ಐಕಳ ಕಂಬಳೋತ್ಸವಕ್ಕೆ ಚಾಲನೆ

0
14

ಕಂಬಳ ತುಳುನಾಡಿನ ಸಂಸ್ಕಾರ ಹಾಗೂ ಸಂಸ್ಕೃತಿಯ ಪ್ರತೀಕ : ಒರಿಸ್ಸಾ ಹೈಕೋರ್ಟ್ ನ್ಯಾಯಮೂರ್ತಿ ಜಸ್ಟೀಸ್ ಕೃಷ್ಣ ದೀಕ್ಷಿತ್ ಶ್ರೀಪಾದ

ಮುಲ್ಕಿ : ಕಂಬಳ ತುಳುನಾಡಿನ ಸಂಸ್ಕಾರ ಹಾಗೂ ಸಂಸ್ಕೃತಿಯ ಪ್ರತೀಕವಾಗಿದ್ದು ಪಶು ಮತ್ತು ಮಾನವನ ನಡುವಿನ ಅವಿನಾಭಾವದ ಸಂಬಂಧ ತೋರಿಸುತ್ತದೆ ಎಂದು ಒರಿಸ್ಸಾ ಹೈಕೋರ್ಟ್ ನ್ಯಾಯಮೂರ್ತಿ ಜಸ್ಟೀಸ್ ಕೃಷ್ಣ ದೀಕ್ಷಿತ್ ಶ್ರೀಪಾದ್ ಹೇಳಿದರು. ಅವರು ತುಳುನಾಡಿನ ಸಮೃದ್ಧ ಆಧ್ಯಾತ್ಮಿಕ ಮತ್ತು ವೈಭವೋಪೇತ ಧಾರ್ಮಿಕ ಹಿನ್ನೆಲೆಯನ್ನು ಹೊತ್ತ, ಕರಾವಳಿಯ ಕಾರ್ಣಿಕ ಪುರುಷರಾದ ಕಾಂತಾಬಾರೆ–ಬೂದಾಬಾರೆ ನಾಮಾಂಕಿತ, ಇತಿಹಾಸ ಪ್ರಸಿದ್ಧ ಐಕಳ ಕಂಬಳೋತ್ಸವ ಹಾಗೂ ಐಕಳೋತ್ಸವದ ಸುವರ್ಣ ಸಂಭ್ರಮದ ಸಂದರ್ಭ ಕಂಬಳದ ಕರೆಯನ್ನು ಉದ್ಘಾಟಿಸಿ ಮಾತನಾಡಿದರು.

ಬೆಂಗಳೂರಿನ ಆಧ್ಯಾತ್ಮಿಕ ವಿಶ್ವಗುರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿಯವರು ಐಕಳ ಕಂಬಳೋತ್ಸವ ಹಾಗೂ ಐಕಳೋತ್ಸವದ ಸುವರ್ಣ ಸಂಭ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐಕಳ ಬಾವ ಕುಟುಂಬ ಕಡೆ ಕ್ಷೇಮಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷ ಡಾ. ಕೆ ಪಿಕೆ ಹೆಗ್ಡೆ ವಹಿಸಿದ್ದರು. ಏಳಿಂಜೆ ದೇವಸ್ಥಾನದ ಅರ್ಚಕರಾದ ಗಣೇಶ್‌ ಭಟ್ ಹಾಗೂ ವರುಣ್ ಭಟ್ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕಟೀಲು ಕ್ಷೇತ್ರದ ಅರ್ಚಕ ವೇದಮೂರ್ತಿ ಕಮಲಾದೇವಿ ಪ್ರಸಾದ್ ಅಸ್ರಣ್ಣ, ಕಿರೆಂ ರೆಮೆದಿ ಅಮ್ಮನವರ ದೇವಾಲಯದ ಪ್ರಧಾನ ಧರ್ಮ ಗುರು ರೆ. ಫಾ. ಒಸ್ವಾಲ್ಡ್‌ ಮೊಂತೆರೋ ಆಶೀರ್ವಚನ ನೀಡಿದರು.

ಮುಖ್ಯ ಅತಿಥಿಗಳಾಗಿ, ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಐಕಳ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಚೌಟ, ಯೋಗಿನಿ ಕೃಷ್ಣ ದೀಕ್ಷಿತ್,ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕರಾದ ರಜನಿ ಸಿ ಭಟ್,ರಾಹುಲ್ ಚಂದ್ರಶೇಖರ್, ಹೈಕೋರ್ಟ್ ವಕೀಲರಾದ ರಾಘವ ಸೂರ್ಯ, ಸಂಚಾಲಕ ಪುನೀತ್ ಕೃಷ್ಣ, ಉದ್ಯಮಿ ವಚನ್ ಜಿ ಶೆಟ್ಟಿ, ತಿಲಕ್ ರಾಜ್ ಶೆಟ್ಟಿ,ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್‌ ಕುಮಾ‌ರ್ ಶೆಟ್ಟಿ, ಕಂಬಳ ಸಮಿತಿಯ ಅಧ್ಯಕ್ಷ ಐಕಳ ಬಾವ ಡಾ ದೇವಿ ಪ್ರಸಾದ್‌ ಶೆಟ್ಟಿ, ಮುಂಬೈ ಸಮಿತಿ ಅಧ್ಯಕ್ಷ ಕುಶಲ್ ಭಂಡಾರಿ ಐಕಳ ಬಾವ ಕಾರ್ಯಾಧ್ಯಕ್ಷ ಚಿತ್ತರಂಜನ್ ಭಂಡಾರಿ ಐಕಳ ಬಾವ, ಪ್ರಮೋದ್‌ ಶೆಟ್ಟಿ ಐಕಳ ಬಾವ, ಕೃಷ್ಣ ಮಾರ್ಲ, ಸಂಚಾಲಕ ಮುರಳಿಧರ ಶೆಟ್ಟಿ ಐಕಳಬಾವ, ಪ್ರಧಾನ ಕಾರ್ಯದರ್ಶಿ ಸ್ವರಾಜ್ ಶೆಟ್ಟಿ ಮುಂಡೂರು ದೊಡ್ಡಮನೆ, ಕೋಶಾಧಿಕಾರಿ ಪ್ರಕಾಶ್‌ ಶೆಟ್ಟಿ ಪಡುಹಿತ್ಲು, ಜೊತೆ ಕೋಶಾಧಿಕಾರಿ ಶರತ್ ಶೆಟ್ಟಿ ಸ್ಥಳಂತಗುತ್ತು, ಸಂಜೀವ ಶೆಟ್ಟಿ ಸ್ಥಳಂತಗುತ್ತು, ಲೀಲಾಧರ ಶೆಟ್ಟಿ ಐಕಳ, ದೇವಿ ದಾಸ್ ಶೆಟ್ಟಿ ಶ್ರೀಕಲ್ಪ , ಹರೀಶ್ ಶೆಟ್ಟಿ ತಾಮಣಿಗುತ್ತು, ಸುಕುಮಾ‌ರ್ ಭಂಡಾರಿ ಐಕಳ ಬಾವ, ದಯೇಶ್ ಕೋಟ್ಯಾನ್,ಕೆ ಭುವನಾಭಿರಾಮ ಉಡುಪ, ಸೌರಭ್ ಕೃಷ್ಣ ಶೆಟ್ಟಿ, ಸೂರಜ್ ಶೆಟ್ಟಿ, ವೇಣು ವಿನೋದ್‌ ಶೆಟ್ಟಿ, ವಸಂತ ಶೆಟ್ಟಿ ಪಲಿಮಾರು, ಸುಗಂಧಿ ಕೊಂಡಾಣ, ಶೇಖರ ಶೆಟ್ಟಿ, ರವೀಂದ್ರ ಶೆಟ್ಟಿ, ಪ್ರೇಮ್ ದೋಗಣ್ಣ ಶೆಟ್ಟಿ, ಕೃಷ್ಣ ಮಾರ್ಲ, ಪ್ರದೀಪ್ ರೈ ಐಕಳ ಭಾವ ವಾಮನ್ ಸಾಲ್ಯಾನ್, ರತ್ನಾಕರ, ಕೃಷ್ಣ ಮಾರ್ಲ, ವಾಮನ್ ಸಾಲ್ಯಾನ್, ರತ್ನಾಕರ ಶೆಟ್ಟಿ, ಬಾಸ್ಕರ ಶೆಟ್ಟಿ ಏಳಿಂಜೆ ಬಂಕಡೆಬಾವ, ತಾರಾನಾಥ ಶೆಟ್ಟಿ ಐಕಳ, ಸುಧಾಮ ಶೆಟ್ಟಿ ಐಕಳ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಚಂದ್ರಶೇಖರ ಸ್ವಾಮೀಜಿ ಹಾಗೂ ರಜನಿ ಸಿ ಭಟ್, ಅರ್ಚಕ ಗಣೇಶ್ ಭಟ್ ರವರನ್ನು ಕಂಬಳ ಸಮಿತಿ ವತಿಯಿಂದ ಸನ್ಮಾನಿಸಲಾಯಿತು ಹಾಗೂ ದ.ಕ. ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಡಾ. ದೇವಿ ಪ್ರಸಾದ್‌ ಶೆಟ್ಟಿ ರವರನ್ನು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ವಿಶೇಷವಾಗಿ ಗೌರವಿಸಿದರು. ಕಂಬಳ ಸಮಿತಿ ಅಧ್ಯಕ್ಷ ಡಾ,ದೇವಿ ಪ್ರಸಾದ್ ಶೆಟ್ಟಿ ಪ್ರಸ್ತಾವನೆಗೈದು ಸ್ವಾಗತಿಸಿದರು, ಸಾಯಿನಾಥ ಶೆಟ್ಟಿ, ಶ್ರೀಶ ಸರಾಫ್‌ ಐಕಳ ,ಶರತ್ ಶೆಟ್ಟಿ ನಿರೂಪಿಸಿದರು ಬಳಿಕ ಕಂಬಳ ಕ್ರೀಡಾಕೂಟ ನಡೆಯಿತು.



ಬೆಂಗಳೂರಿನ ಆಧ್ಯಾತ್ಮಿಕ ವಿಶ್ವಗುರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಮಾತನಾಡಿ ಕಂಬಳ ಎಂಬುದು ಕೇವಲ ಒಂದು ಜಾನಪದ ಕ್ರೀಡೆ ಅಥವಾ ಸಂಸ್ಕೃತಿ ಪರಂಪರೆ ಮಾತ್ರವಲ್ಲ; ಅದು ತುಳುನಾಡಿನ ಜೀವನಾಡಿ, ಕರಾವಳಿಯ ಮಣ್ಣಿನ ಮಮತೆ, ಜನಮನದ ಸ್ವಾಭಿಮಾನ ಮತ್ತು ಅಳಿಯದ ಪರಂಪರೆಯ ಪ್ರತಿಬಿಂಬ ಎಂದು ಆಧ್ಯಾತ್ಮಗುರು, ವೈಜ್ಞಾನಿಕ ಜ್ಯೋತಿಷಿ ಹಾಗೂ ಅಂತಾರಾಷ್ಟ್ರೀಯ ವಾಸ್ತುತಜ್ಞರಾದ ಶ್ರೀಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.

ತುಳುನಾಡಿನ ಸಮೃದ್ಧ ಆಧ್ಯಾತ್ಮಿಕ ಮತ್ತು ವೈಭವೋಪೇತ ಧಾರ್ಮಿಕ ಹಿನ್ನೆಲೆಯನ್ನು ಹೊತ್ತ, ಕರಾವಳಿಯ ಕಾರ್ಣಿಕ ಪುರುಷರಾದ ಕಾಂತಾಬಾರೆ–ಬೂದಾಬಾರೆ ನಾಮಾಂಕಿತ, ಇತಿಹಾಸ ಪ್ರಸಿದ್ಧ ಐಕಳ ಕಂಬಳೋತ್ಸವ ಹಾಗೂ ಐಕಳೋತ್ಸವದ ಸುವರ್ಣ ಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಂಬಳದ ಹಿಂದೆ ಅಡಗಿರುವ ಮೌಲ್ಯಗಳು, ವೈವಿಧ್ಯತೆ, ಸಂಸ್ಕೃತಿಯ ಶ್ರೀಮಂತಿಕೆ ಹಾಗೂ ಆಳವಾದ ಧಾರ್ಮಿಕ ನಂಬಿಕೆಗಳು ಕಂಬಳವನ್ನು ತುಳುನಾಡಿನ ಹೆಮ್ಮೆ ಮತ್ತು ಗೌರವದ ಶಿಖರಕ್ಕೆ ಏರಿಸಿವೆ ಎಂದರು. ಜಾತಿ–ಮತ–ಧರ್ಮಗಳ ಎಲ್ಲ ಗಡಿಗಳನ್ನು ಮೀರಿ, ಸೌಹಾರ್ದತೆಯ ಹರಿವಿನಂತೆ ಬೆಳೆದಿರುವ ಕಂಬಳವು ಸಮಾನತೆ ಮತ್ತು ಸಹಬಾಳ್ವೆಯ ಜೀವಂತ ಸಂಕೇತವಾಗಿದೆ ಎಂದು ಹೇಳಿದರು.

ಕರಾವಳಿ ಗಾಳಿಯ ಸುಗಂಧ, ಸಮುದ್ರದ ಮರ್ಮರ, ಗದ್ದೆಗಳ ತೇವ ಮಣ್ಣಿನ ಸ್ಪರ್ಶ, ದೇವರ ಭಕ್ತಿ ಮತ್ತು ಜನರ ಭಾವನೆಗಳ ಒಟ್ಟುಗೂಡುವಿಕೆ – ಈ ಎಲ್ಲವುಗಳು ಕಂಬಳದ ಹೃದಯಸ್ಪಂದನವಾಗಿದೆ. ಕಂಬಳವು ಕರಾವಳಿಯ ಗದ್ದೆಗಳಲ್ಲಿ ಮಾತ್ರವಲ್ಲ, ತುಳುನಾಡಿನ ಪ್ರತಿಯೊಬ್ಬರ ಹೃದಯದಲ್ಲಿ ಜೀವಂತವಾಗಿ ಉಳಿದಿರುವ ಸಂಸ್ಕೃತಿ ಹಬ್ಬವಾಗಿದೆ. ಇದು ಕೇವಲ ಓಟವಲ್ಲ; ಪೀಳಿಗೆಗಳಿಂದ ಪೀಳಿಗೆಗಳಿಗೆ ಹರಿದುಬಂದ ಪರಂಪರೆ, ರೈತರ ಶ್ರಮಕ್ಕೆ ಗೌರವ ಸಲ್ಲಿಸುವ ಹಬ್ಬ, ಮನುಷ್ಯ ಮತ್ತು ಪ್ರಕೃತಿಯ ಅಳಿಯದ ಬಂಧದ ಉತ್ಸವವಾಗಿದೆ ಎಂದರು.

ಕಂಬಳವು ಕರಾವಳಿ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರದೆ ರಾಜ್ಯದ ಪ್ರವಾಸೋದ್ಯಮ ನಕ್ಷೆಯಲ್ಲಿ ಕಂಗೊಳಿಸಬೇಕು ಎಂಬ ಆಶಯವನ್ನು ಸಾಕಾರಗೊಳಿಸುವ ದಿಕ್ಕಿನಲ್ಲಿ ಡಾ. ದೇವಿಪ್ರಸಾದ್ ಶೆಟ್ಟಿ ಅವರ ನೇತೃತ್ವದ ಕಂಬಳ ಸಮಿತಿಯು ಮೊಟ್ಟಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಂಬಳವನ್ನು ಆಯೋಜಿಸುವ ಮೂಲಕ ಈ ಸಂಸ್ಕೃತಿಗೆ ಹೊಸ ದಿಕ್ಕು ಮತ್ತು ಹೊಸ ಆಯಾಮವನ್ನು ನೀಡಿದೆ. ತುಳುನಾಡಿನ ಪರಂಪರೆಯನ್ನು ಜಗತ್ತಿನ ಮುಂದೆ ಪರಿಚಯಿಸುವ ಈ ಹೆಜ್ಜೆ ಹೆಮ್ಮೆಯ ವಿಚಾರವಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಕಂಬಳವು ಕೇವಲ ಜಾನಪದ ಕ್ರೀಡೆ ಅಲ್ಲ; ಅದು ಕರಾವಳಿಯ ಮಣ್ಣಿನ ಹಬ್ಬ, ಅಭಿಮಾನದ ಮತ್ತು ಸ್ವಾಭಿಮಾನದ ಜೀವಂತ ಪ್ರತೀಕ. ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಅಳಿಯದ ಸ್ನೇಹಬಂಧದ ದೈವೀ ರೂಪವೇ ಕಂಬಳ. ಇಲ್ಲಿ ಕೋಣಗಳನ್ನು ಕುಟುಂಬದ ಸದಸ್ಯರಿಗಿಂತಲೂ ಹೆಚ್ಚು ಪ್ರೀತಿಯಿಂದ ಸಾಕಿ, ಸಂಭ್ರಮದಿಂದ ಆರೈಕೆ ಮಾಡಲಾಗುತ್ತದೆ. ಅವು ಕೇವಲ ಓಟದ ಭಾಗಿಗಳಲ್ಲ; ಮನೆತನದ ಹೆಮ್ಮೆ, ಸಂಸ್ಕೃತಿಯ ಕಾವಲುಗಾರರು, ರೈತರ ಜೀವನದ ಸಹಚರರು ಎಂದು ಶ್ರೀಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.

LEAVE A REPLY

Please enter your comment!
Please enter your name here