ಬೆಳ್ತಂಗಡಿ: ತಾಲೂಕಿನ ಬಾರ್ಯ ಗ್ರಾಮದ ನಿವಾಸಿ ಅಜಯ್ ಜೋಹಾನ್ ಬ್ರಾಗ್ಸ್, ಇವರು SSB ಸಂದರ್ಶನದಲ್ಲಿ ಉತ್ತೀರ್ಣಗೊಂಡು ಭಾರತೀಯ ನೌಕಾಪಡೆಗೆ ಆಯ್ಕೆಯಾಗಿದ್ದಾರೆ.
ಇದೆ ಜುಲೈ 14 ರಂದು ಕಾರ್ಯನಿರ್ವಾಹಕ ಶಾಖೆ (ಸಾಮಾನ್ಯ ಸೇವೆ) ಗಾಗಿ ಎಜಿಮಲಾದ ಭಾರತೀಯ ನೌಕಾ ಅಕಾಡೆಮಿಗೆ ಸೇರಲಿರುವ ಇವರು ಇಂದು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಶಾಸಕರು ಅವರನ್ನು ಅಭಿನಂದಿಸಿದರು.