮಂಜುನಾಥ ಪೈ ಸರಕಾರಿ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. ಶಿಕ್ಷಕರ ಮಾಸಿಕ ಸಮಾಲೋಚನೆ, ತರಬೇತಿ, ಎಂಡಿಪಿ ತರಬೇತಿ, ಪಠ್ಯಪುಸ್ತಕ ರಚನೆ ತರಬೇತಿಯ, ಕಂಪ್ಯೂಟರ್ ತರಬೇತಿಯ ಸಂದರ್ಭದಲ್ಲಿ ಒತ್ತಡ ನಿವಾರಣೆಗಾಗಿ ಹಾಗೂ ನೆನಪು ಶಕ್ತಿ ಮತ್ತು ಏಕಾಗ್ರತೆ ಹೆಚ್ಚಿಸುವ ಸಲುವಾಗಿ ಮಾಡಲೇಬೇಕಾದ ಹಲವಾರು ಮುದ್ರೆಗಳು, ಪ್ರಾಣಾಯಾಮ, ಆಸನಗಳ ಬಗ್ಗೆ ಮಾಹಿತಿಯನ್ನು ಪ್ರತ್ಯಕ್ಷವಾಗಿ ನೀಡಲಾಗಿದೆ.
ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ ಇವರಿಗೆ ಪ್ರತಿವರ್ಷವೂ ಯೋಗಾಸನ ತರಬೇತಿಯ ಕಾರ್ಯಾಗಾರವನ್ನು ನಡೆಸಲಾಗುತ್ತಿದೆ. ತಾಲೂಕು ಮಟ್ಟ, ಜಿಲ್ಲಾಮಟ್ಟಮತ್ತು ರಾಜ್ಯ ಮಟ್ಟದ ತೀರ್ಪುಗಾರರಾಗಿ ಯೋಗ ಸ್ಪರ್ಧೆಯನ್ನು ನಡೆಸಿಕೊಡಲಾಗಿದೆ. ಪ್ರಸ್ತುತ ಉಡುಪಿ ಜಿಲ್ಲಾ ಯೋಗ ಸಂಘಟನೆಯ ಕಾರ್ಯದರ್ಶಿಯಾಗಿ ಕೆಲಸವನ್ನು ನಿರ್ವಹಿಸಲಾಗುತ್ತಿದೆ.
3) ಸೇವಾದಳ ಸ್ಕೌಟ್ಸ್ ಗೈಡ್ಸ್ಹ ಲವಾರು ಸಭಾ ಕಾರ್ಯಕ್ರಮಗಳಲ್ಲಿ ಕಾರ್ಯಕ್ರಮವನ್ನು ಶಿಕ್ಷಕರ ತರಬೇತಿ, ಹಲವಾರು ಕಾರ್ಯಾಗಾರಗಳಲ್ಲಿ, ಯೋಗದ ಬಗ್ಗೆ ಅರಿವು ಮೂಡಿಸುವ ಜಾಗೃತಿ ಹಮ್ಮಿಕೊಳ್ಳಲಾಗಿದೆ.
ಅತ್ಯಂತ ಪ್ರತಿಷ್ಠಿತ ಕಾರ್ಕಳದ ಸುಂದರ ಪುರಾಣಿಕ ಪ್ರೌಡಶಾಲೆ ಸರಕಾರಿ ಪ್ರೌಢಶಾಲೆ ಸೂಡ ಇಲ್ಲಿ ಯೋಗದ ತರಬೇತಿಗಳನ್ನು ನೀಡಲಾಗಿದೆ. 2015ರಲ್ಲಿ ಇಲ್ಲಿ ಹಾಗೂ ಸರಕಾರಿ ಪ್ರೌಢಶಾಲೆ, ಕಾಬೆಟ್ಟು ಇಲ್ಲಿ ಹೆಣ್ಣು ಮಕ್ಕಳ ಆರೋಗ್ಯದ ಜಾಗೃತಿ ಕುರಿತು ಶಿಬಿರದಲ್ಲಿ ಯೋಗದ ತರಬೇತಿಯನ್ನು ನೀಡಲಾಗಿದೆ. ಹಿರಿಯ ಪ್ರಾಥಮಿಕ ಶಾಲೆ ಪಡುಕುಡೂರು, ಮುನಿಯಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುದ್ರಾಡಿ, ಸರಕಾರಿ ಮಾದರಿ ಶಾಲೆ ಅಜೆಕಾರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಣ್ಣೆಹೊಳೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುದರಂಗಡಿ, ಸರಕಾರಿ ಪದವಿ ಪೂರ್ವ ಕಾಲೇಜು ಹೆಬ್ರಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ಹೆಬ್ರಿ, ಮಂಜುನಾಥ ಪೈ ಪ್ರಥಮ ದರ್ಜೆ ಕಾರ್ಕಳ, ಶ್ರೀ ವೆಂಕಟರಮಣ ಮಹಿಳಾ ಕಾಲೇಜು ಕಾರ್ಕಳ, ಶ್ರೀ ನಾರಾಯಣಗುರು ಆಂಗ್ಲ ಮಾದ್ಯಮ ಶಾಲೆ ಪಡುಬೆಳ್ಳೆ, ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ಮಣ್ಣು, ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕುಕ್ಕುಂದೂರು ಮುಂತಾದ ಶಾಲೆಗಳಲ್ಲಿ ನಿರಂತರವಾಗಿ ಯೋಗಶಿಕ್ಷಣವನ್ನು ನೀಡಲಾಗಿದೆ.
ನಿರಂತರ ಶಿಕ್ಷಣ ಕೇಂದ್ರ ಕಾರ್ಕಳ ಇಲ್ಲಿ ತರಬೇತಿಯನ್ನು ನೀಡಲಾಗಿತ್ತು. ಶ್ರೀರಾಮಮಂದಿರ ಕುಕ್ಕುಂದೂರು, ಮುದ್ರಾ ಹಾಗೂ ಪ್ರಾಣಾಯಾಮದ ಬಗ್ಗೆ ಕಾರ್ಕಳ ಇಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಮಹಿಳೆಯರಿಗೆ ಯೋಗ ತರಬೇತಿಯನ್ನು 2014ರಲ್ಲಿ ನೀಡಲಾಗಿದೆ.ಹಲವಾರು ವಿದ್ಯಾರ್ಥಿಗಳು ಡಿಪ್ಲೊಮಾ ಇನ್ ಯೋಗ ಪಡೆದು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಎಂಎಸ್ಸಿ ಇನ್ ಯೋಗ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ರಿದಮ್ಯಾಟಿಕ ಯೋಗ, ಆರ್ಟಿಸ್ಟಿಕ್ಯೋ ಗ ಹಾಗೂ ಕಠಿಣ ಆಸನಗಳ ಪ್ರಾತ್ಯಕ್ಷಿಕೆಯನ್ನು ನೀಡಲಾಗಿದೆ.
4 ) ರಾಷ್ಟ್ರಮಟ್ಟದ ಸಿಸಿಇಆರ್‍ಟಿ 21 ದಿನಗಳ ಯೋಗ ತರಬೇತಿಯಲ್ಲಿ ಸೈಲೆಂಟ್ ಮೆಡಿಟೇಶನ್, ಚಕ್ರ ಮೆಡಿಟೇಶನ್ ಹಾಗೂ ಮುದ್ರಾ-ಪ್ರಾಣಾಯಾಮ-ಬಂಧಗಳು ಕುರಿತು ಹೈದರಾಬಾದ್‍ನ ಗೊಂಡಪುರದಲ್ಲಿ ನೀಡಿರುವುದು.
ಸಾಮಾಜಿಕ ಕ್ಷೇತ್ರದಲ್ಲಿ ಯೋಗ 1995ರಲ್ಲಿ ಡಿವೈನ್ ಪಾರ್ಕ್ ಇಲ್ಲಿ 21 ದಿನಗಳ ಸನಿವಾಸ ತರಬೇತಿ ಪಡೆದು ಹಲವಾರು ಮಹಿಳಾ ಸಂಸ್ಥೆಗಳಿಗೆ ತರಬೇತಿ ನೀಡಿರುವುದು. 1997ರಲ್ಲಿ ಧರ್ಮಸ್ಥಳ ಶಾಂತಿವನ ಟ್ರಸ್ಟ್‍ನಿಂದ ಯೋಗ ತರಬೇತಿ ಪಡೆದು ಸಾವಿರಾರು ಮಹಿಳೆಯರಿಗೆ, ಸ್ವಸಹಾಯ ಗುಂಪುಗಳಿಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುವುದು.
ಭಜನಾ ಸಂಘಗಳು,ಯುವ ಹಾಗೂ ಮಹಿಳಾ ಮಂಡಳಿಗಳು, ಲಯನ್ಸ್,ರೋಟರಿಯಂತಹ ಸಂಸ್ಥೆಗಳು, ಆಸ್ಪತ್ರೆಗಳು, ಸಮಾಜಸೇವಾಗಳ ಆಹ್ವಾನದ ಮೇರೆಗೆ ಆಗಾಗ ವಿಶೇಷ ಯೋಗ ತರಬೇತಿಗಳನ್ನು ನೀಡುತ್ತಿರುವುದು.ರಾಷ್ಟ್ರ ಮಟ್ಟದ ಜೈನ್ ನೀಡಲಾಗಿದೆ.ಮಂಗಳೂರು ಜಿಎಸ್‍ಬಿ ಬ್ಯಾಂಕ್ ಪ್ರಾಯೋಜಕತ್ವದಡಿಯಲ್ಲಿ ತಿಳಿಸಿಕೊಡಲಾಯಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಮಿಲನ್ ಸಂಘಟನೆಗೆ ತರಬೇತಿಯನ್ನು ಮಹಿಳಾ ಮಂಡಳಿಯ ಮಹಿಳೆಯರಿಗೆ ಸಿಂಡಿಕೇಟ್ವ ರ್ಣಥೆರಪಿ , ಚಕ್ರಧ್ಯಾನ, ವಿಪಶ್ಶನ ಧ್ಯಾನವನ್ನು ಯೋಜನೆಯ ಸಂಘಟಕರಿಗೆ ಹಾಗೂ ಸದಸ್ಯರಿಗೆ ಹಲವಾರು ಬಾರಿ ಯೋಗ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. 2015ರಲ್ಲಿ ಜಿಎಸ್‍ಬಿ ಸಭಾಭವನ ಕಾರ್ಕಳ ಯೋಗ ತರಬೇತಿಯನ್ನು ನಡೆಸಲಾಗಿದೆ. ಇಲ್ಲಿ ಮಹಿಳೆಯರಿಗಾಗಿ 10 ದಿನಗಳ
ಕಲ್ಪತರು ಹಾಗೂ ಸುರಭಿ ಸಂಘಟನೆ ಬೆಂಗಳೂರು ಇವರಿಗೆ ಮುದ್ರಾ ಥೆರಪಿ, ಚಕ್ರ ಆಕ್ಟಿವೇಶನ್ ಹಾಗೂ ಆಸನ ಪ್ರಾಣಾಯಾಮಗಳ ತರಬೇತಿಯನ್ನು ನೀಡಲಾಗಿದೆ.
ವಿವಿಧ ಸಂಸ್ಥೆಗಳ ಆಯೋಜನೆಯಲ್ಲಿ ಮುದ್ರಾ ಥೆರಪಿ, ಕ್ಲ್ಯಾಪಿಂಗ್ ಥೆರಪಿ(ಕರತಾಡನ ಚಿಕಿತ್ಸೆ) ಇತ್ಯಾದಿಗಳ ಬಗ್ಗೆ ಆನ್‍ಲೈನ್ ಮಾತ್ರವಲ್ಲದೆ ಆಫ್‍ಲೈನ್‍ನಲ್ಲೂ ಉಪನ್ಯಾಸ-ಪ್ರಾತ್ಯಕ್ಷಿಕೆ
ನೀಡಿರುವುದು.
5) ಸಮನ್ವಯ ಸಂಘಟನೆಯ ಆಶ್ರಯದಲ್ಲಿ ಹಲವಾರು ಯೋಗ ಸಂಬಂಧಿ ಸಂವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಕ್ಷತ್ರ ಕ್ಲಬ್‍ಹೌಸ್ ಬೆಂಗಳೂರು ಇವರ ಆಯೋಜನೆಯಲ್ಲಿ ಯೋಗಕ್ಕೆ ಸಂಬಂಧಿಸಿದ ಹಲವು ಸರಣಿ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿರುವುದು. ಗ್ರಾಮಪಂಚಾಯತ್ ಸದಸ್ಯರುಗಳಿಗೆ ತಾಲೂಕು ಮಟ್ಟದ ಇಲಾಖಾಧಿಕಾರಿಗಳಿಗೆ ಹಾಗೂ ಇಲಾಖೆ ಮಟ್ಟದ ಅಧಿಕಾರಿಗಳಿಗೆ
ಯೋಗ ತರಬೇತಿಯನ್ನು ಹಾಗೂ ಪೊಲೀಸ್ ಇಲಾಖೆಯಲ್ಲಿ ಧ್ಯಾನದ ತರಬೇತಿಯನ್ನು ನೀಡಲಾಗಿತ್ತು. ವೈದ್ಯರುಗಳಿಗೆ ಮತ್ತು ನರ್ಸುಗಳಿಗೆ ಯೋಗ ತರಬೇತಿಯನ್ನು, ಸಂವಾದವನ್ನು ಯೋಗದ ಪ್ರಯೋಜನಗಳನ್ನು ತಿಳಿಸಲಾಗಿದೆ.
ಕೊರೊನಾ ಸಂದರ್ಭದಲ್ಲಿ ನಿರಂತರವಾಗಿ ಆನ್‍ಲೈನ್ ಮೂಲಕ ಎಲ್ಲ ವರ್ಗದವರಿಗೂ ಯೋಗಾಸನ ಮತ್ತು ಪ್ರಾಣಾಯಾಮ ತರಬೇತಿಯನ್ನು ನಡೆಸಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಯೋಗ ಪ್ಯಾರಲಿಸಿಸ್ ಬಾಧೆಗೊಳಗಾದಂತಹ ರೋಗಿಗಳಿಗೆ ನಿರಂತರವಾಗಿ ಮೂರು ದಿನಗಳ ಕಾರ್ಯಾಗಾರ/ಶಿಬಿರವನ್ನು ರೋಟರಿ ಆಸ್ಪತ್ರೆ ಕಾರ್ಕಳ ಇಲ್ಲಿ 2021ರಲ್ಲಿ ನಡೆಸಲಾಯಿತು. ಪೇರೆಂಟಲ್ ಯೋಗ ಮತ್ತು ಪ್ರಿ-ನಟಾಲ್ ಯೋಗ ತರಬೇತಿಯನ್ನು ಸೂಕ್ತ ರೀತಿಯಲ್ಲಿ ನೀಡಿರುವುದು.
‘ಯೋಗ ಫಾರ್ ಅಸ್ತಮಾ’ ಎಂಬ ಕಿರುಪುಸ್ತಕವನ್ನು ಹಾಗೂ ಸಪ್ತ ವರ್ಣ ಮುದ್ರಾ ಧ್ಯಾನ ಎಂಬ ಲೇಖನವನ್ನು, ದೈನಂದಿನ ಜೀವನದಲ್ಲಿ ಯೋಗ ಹಾಗೂ ‘ತುಳು ನಾಡಿನಲ್ಲಿ ಯೋಗದ ನೆಲೆ’ ಎನ್ನುವ ಪುಸ್ತಕವನ್ನು ಬರೆಯಲಾಗಿದೆ. ಹಲವಾರು ಮಂದಿ ಯೋಗದಿಂದ ಪ್ರಯೋಜನ ಪಡೆದು, ಗುಣಪಡಿಸಲಸಾದ್ಯವಾದ ಕಾಯಿಲೆಗಳನ್ನು ಗುಣಪಡಿಸಿಕೊಂಡಂತಹ ಅದೆಷ್ಟೋ ಜನರ ಹಾರೈಕೆ ನನ್ನ ಜೊತೆಗಿದೆ. ಡಾ. ವೀಣಾ ಕುಂದಾಪುರ ಪಿಎಚ್‍ಸಿ ಇವರ ಮುತುವರ್ಜಿಯಲ್ಲಿ ಕುಂದಾಪುರದಲ್ಲಿಆಸ್ಪತ್ರೆಯ ಒಳ ಮತ್ತು ಹೊರರೋಗಿಗಳಿಗೆ ತರಬೇತಿಯನ್ನು ನೀಡಿರುವುದು.
6) ಡಾ. ಅರುಣ್ ಪಿಎಚ್‍ಸಿ ಕುಕ್ಕುಂದೂರು ಇವರ ಮುತುವರ್ಜಿಯಲ್ಲಿ ಆಸ್ಪತ್ರೆಯ ಒಳರೋಗಿಗಳಿಗೆ ತರಬೇತಿಯನ್ನು ನೀಡಿರುವುದು. ಎಸ್‍ಡಿಎಂ ಆಯುರ್ವೇದ ಅಸ್ಪತ್ರೆ ಇಲ್ಲಿ ಡಾ. ಶ್ರೀಲತಾ ಪ್ರಭು ಮತ್ತು ಆತ್ರೇಯ
ಆಯುರ್ವೇದಿಕ್ ಜನರಲ್ ಆಸ್ಪತ್ರೆ ಇಲ್ಲಿ ಡಾ. ನಂದಾ ಪೈ ಇವರ ಆಹ್ವಾನದ ಮೇರೆಗೆ ಯೋಗಾಸನ ಮತ್ತು ಪ್ರಾಣಾಯಾಮ ತರಬೇತಿ ನೀಡಿರುವುದು. ಧಾರ್ಮಿಕ ಕ್ಷೇತ್ರಗಳಲ್ಲಿ ಯೋಗ ಕಾರ್ಕಳ ಶ್ರೀ ವೆಂಕಟರಮಣ ದೇವಾಲಯ ಇಲ್ಲಿ ಹತ್ತು ದಿನಗಳ ಧ್ಯಾನ ಮತ್ತು ಮುದ್ರೆ, ವರ್ಣ ಥೆರಪಿ, ಚಕ್ರಗಳ ಬಗ್ಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. 2003ರಲ್ಲಿ ಉನ್ನತ ಮತ್ತು ವೈದ್ಯಕೀಯ ಶಿಕ್ಷಣ ಮಂತ್ರಿಗಳಾಗಿದ್ದ ಡಾ.ವಿ.ಎಸ್. ಆಚಾರ್ಯರ ನೇತೃತ್ವದಲ್ಲಿ ಯೋಗ ತರಬೇತಿಯನ್ನು ಅಜೆಕಾರು ರಾಮಮಂದಿರದಲ್ಲಿ ಸುಮಾರು ಏಳು ದಿನಗಳ ಕಾಲ ನಡೆಸಲಾಗಿತ್ತು. ವಿವಿದ ಕಡೆಗಳಲ್ಲಿ ಭಕ್ತಿಯೋಗಕ್ಕೆ ಸಂಬಂಧಿಸಿ ಉಪನ್ಯಾಸಗಳು. ಡಾ. ಸಂತೋಷ್ ಕುಮಾರ್ ಇವರ ನೇತೃತ್ವದಲ್ಲಿ ಏಳು ದಿನಗಳ ಕಾಲ ಅಜೆಕಾರು ಕೊಡಮಣಿತ್ತಾಯ ಗರಡಿಯ ಪ್ರಾಂಗಣದಲ್ಲಿ ಯೋಗ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು.
ಮಾಧ್ಯಮಗಳ ಮೂಲಕ ಯೋಗ ಮಾಲತಿ ಪೈ ಹರಿಖಂಡಿಗೆ ಹೆಸರಿನಲ್ಲಿ ಯೂಟ್ಯೂಬ್ ಮೂಲಕ ಯೋಗಾಸನ, ಧ್ಯಾನ, ಮುದ್ರೆ ಹಾಗೂ ಯೋಗ ಸಂಬಂಧಿ ಹಲವಾರು ವಿಷಯಗಳ ಬಗ್ಗೆ ಮಾಹಿತಿ ಹಾಗೂ ತರಬೇತಿ
ನೀಡುತ್ತಿರುವುದು.ಸುಮಾರು 13 ಲಕ್ಷ ಕೇಳುಗರನ್ನು ಹೊಂದಿರುವ ವಿಶ್ವವಾಣಿ ಕ್ಲಬ್ ಹೌಸ್‍ನಲ್ಲಿ ಹಲವಾರು ಯೋಗ ಸಂಚಿಕೆಗಳನ್ನು ನಡೆಸಿಕೊಟ್ಟಿರುವುದು ಮತ್ತು ಜನ ಮೆಚ್ಚುಗೆ ಪಡೆದಿರುವುದು. ಫೇಸ್‍ಬುಕ್,
ಯೂಟ್ಯೂಬ್, ಕ್ಲಬ್ ಹೌಸ್ ಮೊದಲಾದ ಸಾಮಾಜಿಕ ಜಾಲತಾಣಗಳಮೂಲಕ ಮತ್ತು ಗೂಗಲ್‍ಮೀಟ್, ಝೂಮ್ ಆ್ಯಪ್ ಮೂಲಕ ಲಕ್ಷಾಂತರ 7 ಮಂದಿಗೆ ಯೋಗ ಹಾಗೂ ಯೋಗ ಪೂರಕ ವಿಷಯಗಳ ಬಗ್ಗೆ, ಯೋಗದ ಮೂಲಕ ವ್ಯಕ್ತಿತ್ವ ವಿಕಸನದ ಬಗ್ಗೆ ತರಬೇತಿ ನೀಡಿರುವುದು ಹಾಗೂ ನೀಡುತ್ತಿರುವುದು.
ನಮ್ಮಟಿವಿ,ಸ್ದಪಂನ, ನಮ್ಮ ಕಾರ್ಲ ನ್ಯೂಸ್ ಮೊದಲಾದ ಸಮೂಹ ಮಾದ್ಯಮಗಳಲ್ಲಿ, ತರಂಗ, ಉದಯವಾಣಿ, ವಿಶ್ವವಾಣಿ, ನ್ಯೂಸ್ ಕಾರ್ಕಳ ಪತ್ರಿಕೆಗಳಲ್ಲಿ ಪ್ರ ತಿವಾರ ಲೇಖನಗಳನ್ನು ಯೋಗ ಸಂವಾದಗಳನ್ನು, ದಿನನಿತ್ಯ ಮಾಡಬೇಕಾದಂತಹ ಯೋಗಾಸನ, ಪ್ರಾಣಾಯಾಮ, ಮುದ್ರೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇನೆ. ಪ್ರಥಮದರ್ಜೆ ಪದವಿಪೂರ್ವ ಕಾಲೇಜುಗಳಿಗೆ ಕೊರೊನಾ ಸಂದರ್ಭ ದಲ್ಲಿ ಕಾಲೇಜು ಹಾಗೂ
ಆನ್‍ಲೈನ್ ತರಗತಿಗಳನ್ನು ಹಮ್ಮಿಕೊಳ್ಳಲಾಗಿತ್ತು.
ವಿಶ್ವಕೊಂಕಣಿ ಕೇಂದ್ರ ಯೂಟ್ಯೂಬ್ ವಾಹಿನಿಯಲ್ಲಿ ಯೋಗ ಸಂವಾದ ಲೈವ್ ಸ್ಟ್ರೀಮಿಂಗ್(23.09.2023)- ಯೋಗದ ವಿವಿಧ ಅಂಶಗಳ ಬಗ್ಗೆ ಪರಿಚಯಿಸುವ ನಿಟ್ಟಿನಲ್ಲಿ ಸಂದರ್ಶನ ಪ್ರಸಾರ. ಸಂಘಸಂಸ್ಥೆಗಳಿಂದ ಪಡೆದ ಪ್ರಶಸ್ತಿಗಳ ವಿವರ
ಗ್ರಾಮಮಟ್ಟ ಅಜೆಕಾರು ಜಿಎಸ್‍ಬಿ ಮಹಿಳಾ ಮಂಡಳಿ ಕಾರ್ಕಳ ಇವರಿಂದ ಜಿಎಸ್‍ಬಿ ಮಂಡಳಿ ಮಂಗಳೂರು ಇವರಿಂದ 2015ರಲ್ಲಿ ದೆಹಲಿ ಕನ್ನಡ ಭವನದಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿ , ತಾಲೂಕು ಪಂಚಾಯತ್ ಕಾರ್ಕಳ 2020- ಇಂಧನ ಸಚಿವ ಸುನಿಲ್ಕು ಮಾರ್ ಅವರಿಂದ ಸನ್ಮಾನ, ರೋಟರಿ, ಲಯನ್ಸ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಂದ ಬೇರೆ ಬೇರೆ ಸಂದರ್ಭಗಳಲ್ಲಿ ಪ್ರಶಸ್ತಿ ಮತ್ತು ಸನ್ಮಾನಗಳು. ಶಿಕ್ಷಕರ ಸಂಘದಿಂದ ಸನ್ಮಾನ , ಸರಕಾರಿ ನೌಕರರ ಸಂಘದಿಂದ ರಾಜ್ಯಮಟ್ಟದ ಪುರಸ್ಕಾರ – ರಾಯಚೂರಿನಲ್ಲಿ.
8)ಮುಂದಿನ ಗುರಿ : ಯೋಗ ಟ್ರಸ್ಟನ್ನು ನಡೆಸಿ ಯೋಗ ಥೆರಪಿಯ ಚಿಕಿತ್ಸಾಲಯವನ್ನು ಪ್ರಾರಂಭಿಸುವುದು ಹಾಗೂ ಧ್ಯಾನ ವಿಪಶ್ಶನ ಮೆಡಿಟೇಶನ್‍ನಂತಹ ಪ್ರಚುರಪಡಿಸುವಿಕೆ. ಪರಿಣಾಮಕಾರಿ ಧ್ಯಾನದ ಮನೆಮನೆಗೂ ಯೋಗ ತಲುಪಿಸುವ ಮೂಲಕ ಜನರು ಸದಾ ಆರೋಗ್ಯ ಜಾಗೃತರಾಗಿರುವಂತೆ ಮಾಡುವುದು. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಅವರಿಗೆ
ಸಹಕಾರಿಯಾಗುವಂತಹ ಯೋಗಾಭ್ಯಾಸವನ್ನು ರೂಢಿಗೊಳಿಸುವುದು.
ಕೈದಿಗಳಿಗೆ ಕಾರಾಗೃಹದಲ್ಲಿ ಯೋಗ ತರಬೇತಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳನ್ನು ನೋಡಲು ಬರುತ್ತಿರುವ ಹಾಗೂ ಆರೈಕೆಗಾಗಿ ಬಂದಿರುವವರಿಗಾಗಿ ಯೋಗದ ತರಬೇತಿಯನ್ನು ಪ್ರತಿದಿನ ಬೆಳಿಗ್ಗೆ
ಮಾಡುವ ಉದ್ದೇಶವಿರಿಸಿಕೊಳ್ಳಲಾಗಿದೆ.
ವಿದ್ಯಾರ್ಥಿಗಳಿಗೆ ನಿರಂತರ ಯೋಗ ಶಿಕ್ಷಣ ನೀಡುವುದು. ತನ್ಮೂಲಕ ಕಲಿಕಾ ಕ್ಷಮತೆಯನ್ನು ವೃದ್ಧಿಗೊಳಿಸುವುದು. ವಿಕಲಚೇತನ ಯೋಗಾಸನ ನೀಡುವುದು.
ಬರೆದಿರುವ ಕೃತಿಗಳು : ವಿದ್ಯಾರ್ಥಿಗಳಿಗೆ ಮತ್ತು ಹಾಗೂ ಶಿಕ್ಷಕರುಗಳಿಗೆ ಪ್ರಾಣಾಯಾಮ, ಸಪ್ತ ಚಕ್ರ ವರ್ಣ ಧ್ಯಾನ ,ತುಳುನಾಡ ಬೇಲೆಲೆಡ್ ಯೋಗದ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಕೆ- 2021-2022) ,ಶಕ್ತಿಶಾಲಿ ಮಿದುಳು(2024) ಉಚಿತವಾಗಿ ಧ್ಯಾನದ ಬಗ್ಗೆ ನಿಲೆ(ತುಳುವಿನಲ್ಲಿ- ಪ್ರಾತ್ಯಕ್ಷಿಕೆಯನ್ನು ಮಂಗಳೂರು .
ಮಾಧ್ಯಮ/ಪತ್ರಿಕೆ/ನಿಯತಕಾಲಿಕೆಗಳಿಗೆ ವಿದ್ಯಾರ್ಥಿಗಳಲ್ಲಿ ಸ್ಮರಣಶಕ್ತಿ ವೃದ್ಧಿ, ಯೋಗ, ಧ್ಯಾನ, ಆರೋಗ್ಯಕರ ಜೀವನಶೈಲಿ ಸಂಬಂಧಿಸಿ ಬರಹ/ಅಂಕಣ ಬರಹಗಳು.

