ಅಹಮದಾಬಾದ್ : ಆಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ಆಗುವಾಗ 260 ಜೀವಗಳನ್ನು ಬಲಿ ಪಡೆದ ಏರ್ ಇಂಡಿಯಾ ಬೋಯಿಂಗ್ 787 ಅಪಘಾತ ಬಗ್ಗೆ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಪ್ರಾಥಮಿಕ ವರದಿ ಸಲ್ಲಿಸಿದೆ. ಇದಾದ ಬಳಿಕ ಈ ವಿಮಾನ ದುರಂತ ಒಂದಷ್ಟು ಗೊಂದಲ, ಅನುಮಾನಗಳು ಕಾಡುವಂತಾಗಿದೆ. ಏಕೆಂದರೆ ವರದಿಯಲ್ಲಿ ಇಂಧನ ಸ್ವಿಚ್‌ಗಳ ಕುರಿತು ಉಲ್ಲೇಖಿಸಿದೆ. ಈ ದುರಂತಕ್ಕೆ ಯಾಂತ್ರಿಕ ವೈಫಲ್ಯವೋ, ಪೈಲಟ್ ದೋಷವೋ ಅಥವಾ ಉದ್ದೇಶಪೂರ್ವಕ ಕೃತ್ಯವೋ? ಎಂದು ಯೋಚಿಸುವಂತಾಗಿದೆ.
ಬೋಯಿಂಗ್ 787 ವಿಮಾನದಲ್ಲಿ ಇಂಧನ ಸ್ವಿಚ್ ನಲ್ಲಿ ತಾಂತ್ರಿಕ ಸಮಸ್ಯೆ ಪತ್ತೆಯದ ಬಳಿಕ ಅದನ್ನು ಬದಲಿಸುವಂತೆ ಅಮೆರಿಕಾದ ಫೆಡರಲ್ ವಿಮಾನ ಸಂಸ್ಥೆ 2018ರಲ್ಲಿ ತಿಳಿಸಿತ್ತು. ಹೀಗಿದ್ದಾಗ ಪತನಗೊಂಡ ಏರ್ ಇಂಡಿಯಾ ವಿಮಾನದಲ್ಲಿ ಅವುಗಳೇ ಬಳಕೆ ಆಗಿದ್ದು ಗೊತ್ತಾಗಿದೆ. ಹಾಗಾದರೆ ಆ ಇಂಧನ ಸ್ವಿಚ್ಚ ಸರಿಯಾಗಿ ಇತ್ತೆ ಎಂಬುದು ಏರ್ ಇಂಡಿಯಾ ಪರಿಶೀಲಿಸಿಲ್ಲ ಎಂದು AAIB ವರದಿಯಲ್ಲಿ ತಿಳಿಸಿದೆ. ವಿಮಾನದ ಎಂಜಿನ್‌ಗಳನ್ನು ಸ್ಥಗಿತಗೊಳಿಸಲು ಬಳಸುವ ನಿರ್ಣಾಯಕ ಘಟಕಗಳಾದ ಇಂಧನ ಸ್ವಿಚ್‌ಗಳು ಕ್ಷಣಿಕವಾಗಿ ಚಲಿಸಿದ್ದು, ಅವು ಏನನ್ನು ಪ್ರಚೋಸಿದಿದವು ಎಂಬ ಸ್ಪಷ್ಟತೆ ಇಲ್ಲ. ಹೀಗಾಗಿ ಕೆಲವು ಅನುಮಾನಗಳು ಮೂಡಿವೆ. AAIB ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR) ನಿಂದ ಒಂದು ರಹಸ್ಯ ಬಿಚ್ಚಿಟ್ಟಿದೆ. ಅದೇನೆಂದರೆ ಒಬ್ಬ ಸಹ ಪೈಲಟ್ ಗೆ, ಸ್ವಿಚ್ ಇಂಧನ ಸ್ವಿಚ್‌ಗಳನ್ನು ಏಕೆ ಲಾಕ್ ಸ್ಥಿತಿಯಲ್ಲಿ ಇದ್ದವು ಎಂದು ಕೇಳಿದರೆ ಅವರು ಲಾಕ್ ಮಾಡಿರಲಿಲ್ಲ ಎಂದು ತಿಳಿಸಿದ್ದರು. ಕ್ಯಾಪ್ಟನ್ ಮೇಲ್ವಿಚಾರಣೆ ಮಾಡುತ್ತಿದ್ದಾಗ ಸಹ-ಪೈಲಟ್ ಮುಖ್ಯ ಪೈಲಟ್ ಹೇಳಿದ್ದನ್ನು ಕೇಳುತ್ತಿದ್ದರು ಎನ್ನಲಾಗಿದೆ.
ಈ ಇಂಧನ ಸ್ವಿಚ್ ಅನ್ನು ಉದ್ದೇಶ ಪೂರ್ವಕವಾಗಿಯೇ ತಿರುಗಿಸಿದರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಇದೆಲ್ಲ ವರದಿಯಲ್ಲಿ ವಿವರಿಸಲಾಗಿದೆ. ವಿಮಾನ ತಯಾರಕ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವ ಅಗತ್ಯವಿಲ್ಲ ಎಂದು AAIB ವರದಿಯು ತಿಳಿಸಿದೆ. ಕನಿಷ್ಠ ಸಾರ್ವಜನಿಕ ದೃಷ್ಟಿಯಿಂದ ವಿಮಾನ ಸಿಬ್ಬಂದಿಯ ದೋಷ ಪರಿಶೀಲಿಸಬೇಕಿತ್ತು. ಅದು ಆಗಿಲ್ಲ. ಇಂಧನ ಸ್ವಿಚ್ ಬಗ್ಗೆ ಪೈಲಟ್‌ಗಳಿಂದ ಉತ್ತರ ಸಿಕ್ಕಿಲ್ಲ. ಪೈಲಟ್‌ಗಳ ಮಧ್ಯ ಉತ್ತಮ ಸಂವಹನ ಕೊರತೆ ಇಲ್ಲೇ ತಪ್ಪು ತಿಳುವಳಿಕೆ ಆಯಿತಾ? ಇಬ್ಬರು ಪೈಲಟ್‌ನಲ್ಲಿ ಒಬ್ಬರು ಇಂಧನ ಸ್ವಿಚ ಸ್ಥಗಿತಗೊಳಿಸದೇ ಇದ್ಧದ್ದು, ಎರಡೂ ಎಂಜಿನ್‌ಗಳು ಟೇಕ್ ಆಫ್ ಆದ ಬಳಿಕ ಸ್ಥಗಿತಗೊಂಡವು, ಅವುಗಳನ್ನು ಮತ್ತೆ ಚಾಲನೆಗೆ ತೆಗೆದುಕೊಳ್ಳುವಲ್ಲಿ ವಿಫಲವಾಯಿತಾ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ ಎಂದು ವರದಿಯಿಂದ ತಿಳಿದು ಬಂದಿದೆ.
ವರದಿಯಲ್ಲಿ ನಿರ್ಣಾಯಕ ಮಾಹಿತಿ ನೀಡುವಲ್ಲಿ ವಿಫಲವಾಗಿದೆ. ಕೇವಲ ಹತ್ತು ಸೆಕೆಂಡ್‌ಗಳ ಅಂತದಲ್ಲಿ ಏನಾಯಿತು ಎಂಬುದು ಗೊತ್ತಾಗಬೇಕು. ಡಿಜಿಸಿಎ ಈಗ ಸುಮಾರು 10-ಸೆಕೆಂಡ್‌ಗಳ ನಿಗೂಢತೆಯ ಮೇಲೆಯೂ ಗಮನಹರಿಸಬೇಕಿದೆ.