ಮಹಾವೀರ ಕಾಲೇಜಿನಲ್ಲಿ ಎಐ ಮತ್ತುಕೋಡಿಂಗ್ ಬೂಟ್ ಶಿಬಿರ

0
121

ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನಲ್ಲಿ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಶಾಲಾ ಶಿಕ್ಷಣ ಇಲಾಖೆಸಹಯೋಗದಲ್ಲಿ, ಪ್ರೌಢ ಶಾಲೆ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ವಿಶೇಷ ಎಐ ಮತ್ತುಕೋಡಿಂಗ್ ಬೂಟ್ ಶಿಬಿರ ಸೆಪ್ಟೆಂಬರ್ 22 ರಿಂದ 27 ರತನಕ ನಡೆಯಲಿದೆ. ಈ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್‌ ಗುಂಡುರಾವ್‌ ಉದ್ಘಾಟಿಸಲಿದ್ದಾರೆ.

ಮಾಹೆ ಪ್ರೊಚಾನ್ಸಲರ್ ಹಾಗೂ ಅಕಾಡೆಮಿ & ಜನರಲ್‌ಎಜುಕೇಶನ್‌ಅಧ್ಯಕ್ಷಡಾ.ಹೆಚ್.ಎಸ್. ಬಲ್ಲಾಳ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸೆಪ್ಟೆಂಬರ್ 27 ರಂದು ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ವಿಭಾಗದ ಶಿಕ್ಷಕರಿಗಾಗಿ ವಿಶೇಷ ಕಾರ್ಯಾಗಾರ ನಡೆಯಲಿದೆ. ಈ ಬೂಟ್ ಶಿಬಿರದ ಉದ್ದೇಶವು ವಿದ್ಯಾರ್ಥಿಗಳಿಗೆ ಕೃತಕ ಬುದ್ದಿಮತ್ತೆ ಮತ್ತು ಕೋಡಿಂಗ್‌ ಕ್ಷೇತ್ರದಲ್ಲಿ ಅನುಭವಾತ್ಮಕಜ್ಞಾನ ನೀಡುವುದರೊಂದಿಗೆ ಅವರ ಭವಿಷ್ಯದ ಶೈಕ್ಷಣಿಕ ಮತ್ತು ವೃತ್ತಿಜೀವನ ಕ್ಕೆದೃಢವಾದ ಅಡಿಪಾಯವನ್ನು ಕಲ್ಪಿಸುವುದಾಗಿದೆ ಎಂಬುದಾಗಿ ಶ್ರೀ ಮಹಾವೀರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಕೆ. ಅಭಯಚಂದ್ರ ಜೈನ್‌ ಪ್ರಕಟಣೆಯಲ್ಲಿ ತಿಳಿಸಿದರು.

LEAVE A REPLY

Please enter your comment!
Please enter your name here