ಮಂಗಳೂರು : ಕರ್ನಾಟಕ ಸರಕಾರದ ರಾಜ್ಯ ಆಗಮ ಶಿಕ್ಷಣ ಮತ್ತು ಪರೀಕ್ಷಾ ಸಮಿತಿ, ಹಿಂದೂ ಧಾರ್ಮಿಕ ಹಾಗೂ ಧರ್ಮದಾಯ ದತ್ತಿಗಳ ಇಲಾಖೆ ಇದರ ಆಗಮ ಘಟಿಕೋತ್ಸವ 2025 ಬೆಂಗಳೂರಿನ ಶ್ರೀ ಶೃಂಗೇರಿ ಶಾರದಾ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಏಳು ಆಗಮ ವಿಭಾಗಗಳ ಸುಮಾರು 2000 ವಿದ್ಯಾರ್ಥಿಗಳಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ 43 ವಿದ್ಯಾರ್ಥಿಗಳ ಪೈಕಿ ವಾತುಲಾಗಮ ಪ್ರವೀಣ ಪದವಿಯನ್ನು ಪೊಳಲಿ ಗಿರಿಪ್ರಕಾಶ್ ತಂತ್ರಿ ಯವರಿಗೆ ಕರ್ನಾಟಕ ಸರಕಾರದ ಮುಜರಾಯಿ ಮಂತ್ರಿಗಳಾದ ರಾಮಲಿಂಗ ರೆಡ್ಡಿ ಹಾಗೂ ಆಯುಕ್ತ ಡಾ.ವೆಂಕಟೇಶ ಎಂ.ವಿ (ಐಎಎಸ್), ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಮೊದಲಾದ ಗಣ್ಯರ ಉಪಸ್ಥಿತಿಯಲ್ಲಿ ಆಗಮ ಶಾಸ್ತ್ರ ಪ್ರಮಾಣ ಪತ್ರ, ಪದಕ ಹಾಗು ನಗದು ಬಹುಮಾನ ನೀಡಿ ಗೌರವಿಸಲಾಯಿತು. ಪೊಳಲಿ ಸದಾಶಿವ ತಂತ್ರಿಗಳ ಪುತ್ರರಾಗಿ ಗಿರಿ ಪ್ರಕಾಶ್ ತಂತ್ರಿಗಳಿಗಳು ಪುರೋಹಿತರು ಮತ್ತು ಜಿಲ್ಲಾ ಧಾರ್ಮಿಕ ಪರಿಷತ್ತಿನ ಮಾಜಿ ಸದಸ್ಯರು, ವಿವಿಧ ಬ್ರಾಹ್ಮಣ ಸಂಘಟನೆಗಳ ಪದಾಧಿಕಾರಿಗಳೂ ಸೇವೆ ಸಲ್ಲಿಸಿದ್ದಾರೆ.
ಪದವಿ ಪಡೆದ ಪೊಳಲಿ ಗಿರಿ ಪ್ರಕಾಶ್ ತಂತ್ರಿಗಳನ್ನು ಬೆಂಗಳೂರಿನ ಆಧ್ಯಾತ್ಮಿಕ ವಿಶ್ವಗುರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ,ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು, ಶ್ರೀಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕರಾದ ರಜನಿ ಸಿ ಭಟ್, ರಾಹುಲ್ ಚಂದ್ರಶೇಖರ್, ಸಂಚಾಲಕರಾದ ಪುನೀತ್ ಕೃಷ್ಣ
ಮತ್ತಿತರರು ಅಭಿನಂದಿಸಿದ್ದಾರೆ