ಉಡುಪಿ: ಅಯ್ಯಪ್ಪ ಭಕ್ತವೃಂದ ಅದಿ ಉಡುಪಿ ಬೈಪಾಸ್ (ರಿ.) ಇದರ ನೂತನ ಭಜನಾ ಮಂದಿರ ಹಾಗೂ ಸಬಾಭವನದ ಶಿಲಾನ್ಯಾಸ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ನಾಡೋಜ ಡಾ ಜಿ ಶಂಕರ್ ಇವರ ಮಾರ್ಗದರ್ಶನದಲ್ಲಿ ತಾ 24/04/2025 ನೇ ಆದಿತ್ಯವಾರದಂದು ಕರಾವಳಿ ಬೈಪಾಸ್ ನ ಪ್ರಜ್ವಲ್ ನಗರದಲ್ಲಿ ಜರುಗಿತು.
ಮುಖ್ಯ ಅಥಿತಿಗಳಾಗಿ ಗುರುಸ್ವಾಮಿಗಳಾದ ರಾಮಣ್ಣ ಗರಡಿ ಮಜಲು, ಸೋಮಯ್ಯ ಅಮೀನ್ ಹಾಗೂ ಕಾರ್ಯಕಾರಿ ಸಮಿತಿಯ ಅಧ್ಯಕ್ಷರುಗಳಾದ ಸುರೇಶ್ ಕೋಟ್ಯಾನ್, ಗೌರೀಶ್ ಕೋಟ್ಯಾನ್ ಉಪಾಧ್ಯಕ್ಷರುಗಳಾದ ಜಗದೀಶ್ ಕಾಂಚನ್, ಕೃಷ್ಣ ಅಂಬಲಪಾಡಿ ಕಾರ್ಯದರ್ಶಿಗಳಾದ ಅನಂತ್ ಕುಂದರ್, ಕೋಶಾಧಿಕಾರಿಗಳಾದ ರಾಘವೇಂದ್ರ ಪೂಜಾರಿ, ಕಾರ್ತಿಕ್, ದೀಪಕ್ ಮಲ್ಪೆ ಸಂಘಟಕರಾದ ಗಣೇಶ್ ಶೆಟ್ಟಿಗಾರ್, ಮಹೇಶ್ ಶೆಟ್ಟಿ ಪುಳಿಮಾರು ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.