ಮಂಗಳೂರು: ಮಂಗಳೂರು ಮೂಲದ ಆ್ಯಂಕರ್ ಅನುಶ್ರೀ ಮತ್ತು ರೋಷನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಹೊರ ವಲಯದ ಸಂಭ್ರಮ ಬೈ ಸ್ವಾಲೈನ್ಸ್ ಸ್ಟುಡಿಯೋದಲ್ಲಿಯೇ ಈ ಜೋಡಿ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಪ್ತರು ಮತ್ತು ಸ್ನೇಹಿತರ ಹಾಗೂ ಮನೆಯವರ ಸಮ್ಮುಖದಲ್ಲಿಯೇ ಈ ಜೋಡಿ ಮದ್ವೆ ಆಗಿದೆ. ಹಳದಿ ಶಾಸ್ತ್ರ ಸೇರಿದಂತೆ ಮದ್ವೆ ಎಲ್ಲ ಶಾಸ್ತ್ರಗಳೂ ನಡೆದಿವೆ. ಎಲ್ಲ ಶಾಸ್ತ್ರಗಳೊಂದಿಗೆ ಆಗಸ್ಟ್-28 ರಂದು ಬೆಳಗ್ಗೆ 10.56 ರ ಶುಭ ಮುಹೂರ್ತದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಅನುಶ್ರೀ-ರೋಷನ್ ಮ್ಯಾರೇಜ್ ಸ್ಟೋರಿ
ಅನುಶ್ರೀ ಮತ್ತು ರೋಷನ್ ಬಹು ದಿನಗಳ ಗೆಳೆಯರೇ ಆಗಿದ್ದರು. ಪರಸ್ಪರ ಪರಿಚಯ ಆಗಿರೋ ಈ ಜೋಡಿ ಇದೀಗ ದಾಂಪತ್ಯ ಜೀವನಕ್ಕೂ ಕಾಲಿಟ್ಟಿದ್ದಾರೆ. 10: 56 ನಿಮಿಷಕ್ಕೆ ಅನುಶ್ರೀಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ ರೋಷನ್. ಅನುಶ್ರೀ ,ರೋಷನ್ ಮದುವೆಗೆ ಕುಟುಂಬಸ್ಥರುಹಾಗೂ ಸ್ನೇಹಿತರು ಸಾಕ್ಷಿಯಾದರು. ಮಾಂಗಲ್ಯ ಕಟ್ಟೋ ವೇಳೆ ಕಣ್ಣೀರಾದರು ಅನುಶ್ರೀ.