ಬರಹಗಾರರಾಗಲು ವಯಸ್ಸು ಮುಖ್ಯವಲ್ಲ ಆಸಕ್ತಿ ಮುಖ್ಯ – ಹೆಚ್. ಎಸ್. ಪ್ರತಿಮಾ ಹಾಸನ್

0
94

 ಹಾಸನ ನಗರದ   ಹೇಮಾವತಿ ನಗರದಲ್ಲಿ ವಾಸವಾಗಿರುವ  ಸಾವಿತ್ರಿ ಬಿ ಗೌಡ ರವರನ್ನು  ” ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ’ದಿಂದ ಸನ್ಮಾನಿಸಿ ಗೌರವಿಸಲಾಯಿತು.

 ಇಳಿ ವಯಸ್ಸಿನಲ್ಲಿಯೂ ಸಹ ಬರವಣಿಗೆಯತ್ತ ಆಸಕ್ತಿ ಮೂಡಿಸಿಕೊಂಡು  ಎರಡು ವರ್ಷದಲ್ಲಿ ಒಂದು ಪುಸ್ತಕಗಳನ್ನು ಹೊರ ತಂದಿದ್ದು. ನಿಜವಾಗಿಯೂ  ಸಾಹಿತ್ಯದ ಬಗೆಗಿನ ಆಸಕ್ತಿಯನ್ನು ತೋರುತ್ತ ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದಲ್ಲಿ ತನ್ನದೇ ಆದ ಕಾರ್ಯ ತತ್ವತೆಯನ್ನ ಮಾಡಿದ್ದಾರೆ. ದಿನನಿತ್ಯ ವಾಟ್ಸಪ್ ಗ್ರೂಪ್ ಗಳಲ್ಲಿ  ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ  ಪ್ರಮಾಣ ಪತ್ರಗಳನ್ನು ಪಡೆದಿದ್ದಾರೆ .

 ಹಿರಿಯ ಜೀವವಾಗಿ  ಸಾಹಿತ್ಯದ ಒಲವನ್ನು ತೋರಿಸುತ್ತಿರುವುದು  ಯುವ ಪೀಳಿಗೆಗೆ ಮಾರ್ಗದರ್ಶನವಾಗಿದೆ. ಬರಹಗಾರರಿಗೆ  ವಯಸ್ಸು ಅಡ್ಡ ವಾಗದು ಆಸಕ್ತಿ ಮುಖ್ಯವಾಗಿರುತ್ತದೆ   ಎಂದು ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ  ಅಧ್ಯಕ್ಷರಾದ ಹೆಚ್. ಎಸ್. ಪ್ರತಿಮಾ ಹಾಸನ್ ತಿಳಿಸಿದರು.ನಂತರ ಬಹಳಷ್ಟು ಪ್ರಮಾಣಪತ್ರವನ್ನು ಪಡೆದಿರುವ ಇವರು ಬಹಳ ಆಸಕ್ತಿಯಿಂದ ಬರವಣಿಗೆಯಲ್ಲಿ ತೊಡಗಿದ್ದಾರೆ. ಇವರ ಈ ಸಾಧನೆಗೆ  ಪ್ರತಿಮಾ ಸಾಮಾಜಿಕ ಸಾಂಸ್ಕೃತಿಗೆ ಅಭಿವೃದ್ಧಿ ಪ್ರತಿಷ್ಠಾನದಿಂದ  ಇವರ ಪ್ರತಿಭೆಯನ್ನು ಗುರುತಿಸಿ  ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದು ಲೇಖಕರು ಸೀತಮ್ಮ ಮಾಳಟ್ಟಿರವರು ತಿಳಿಸಿದರು.

 ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಾದ  ಅನಿತಾ ರವರು, ಹಾಗೂ ಶಾರದಮ್ಮ ರವರು  ಇನ್ನು ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here