ಅನುದಾನಿತ ಕಳುವಾರು ಹಿರಿಯ ಪ್ರಾಥಮಿಕ ಶಾಲೆ ಚೇಳಾರು ಮತ್ತು ಕಳುವಾರು ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆ ಚೇಳಾರು ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ, ಅನುದಾನಿತ ಕಳುವಾರು ಹಿರಿಯ ಪ್ರಾಥಮಿಕ ಶಾಲೆ ಮತ್ತು ಕಳುವಾರು ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆ, ಚೇಳಾರು ಇದರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 21.06.2025, ಶನಿವಾರದಂದು ಯೋಗ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ವಿಶೇಷ ಕಾರ್ಯಕ್ರಮಕ್ಕೆ ಶ್ರೀಮತಿ ರೇಖಾ ಸಂತೋಷ್ ಕಾಣೆಮಾರ್, ಯೋಗ ಶಿಕ್ಷಕಿ, ಮಂಗಳೂರು ಇವರಿಂದ ಕಾರ್ಯಕ್ರಮ ಪ್ರಾತ್ಯಕ್ಷಿಕತೆಯೊಂದಿಗೆ ಆಯೋಜಿಸಲಾಗಿತ್ತು. ಅವರು ಯೋಗದ ಮಹತ್ವ ಮತ್ತು ಆರೋಗ್ಯದ ಮೇಲೆ ಅದರ ಪರಿಣಾಮಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ನಂತರ, ಒಂದು ಗಂಟೆಯ ಅವಧಿಯಲ್ಲಿ ಯೋಗಾಭ್ಯಾಸವನ್ನು ಮಾಡಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಪದಾಧಿಕಾರಿಗಳು, ಹೆತ್ತವರು, ಶಿಕ್ಷಕಿಯರು, ಉಪಸ್ಥಿತರಿದ್ದರು.